Asianet Suvarna News Asianet Suvarna News

ಬಾಲ್ಯದಲ್ಲಿಯೇ ಗೆಳೆಯರಿಗೆ ಅನ್ನ ಭಾಗ್ಯ, ಶಕ್ತಿ ಯೋಜನೆ ಕರುಣಿಸಿದ್ರು ಕುರಿ ಪ್ರತಾಪ್!

ಕುರಿ ಪ್ರತಾಪ್ ಅಂದ್ತೆ ನಗು. ಬಾಲ್ಯದಲ್ಲಿ ಪ್ರತಾಪ್ ಹೇಗಿರುತ್ತಿದ್ದರು? ಮಾಡುತ್ತಿದ್ದ ತುಂಟಾಟಗಳು ಏನು ಎಂಬುವುದನ್ನು ಕುರಿ ಪ್ರತಾಪ್ ಬಾಲ್ಯದ ಗೆಳೆಯರು ಹೇಳಿದ್ದಾರೆ. ಅದಕ್ಕೂ ಮೊದಲೇ ಕುರಿ ಪ್ರತಾಪ್ ಎಲ್ಲವನ್ನೂ ಹೇಳಬೇಡರಪ್ಪ ಅಂತ ಮನವಿ ಮಾಡಿಕೊಂಡಿದ್ದರು.

Comedian Kuri prathap s friends shares childhood memories mrq
Author
First Published Aug 21, 2024, 4:11 PM IST | Last Updated Aug 21, 2024, 4:11 PM IST

ಬೆಂಗಳೂರು: ಇಡೀ ಕರ್ನಾಟಕಕ್ಕೆ ಹಾಸ್ಯ ಕಲಾವಿದ ಕುರಿ ಪ್ರತಾಪ್ ಚಿರಪರಿಚಿತರು. ಕಿರುತೆರೆಯ ಕುರಿಗಳು ಸಾರ್ ಕುರಿಗಳು ಶೋ ಮೂಲಕ ಮುನ್ನಲೆಗೆ ಬಂದ ಪ್ರತಾಪ್ ಚಂದನವನದಲ್ಲಿ ಕುರಿ ಪ್ರತಾಪ್ ಅಂತಾನೇ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿರುವ ಕುರಿ ಪ್ರತಾಪ್ ನಟನೆಯ ದೃಶ್ಯಗಳು ಇಂದಿಗೂ ವೈರಲ್ ಆಗುತ್ತಿರುತ್ತವೆ. ಕಲರ್ಸ್ ಕನ್ನಡ ವಾಹಿನಿಯ ಮಜಾ ಟಾಕೀಸ್ ಕಾರ್ಯಕ್ರಮ ಕುರಿ ಪ್ರತಾಪ್‌ ಅವರಿಗೆ ದೊಡ್ಡಮಟ್ಟದ ಹೆಸರನ್ನು ತಂದುಕೊಟ್ಟಿತ್ತು. ಇದಾದ ಬಳಿಕ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲಿಯೂ ಕಾಣಿಸಿಕೊಂಡಿದ್ದ ಕುರಿ ಪ್ರತಾಪ್, ಇಂದು ಜೀ ಕನ್ನಡ ವಾಹಿನಿಯಲ್ಲಿ ನಿರೂಪಕ ಮತ್ತು ಕಾಮಿಡಿ ಶೋಗೆ ತೀರ್ಪುಗಾರರಾಗಿದ್ದಾರೆ.

ಇದಕ್ಕೂ ಮೊದಲು ಜೀ ಕನ್ನಡ ವಾಹಿನಿಯ ಚೋಟಾ ಚಾಂಪಿಯನ್ ಶೋನಲ್ಲಿ ಶ್ವೇತಾ ಚೆಂಗಪ್ಪ ಮತ್ತು ಕುರಿ ಪ್ರತಾಪ್ ಜೊತೆಯಾಗಿ ನಿರೂಪಣೆಯನ್ನು ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಕುರಿ ಪ್ರತಾಪ್ ಅವರ ಬಾಲ್ಯದ ಗೆಳೆಯರನ್ನು ಜೀ ವಾಹಿನಿ ಕರೆಸಿತ್ತು. ಕಾರ್ಯಕ್ರಮಕ್ಕೆ ಬಂದಿದ್ದ ಗೆಳೆಯರು ಕುರಿ ಪ್ರತಾಪ್ ಅವರ ಬಾಲ್ಯದ ತುಂಟಾಟಗಳನ್ನು ಎಲ್ಲರ ಜೊತೆ ಹಂಚಿಕೊಂಡಿದ್ದರು. ಅಲ್ಲಿಗೆ ಬಂದಿದ್ದ ಎಲ್ಲರೂ ಕುರಿ ಪ್ರತಾಪ್ ಅವರ 25 ರಿಂದ 30 ವರ್ಷದ ಗೆಳೆಯರಾಗಿದ್ದವರು. 

ಕುರಿ ಪ್ರತಾಪ್ ಬಾಲ್ಯದಲ್ಲಿ ಹೇಗಿದ್ದರು ಎಂಬುದರ ಬಗ್ಗೆ ನಮಗೆ ತಿಳಿಸಿಕೊಡಿ ಎಂದು ಶ್ವೇತಾ ಚೆಂಗಪ್ಪ ಹೇಳುತ್ತಾರೆ. ಇದಕ್ಕೆ ಕುರಿ ಪ್ರತಾಪ್ ಹೇಳು ಅಂದಕ್ಷಣ ಎಲ್ಲವನ್ನು ಹೇಳಬೇಡಿ. ಎಷ್ಟು ಹೇಳಬೇಕೋ ಅಷ್ಟನ್ನೇ ಹೇಳು. ಇಲ್ಲಾಂದ್ರೆ ಟೆಲಿಕಸ್ಟ್ ಮಾಡೋಕೆ ಆಗಲ್ಲ. ಆದ್ದರಿಂದ ನೋಡಿ ಮಾತನಾಡಿ ಎಂದು ಪ್ರತಾಪ್ ನಗೆ ಚಟಾಕಿ ಹಾರಿಸಿದರು. ಇವರೆಲ್ಲ ಎಷ್ಟು ಓದಿದ್ದಾರೆ ಎಂದು ಕೇಳಿ, ಒಬ್ಬ ಹಾಳಾಗೋಕೆ ನಾಲ್ಕು ಜನ ಇರ್ತಾರೆ ಅಂತ ಹೇಳ್ತಾರಲ್ಲ. ಆ ನಾಲ್ಕು ಜನ ಇವರೇ ನೋಡು ಶ್ವೇತಾ ಎಂದು ಕುರಿ ಪ್ರತಾಪ್ ಹೇಳುತ್ತಾರೆ. ಆಗ ಗೆಳೆಯರೊಲ್ಲಬ್ಬರು ಅದಕ್ಕೆ ನೀನು ಈ ವೇದಿಕೆ ಮೇಲಿ ನಿಂತಿರೋದು ಅಂತ ಹೇಳಿದರು.

 BB7: ಕುರಿ ಪ್ರತಾಪ್ ಫೇಕ್‌ ಅನ್ನೊರಿಗೆ ಶ್ವೇತಾ ಚೆಂಗಪ್ಪಾ ಕೊಟ್ರು ಟಾಂಗ್!

ಬೆಳಗ್ಗೆ ಎಂಟೂವರೆ ಆಗ್ತಿದ್ದಂತೆ ಸೈಕಲ್ ತೆಗೆದುಕೊಂಡು ಪ್ರತಾಪ್ ಮನೆಗೆ ಬರುತ್ತಿದ್ದನು. ಸೈಕಲ್‌ನಲ್ಲಿ ಇಡೀ ಮೈಸೂರು ಸುತ್ತು ಹಾಕ್ತಿದ್ದೀವಿ ಎಂದು ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ಇದೀಗ ಸಿದ್ದರಾಮಯ್ಯನವರು ಮಹಿಳೆಯರಿಗಾಗಿ ಶಕ್ತಿ ಯೋಜನೆ ತಂದಿದ್ದಾರೆ. ಆದ್ರೆ ಕುರಿ ಪ್ರತಾಪ್ ನಮಗೆ ಆವಾಗಲೇ ಫ್ರೀ ಬಸ್ ಯೋಜನೆ ಕೊಟ್ಟಿದ್ದನು. ಬಸ್‌ನಲ್ಲಿ ಹೋಗುವಾಗ ಟಿಕೆಟ್ ನಾನೇ ತೊಗಳ್ಳೊವೆ ಎಂದು ನಮ್ಮ ಹತ್ರ ಹಣ ಪಡೆದುಕೊಳ್ಳುತ್ತಿದ್ದನು. ಆದ್ರೆ ಟಿಕೆಟ್ ತೆಗೆದುಕೊಳ್ಳದೇ ಅದೇ ಹಣದಲ್ಲಿ ನಮಗೆ ತಿಂಡಿ ಕೊಡಿಸುತ್ತಿದ್ದನು. ಒಂದು ದಿನ ಬಸ್‌ನಲ್ಲಿ ಟಿಕೆಟ್ ಚೆಕ್ಕರ್ ಬಂದಾಗ ನಮ್ಮನ್ನೇ ಕುರಿ ಮಾಡಿದ್. ಆವಾಗ ನಮ್ಮದೇ ಹಣದಲ್ಲಿ ಪಾರ್ಟಿ ಕೊಡಿಸುತ್ತಿರುವ ವಿಷಯ ಗೊತ್ತಾಯ್ತ ಎಂದು ಹೇಳಿದರು. 

ಮತ್ತೋರ್ವ ಗೆಳೆಯ ಮಾತನಾಡಿ ನಮಗೆ ಬಾಲ್ಯದಿಂದಲೇ ನಮಗೆ ಪ್ರತಾಪ್‌ನಿಂದಲೇ ಅನ್ನಭಾಗ್ಯ ಯೋಜನೆ ಸಿಕ್ಕಿತ್ತು. ನಮ್ಮದೇ ಮದುವೆ ಅಂತ ಹೇಳಿ ಕರೆದುಕೊಂಡು ಹೋಗುತ್ತಿದ್ದನು. ಊಟ ಮಾಡಿದ್ಮೇಲೆ ಗೊತ್ತಾಗೋದು ಅದು ಅಪರಿಚಿತರ ಮದುವೆ. ಮೊದಲಿಗೆ ನಮ್ಮನ್ನು ಕಳಿಸಿ, ಆನಂತರ ನಮ್ಮತ್ತ ಕೈ ಬೀಸುತ್ತಾ ಬರುತ್ತಿದ್ದನು ಎಂದು ಹೇಳಿದರು.  

'ಹೆಂಗ್ ಮಾಡ್ಕೊಂಡವ್ನೆ ನೋಡು ಕೋತ್ ನನ್ನ ಮಗ ಕುರಿ'; ಪ್ರತಾಪ್ ಗ್ರಾಫಿಕ್ ವಿಡಿಯೋ ವೈರಲ್!

Latest Videos
Follow Us:
Download App:
  • android
  • ios