ಆಗಸ್ಟ್‌ 5ರಂದು ರಾಮ ಮಂದಿರ ಭೂಮಿ ಪೂಜೆ ದಿನ ದಕ್ಷಿಣದ ಫೋಏಮಸ್ ಕಾಮೆಡಿ ನಟ ಬ್ರಹ್ಮಾನಂದಂ ಸುಂದರವಾದ ರಾಮನ ಚಿತ್ರ ಬಿಡಿಸಿದ್ದು, ಫೋಟೋ ಈಗ ವೈರಲ್ ಆಗಿದೆ.

ಆಗಸ್ಟ್‌ 5ರಂದು ಭೂಮಿ ಪೂಜೆ ನಡೆದಿದ್ದು, ಅದೇ ದಿನ ರಾಮ ಮತ್ತು ಹನುಮನ ಫೋಟೋ ರಚಿಸಿದ್ದಾರೆ ಬ್ರಹ್ಮಾನಂದಂ. ಈ ಫೋಟೋ ಈಗ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಿಗ್‌ಬಾಸ್‌ ಬ್ಯೂಟಿಯ ಬರ್ತ್‌ಡೇ ಫನ್..! ಇಲ್ಲಿವೆ ಚಂದದ ಫೋಟೋಸ್

ಇದೊಂದು ಪೆನ್ಸಿಲ್ ಡ್ರಾಯಿಂಗ್ ಆಗಿದ್ದು, ಶ್ರೀರಾಮನ ಎದೆಯಲ್ಲಿ ಮುಖವಿಟ್ಟು ಕುಳಿತ ಹನುಮನ ಚಿತ್ರ ಸುಂದರವಾಗಿ ಮೂಡಿ ಬಂದಿದೆ. ಹೆಚ್ಚು ಡಾರ್ಕ್ ಇಲ್ಲದೆ ಪೆನ್ಸಿಲ್‌ನಲ್ಲಿ ಬರೆದ ಚಿತ್ರ ಸುಂದರವಾಗಿ ಮೂಡಿ ಬಂದಿದೆ.

ತಮಗೆ ಶಿಲ್ಪ ಕಲೆಯಲ್ಲಿಯೂ ಆಸಕ್ತಿ ಇರುವುದಾಗಿ ಬ್ರಹ್ಮಾನಂದಂ ಇಂಟರ್‌ವ್ಯೂ ಒಂದರಲ್ಲಿ ಹೇಳಿದ್ದರು. ಎಲ್ಲರೂ ಲಾಕ್‌ಡೌನ್‌ನಲ್ಲಿ ಹೊಸ ಹವ್ಯಾಸ ಮೈಗೂಡಿಸಿಕೊಂಡರೆ ಬ್ರಹ್ಮಾನಂದಂ ಮೊದಲನಿಂದಲೂ ಸುಂದರವಾಗಿ ಚಿತ್ರ ಬಿಡಿಸುತ್ತಿದ್ದರು.

ಮದ್ವೆ ಮುಂಚೆ 9 ವರ್ಷ ಡೇಟಿಂಗ್ ಮಾಡಿದ್ರು ಬಾಲಿವುಡ್‌ನ ಈ ಜೋಡಿ

ಬ್ರಹ್ಮಾನಂದಂ ರಚಿಸಿದ ಚಿತ್ರವನ್ನು ಫ್ಯಾನ್ಸ್‌ ಲೈಕ್ ಮಾಡಿ ಶೇರ್ ಮಾಡಿಕೊಂಡಿದ್ದಾರೆ. ಇದೀಗ ಸುಂದರ ಫೋಟೋ ಮೂಲಕ ಕಾಮಿಡಿ ನಟ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.