ಈ ಸುದ್ದಿ ಸೂಪರ್‌ಸ್ಟಾರ್ ರಜಿನಿಕಾಂತ್ ಅವರ ಕಿವಿಗೆ ಬಿತ್ತು. ಬಾಲಕನ ನಿಷ್ಕಲ್ಮಶ ಮನಸ್ಸನ್ನು ಕಂಡು ಭಾವುಕರಾದ ರಜಿನಿಕಾಂತ್, ಆತನನ್ನು ಖುದ್ದಾಗಿ ಭೇಟಿ ಮಾಡಲು ಇಚ್ಛಿಸಿದರು. ಕೂಡಲೇ ಯಾಸಿನ್ ಮತ್ತು ಆತನ ಕುಟುಂಬವನ್ನು ಚೆನ್ನೈನ ತಮ್ಮ ನಿವಾಸಕ್ಕೆ ಆಹ್ವಾನಿಸಿದರು. 

ರಜನಿಕಾಂತ್ ತೊಡೆಯ ಮೇಲೆ ಕುಳಿತ ಯಾಸಿನ್!

ಪ್ರಾಮಾಣಿಕತೆ ಎನ್ನುವುದು ಇಂದಿನ ಕಾಲದಲ್ಲಿ ಬೆಲೆಕಟ್ಟಲಾಗದ ಆಸ್ತಿ. ಇದಕ್ಕೆ ಒಂದು ಸುಂದರ ಮತ್ತು ಸ್ಪೂರ್ತಿದಾಯಕ ಉದಾಹರಣೆ ಎಂದರೆ ಬಾಲಕ ಯಾಸಿನ್ ಮತ್ತು ಭಾರತೀಯ ಚಿತ್ರರಂಗದ ದಂತಕಥೆ, ಸೂಪರ್‌ಸ್ಟಾರ್ ರಜಿನಿಕಾಂತ್ (Rajinikanth) ಅವರ ಈ ಅಪರೂಪದ ಭೇಟಿಯ ಕಥೆ.

ತಮಿಳುನಾಡಿನ ಈರೋಡ್ ಜಿಲ್ಲೆಯ ಪುಟ್ಟ ಬಾಲಕ ಯಾಸಿನ್

ತಮಿಳುನಾಡಿನ ಈರೋಡ್ ಜಿಲ್ಲೆಯ ಪುಟ್ಟ ಬಾಲಕ ಯಾಸಿನ್, ಒಂದು ದಿನ ಶಾಲೆಗೆ ಹೋಗುವ ದಾರಿಯಲ್ಲಿ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಒಂದು ಚೀಲವನ್ನು ಕಂಡನು. ಕುತೂಹಲದಿಂದ ಅದನ್ನು ತೆರೆದು ನೋಡಿದಾಗ, ಅದರಲ್ಲಿ ಬರೋಬ್ಬರಿ 50,000 ರೂಪಾಯಿ ಹಣವಿತ್ತು. ಆ ಪುಟ್ಟ ವಯಸ್ಸಿನಲ್ಲಿ ಯಾಸಿನ್ ಆ ಹಣದ ಮೇಲೆ ಆಸೆ ಪಡದೆ, ತಕ್ಷಣ ಅದನ್ನು ತನ್ನ ಶಿಕ್ಷಕರ ಸಹಾಯದಿಂದ ಪೊಲೀಸರಿಗೆ ಒಪ್ಪಿಸಿದನು. ಬಡತನದಲ್ಲಿದ್ದರೂ ಆತ ತೋರಿದ ಈ ಪ್ರಾಮಾಣಿಕತೆ ಇಡೀ ದೇಶದ ಗಮನ ಸೆಳೆಯಿತು.

ಈ ಸುದ್ದಿ ಸೂಪರ್‌ಸ್ಟಾರ್ ರಜಿನಿಕಾಂತ್ ಅವರ ಕಿವಿಗೆ ಬಿತ್ತು. ಬಾಲಕನ ನಿಷ್ಕಲ್ಮಶ ಮನಸ್ಸನ್ನು ಕಂಡು ಭಾವುಕರಾದ ರಜಿನಿಕಾಂತ್, ಆತನನ್ನು ಖುದ್ದಾಗಿ ಭೇಟಿ ಮಾಡಲು ಇಚ್ಛಿಸಿದರು. ಕೂಡಲೇ ಯಾಸಿನ್ ಮತ್ತು ಆತನ ಕುಟುಂಬವನ್ನು ಚೆನ್ನೈನ ತಮ್ಮ ನಿವಾಸಕ್ಕೆ ಆಹ್ವಾನಿಸಿದರು.

ಕೇವಲ ಹಸ್ತಲಾಘವ ಮಾಡಿ ಕಳುಹಿಸಲಿಲ್ಲ

ಆ ಭೇಟಿಯ ಕ್ಷಣ ನಿಜಕ್ಕೂ ಅದ್ಭುತವಾಗಿತ್ತು. ರಜಿನಿಕಾಂತ್ ಅವರು ಕೇವಲ ಹಸ್ತಲಾಘವ ಮಾಡಿ ಕಳುಹಿಸಲಿಲ್ಲ, ಬದಲಾಗಿ ಯಾಸಿನ್‌ನನ್ನು ಅಕ್ಕರೆಯಿಂದ ತಬ್ಬಿಕೊಂಡು ತಮ್ಮ ತೊಡೆಯ ಮೇಲೆ ಕುರಿಸಿಕೊಂಡರು. ಕೋಟ್ಯಂತರ ಜನರು ದೈವದಂತೆ ಆರಾಧಿಸುವ ನಟನ ತೊಡೆಯ ಮೇಲೆ ಕುಳಿತುಕೊಳ್ಳುವ ಸೌಭಾಗ್ಯ ಆ ಬಾಲಕನದ್ದಾಗಿತ್ತು. ಬಾಲಕನ ಪ್ರಾಮಾಣಿಕತೆ ಮತ್ತು ಆತನ ಸರಳತೆಯನ್ನು ಕಂಡು ರಜಿನಿಕಾಂತ್ ಕಣ್ಣಾಲಿಗಳು ತೇವವಾಗಿದ್ದವು. "ಇಂದಿನ ಕಾಲದಲ್ಲಿ ಇಷ್ಟು ಸಣ್ಣ ವಯಸ್ಸಿನಲ್ಲಿ ಇಂತಹ ಪ್ರಾಮಾಣಿಕತೆ ಇರುವುದು ನಿಜಕ್ಕೂ ಅದ್ಭುತ" ಎಂದು ರಜಿನಿಕಾಂತ್ ಮನಸಾರೆ ಹೊಗಳಿದರು.

ಅಷ್ಟೇ ಅಲ್ಲದೆ, ಯಾಸಿನ್‌ನ ಮುಂದಿನ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ತಾವೇ ಹೊರುವುದಾಗಿ ರಜಿನಿಕಾಂತ್ ಭರವಸೆ ನೀಡಿದರು. ಪ್ರಾಮಾಣಿಕವಾಗಿ ನಡೆದರೆ ಜಗತ್ತೇ ಮೆಚ್ಚುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಯಿತು. ಒಬ್ಬ ಸಾಮಾನ್ಯ ಬಾಲಕ ತನ್ನ ಗುಣದಿಂದ ಸೂಪರ್‌ಸ್ಟಾರ್‌ನ ಹೃದಯವನ್ನೇ ಗೆದ್ದ ಈ ಕಥೆ ಇಂದಿಗೂ ಅನೇಕರಿಗೆ ಸ್ಪೂರ್ತಿಯಾಗಿದೆ.

View post on Instagram