20 ನಿಮಿಷ ಧೈರ್ಯ ತೆಗೆದುಕೊಂಡು ಕ್ಲಿಫ್ ಡೈವ್, ಗೋವಾದಲ್ಲಿ ನಟಿಯ ಎದೆ ಝಲ್ಲೆನಿಸುವ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಕಲ್ಲು ಬಂಡೆಗಳ ಮೇಲಿನಿಂದ ಕ್ಲಿಫ್ ಡೈವ್ ಮಾಡಿರುವ ನಟಿ ಹಲವರ ಹುಬ್ಬೇರಿಸಿದ್ದಾರೆ. ಈ ವಿಡಿಯೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಗೋವಾ (ಜ.08) ನಟಿಯರು ಸ್ವಿಮ್ಮಿಂಗ್ ಪೂಲ್, ರೆಸಾರ್ಟ್, ಸ್ಪಾಗಳಲ್ಲಿ ಮಸ್ತಿ ಮಾಡುವು ವಿಡಿಯೋ ಹಲವು ಬಾರಿ ವೈರಲ್ ಆಗಿದೆ. ಆದರೆ ಈ ನಟಿ ಕಲ್ಲು ಬೆಟ್ಟಗಳ ಮೇಲೆ ಬರೋಬ್ಬರಿ 20 ನಿಮಿಷ ಟ್ರೆಕ್ ಮಾಡಿ ಹತ್ತಿದ್ದಾರೆ. ಬಳಿಕ ತುದಿಯಿಂದ ಕ್ಲಿಫ್ ಡೈವ್ ಮೂಲಕ ನೀರಿಗೆ ಜಂಪ್ ಮಾಡಿದ್ದಾರೆ. ಯಶಸ್ವಿಯಾಗಿ ಕ್ಲಿಫ್ ಡೈವ್ ಮಾಡಿರುವ ಈ ನಟಿ ಫಾತಿಮಾ ಸನಾ ಶೇಕ್. ಗೋವಾದಲ್ಲಿ ಫಾತಿಮಾ ಸನಾ ಶೇಕ್ ಈ ಮಸ್ತಿ ಮಾಡಿದ್ದಾರೆ. ಇದೀಗ ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಎದೆ ಝಲ್ಲೆನಿಸುವ ವಿಡಿಯೋವನ್ನು ನಟಿ ಪೋಸ್ಟ್ ಮಾಡಿದ್ದಾರೆ.
ಗೋವಾ ಫಾಲ್ಸ್‌ನಲ್ಲಿ ನಟಿ ಕ್ಲಿಫ್ ಡೈವಿಂಗ್
ಫಾತಿಮಾ ಸನಾ ಶೇಕ್ ಇತ್ತೀಚೆಗೆ ಹೊಸ ವರ್ಷ ಸಂಭ್ರಮಾಚರಣೆಗೆ ಗೋವಾಗೆ ತೆರಳಿದ್ದರು. ಗೋವಾ ಬೀಚ್ ಟೂರಿಸಂ ಜೊತೆಗೆ ಅದ್ಭುತ ಪ್ರವಾಸಿ ತಾಣಗಳ ರಾಜ್ಯ. ಇಲ್ಲಿ ಅಡ್ವೆಂಚರ್ ಟೂರಿಸಂ, ಟ್ರೆಕ್ಕಿಂಗ್, ಫಾಲ್ಸ್ ಸೇರಿದಂತೆ ಹಲವು ಪ್ರೇಕ್ಷಣಿಯ ಸ್ಥಳಗಳಿವೆ. ಈ ಪೈಕಿ ಫಾತಿಮಾ ಸನಾ ಶೇಕ್ ಫಾಲ್ಸ್‌ಗೆ ತೆರಳಿ ಕ್ಲಿಫ್ ಡೈವಿಂಗ್ ಮಾಡಿದ್ದಾರೆ.
ಕ್ಲಿಫ್ ಡೈವ್ ಮಾಡಲು ಕಲ್ಲು ಬೆಟ್ಟಗಳ ಮೇಲೆ ಹತ್ತಿ 20 ನಿಮಿಷ ನಿಂತು ಧೈರ್ಯತೆಗೆದುಕೊಂಡು ಜಂಪ್ ಮಾಡಿದ್ದೇನೆ. ಬಳಿಕ ಕ್ಲಿಫ್ ಡೈವ್ ಮಾಡಿದ್ದಾನೆ. ಆದರೆ ಜಂಪ್ ಮಾಡಿ ನಾನು ಯಾವಾಗ ಗಾಳಿಯಲ್ಲಿದ್ದೇನು, ಆಗ ಮೇಲಿನಿಂದ ಕೆಳಗಿರುವ ಆಳ, ನೀರಿಗೆ ತಲುಪ ಸಮಯ ಸುದೀರ್ಘ ಎಂದು ಎನಿಸಿತ್ತು. ನೀರಿಗೆ ಜಂಪ್ ಮಾಡಿ ಮುಳುಗುತ್ತಿದ್ದಂತೆ ಹೊಟ್ಟೆ ಭಾರವಾಗಿ ಗೊಂದಲಗಳು ಸೃಷ್ಟಿಯಾಗಿತ್ತು. ಮೊದಲ ಜಂಪ್ ನಿಜಕ್ಕೂ ಭಯ ಹುಟ್ಟಿಸಿತ್ತು. ಮೇಲೆ ನಿಂತು ಜಂಪ್ ಮಾಡಬೇಕು ಎಂದು ಧೈರ್ಯ ಮಾಡಿದ ಕ್ಷಣದಿಂದ ನೀರಿನಲ್ಲಿ ಮುಳುಗಿ ಮೇಲೆ ಬರುವವರೆಗೂ ಭಯವಾಗಿತ್ತು. ಆದರೆ ಒಮ್ಮೆ ಕ್ಲಿಫ್ ಡೈವ್ ಮಾಡಿದ ಬಳಿಕ ಭಯ ಅನ್ನೋ ಪದವೇ ಮಾಯವಾಗಿತ್ತು. ಬಳಿಕ ನಾಲ್ಕು ಬಾರಿ ಕ್ಲಿಫ್ ಡೈವ್ ಮಾಡಿದೆ ಎಂದು ಫಾತಿಮಾ ಸನಾ ಶೇಕ್ ಹೇಳಿದ್ದಾರೆ.
ಮುದ್ದಿನ ನಾಯಿ ಜೊತೆ ಗೋವಾ ಪ್ರವಾಸ
ಹೊಸ ವರ್ಷವನ್ನು ಗೋವಾದಲ್ಲಿ ಕಳೆದ ಫಾತಿಮಾ ಸನಾ ಶೇಕ್ ಪ್ರತಿ ಕ್ಷಣವನ್ನು ಅದ್ಭುತವಾಗಿ ಆನಂದಿಸಿದ್ದಾರೆ. ಹೊಸ ವರ್ಷದಲ್ಲಿ ಮತ್ತಷ್ಟು ಧೈರ್ಯದೊಂದಿಗೆ ಬದುಕು ಹಾಗೂ ಸವಾಲು ಎದುರಿಸಲು ಸಜ್ಜಾಗಿದ್ದಾರೆ. ಹೊಸ ವರ್ಷವನ್ನು ಅದ್ಧೂರಿಯಾಗಿ ಆನಂದಿಸಿದ್ದಾರೆ. ಫಾತಿಮಾ ಸನಾ ಶೇಕ್ ತಮ್ಮ ಮುದ್ದಿನ ಸಾಕು ನಾಯಿ ಜೊತೆ ಗೋವಾ ಪ್ರವಾಸ ಮಾಡಿದ್ದರು.
ಫಾತಿಮಾ ಸನಾ ಶೇಕ್ ಜನಪ್ರಿಯತೆ ಕಾರಣವಾಗಿದ್ದು 2016ಲ್ಲಿ ಬಿಡುಗಡೆಯಾದ ಅಮಿರ್ ಖಾನ್ ಅಭಿನಯದ ದಂಗಲ್ ಸಿನಿಮಾ ಮೂಲಕ. ರಸ್ಲರ್ ಗೀತಾ ಫೋಗತ್ ಪಾತ್ರದಲ್ಲಿ ಫಾತಿಮಾ ಸನಾ ಅಭಿನಯಿಸಿದ್ದರು. ಅದಕ್ಕೂ ಮೊದಲೇ ಫಾತಿಮಾ ಸನಾ ಶೇಕ್ ಬಾಲ ನಟಿಯಾಗಿ ತೆರೆ ಮೇಲೆ ಮಿಂಚಿದ್ದರು. ಚಾಚಿ 420 ಸಿನಿಮಾದಲ್ಲಿ ಫಾತಿಮಾ ಸನಾ ಶೇಕ್ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದರು. ಆದರೆ ದಂಗಲ್ ಸಿನಿಮಾ ಫಾತಿಮಾ ಜನಪ್ರಿಯತೆಯನ್ನು ಹೆಚ್ಚಿಸಿತ್ತು. ಲುಡೋ, ಥಾರ್, ಸ್ಯಾಮ್ ಬಹದ್ದೂರ್ ಸೇರಿದಂತೆ ಹಲವು ಬಾಲಿವುಡ್ ಸಿನಿಮಾಗಳಲ್ಲೂ ಫಾತಿಮಾ ಸನಾ ಶೇಕ್ ಕಾಣಿಸಿಕೊಂಡಿದ್ದಾರೆ.


