ಮೆಟರ್ನಿಟಿ ಫೇಸ್‌ ಎಂಜಾಯ್ ಮಾಡುತ್ತಿರುವ 'ಮಜಾ ಟಾಕೀಸ್' ರಾಣಿ ಯಾನೆ ಶ್ವೇತಾ ಚೆಂಗಪ್ಪ ಖಾಸಗಿ ವಾಹಿನಿಯ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ತಮ್ಮ ಸ್ನೇಹಿತ ಕುರಿ ಪ್ರತಾಪ್ ಬಿಗ್ ಬಾಸ್‌ನಲ್ಲಿ ಸ್ಪರ್ಧಿಸುತ್ತಿರುವ ವಿಚಾರದ ಬಗ್ಗೆ ಮಾತನಾಡಿದ್ದಾರೆ. 

ಪುತ್ತರಿ ಹಬ್ಬದಲ್ಲಿ ಮಗನೊಂದಿಗೆ ಕುಣಿದ ಶ್ವೇತಾ ಚೆಂಗಪ್ಪ!

ಮಗನೊಂದಿಗೆ ಸಮಯ ಕಳೆಯಬೇಕು ಎಂದು ಕಿರುತೆರೆಯಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿರುವ ಶ್ವೇತಾ ಇದೇ ಮೊದಲ ಬಾರಿ ತಾಯಿಯಾದ ನಂತರ ಸಂದರ್ಶನದಲ್ಲಿ ಕಾಣಸಿಕೊಂಡಿರುವುದು. ಮಾತಿನ ನಡುವೆ ನಿರೂಪಕ ಬಿಗ್ ಬಾಸ್ ನೋಡುತ್ತೀರಾ? ಅವರಲ್ಲಿ ನಿಮಗೆ ಯಾರಿಷ್ಟ? ಎಂದು ಪ್ರಶ್ನಿಸಿದ್ದಾರೆ. ಶ್ವೇತಾ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬಿಗ್ ಬಾಸ್-7'ನ ಕುರಿ ಪ್ರತಾಪ್‌ ಮಾಡುವ ತಮಾಷೆಗಾಗಿ ನೋಡುತ್ತಿರುವೆ. ಅವರ ಹಾಸ್ಯ ನನಗೆ ತುಂಬಾ ಇಷ್ಟ ಎಂದಿದ್ದಾರೆ. ಅಷ್ಟೇ ಅಲ್ಲದೆ ಅವರು ಫೇಕ್‌ ಎಂದು ಹೇಳುತ್ತಿದ್ದ ಜನರಿಗೆ 'ಕುರಿ ನಿಜವಾಗಿಯೂ ತುಂಬಾ ಕನ್‌ಫ್ಯೂಸ್ಡ್‌ ಆಗಿ ಇರುತ್ತಾರೆ. ಸೀನ್‌ ಪೇಪರ್ ಕೊಟ್ಟು ನೆನಪು ಇಟ್ಕೊಳ್ಳಿ ಅಂತ ಕೊಟ್ರೆ ಫುಲ್ ಕನ್‌ಫ್ಯೂಸ್‌ ಆಗುತ್ತಾರೆ. ಮಜಾ ಟಾಕೀಸ್‌ ಕುರಿ ಆಕ್ಸಿಜನ್‌ ಇದ್ದ ಹಾಗೆ' ಎಂದು ಹೇಳಿದ್ದಾರೆ.

'ಕುರಿ ಪ್ರತಾಪ್ ತುಂಬಾ ಕಾಮಿಡಿ ಮಾಡುತ್ತಾರೆ , ಅವರ ಬಗ್ಗೆ ಅವರೇ ಕಾಮಿಡಿ ಮಾಡುತ್ತಾರೆ. ಬೇರೆಯವರ ಬಗ್ಗೆ ಮಾತನಾಡುವುದಿಲ್ಲ ಅಷ್ಟೇ ಅಲ್ಲದೆ ಯಾರಿಗೂ ನೋವು ಮಾಡುವು ವ್ಯಕ್ತಿ ಅವರಲ್ಲ. ಅದಿಕ್ಕೆ ವ್ಯಕ್ತಿತ್ವದಲ್ಲಿ ಅವರು ಎಷ್ಟೋ ಮೇಲು' ಎಂದು ಹೆಮ್ಮೆಯಿಂದ ಮಾತನಾಡಿದ್ದಾರೆ. ಶ್ವೇತಾ ಮಾತ್ರವಲ್ಲ ಇನ್ನಿತರ ಸ್ಪರ್ಧಿಗಳು ಕುರಿನಾ ಫಿನಾಲೆವರೆಗೂ ನೋಡುವ ಭರವಸೆ ಇಟ್ಟುಕೊಂಡಿದ್ದಾರೆ.

ಅಬ್ಬಬ್ಬಾ! ಇದು ರೀಲಾ, ರಿಯಲ್ಲಾ? ಅರ್ಜುನ್‌-ಸ್ನೇಹ ಲವ್‌ ಸ್ಟೋರಿ ಕೇಳಿದ್ದೀರಾ?

ಬಿಗ್‌ಬಾಸ್‌ನ 8ನೇ ವಾರ ಮುಗಿಯುತ್ತಿದ್ದು, 12 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಮನೆಗೆ ಎಂಟ್ರಿ ಕೊಟ್ಟ ರವಿ ಬೆಳಗೆರೆ, ಜೈ ಜಗದೀಶ್, ಸುಜಾತಾ, ಚೈತ್ರಾ ಕೊಟ್ಟೂರ, ಚೈತ್ರಾ ವಾಸುದೇವನ್, ದುನಿಯಾ ರಶ್ಮಿ, ಪೃಥ್ವಿ, ರಕ್ಷಾ ಈಗಾಗಲೇ ಎಲಿಮನೇಟ್ ಆಗಿದ್ದಾರೆ. ಕುರಿ ಪ್ರತಾಪ್ ಸ್ಪರ್ಧೆಯಲ್ಲಿ ಚೆನ್ನಾಗಿ ಆಡುತ್ತಿದ್ದು, ಅಂತಿಮ ಘಟ್ಟದವರೆಗೂ ತೆರಳುವ ಸಾಧ್ಯತೆ ಇದೆ.