ಪುನೀತ್ ಅವರಿಗೆ ಕರ್ನಾಟಕ ರತ್ನ ಕೊಡುವುದಕ್ಕೆ ತೀರ್ಮಾನ ಮಾಡಿದ್ದೇವೆ. ಆದಷ್ಟು ಬೇಗ ಕುಟುಂಬ ಸದಸ್ಯರು ಜೊತೆ ಮಾತನಾಡಿ ಒಂದು ದಿನಾಂಕ ನಿಗದಿ ಮಾಡಿ ಕಾರ್ಯಕ್ರಮ ಯಾವ ರೀತಿ ಆಗಬೇಕು ಅಂತ ತೀರ್ಮಾನಿಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿ(Karnataka Ratna award) ನೀಡುವುದಾಗಿ ಕರ್ನಾಟಕ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಇತ್ತೀಚಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ದಿ. ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ 'ಪುನೀತ ನಮನ' ಕಾರ್ಯಕ್ರಮ ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), 'ಪುನೀತ್ ಅವರನ್ನು ನಾನು ಬಾಲ್ಯದಿಂದ ಬಲ್ಲೆ. ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿದ ಕರ್ನಾಟಕದ ಏಕೈಕ ಬಾಲಕ ಪುನೀತ್. ಅಷ್ಟು ಸಣ್ಣ ವಯಸ್ಸಿನಲ್ಲಿ ಹಾಗೆ ನಟಿಸೋದು ಸುಲಭವಲ್ಲ' ಎಂದಿದ್ದರು. ಇದೇ ಸಮಯದಲ್ಲಿ ಪವರ್ ಸ್ಟಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿದ್ದರು.
ಇಂದು (ಮಾರ್ಚ್ 17) ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ. ಇವತ್ತು ಅಪ್ಪು ಬಗ್ಗೆ ಮಾತನಾಡಿದ ಸಿಎಂ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವ ಬಗ್ಗೆ ಬಹಿರಂಗ ಪಡಿಸಿದರು. ಈ ಬಗ್ಗೆ ಮಾತನಾಡಿದ ಸಿಎಂ, 'ನಮ್ಮೆಲ್ಲರ ಅಚ್ಚುಮೆಚ್ಚಿನ ಪುನೀತ್ ರಾಜ್ ಕುಮಾರ್ 47ನೇ ಹುಟ್ಟುಹಬ್ಬ. ಇಂದು ಅವರಿಲ್ಲದೇ ನಾವೆಲ್ಲ ದುಃಖದಲ್ಲಿದ್ದೇವೆ. ಅವರ ಬದುಕು ಸ್ಫೂರ್ತಿ, ಅಂಗಾಂಗ ದಾನ ಮಾಡಿರೋದು ನಮ್ಮೆಲ್ಲರಿಗೂ ಪ್ರೇರಣೆ. ಇಂದು ಅವರ ಸಿನಿಮಾ ಜೇಮ್ಸ್ ಕೂಡ ಬಿಡುಗಡೆಯಾಗುತ್ತಿದೆ ಸಿನಿಮಾ ಯಶಸ್ವಿಯಾಗಲಿ ಎಂದು ಶುಭಾಶಯ ಕೋರುತ್ತೇನೆ' ಎಂದು ಸಿಎಂ ಹೇಳಿದರು.
Puneeth Rajkumar: ಪವರ್ ಸ್ಟಾರ್‌ಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ ಮಂಡ್ಯ ರೈತ!
ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ..
'ಆದರ್ಶದ ಬದುಕು, ಸಾರ್ವಜನಿಕ ಸೇವೆ, ನಡೆದುಕೊಂಡ ರೀತಿ, ಬಡವರಿಗೆ ಸಹಾಯ ಮಾಡಿದ ರೀತಿ ಅಂಗಾಂಗಗಳ ದಾನ ಮಾಡಿರೋದು ಇವೆಲ್ಲ ನಮಗೆ ಆದರ್ಶ ಮತ್ತು ಪ್ರೇರಣೆ. ಸಣ್ಣ ವಯಸ್ಸಿನಲ್ಲಿ ಇಷ್ಟೆಲ್ಲಾ ಮಾಡಿ ಹೋಗಿದ್ದಾರೆ. ಅವರ ಕೆಲಸಗಳನ್ನು ನೆನೆದು ಕೊಳ್ಳೋಣ. ಪುನೀತ್ ಅವ್ರಿಗೆ ಕರ್ನಾಟಕ ರತ್ನ ಕೊಡೋದಕ್ಕೆ ತೀರ್ಮಾನ ಮಾಡಿದ್ದೇವೆ. ಆದಷ್ಟು ಬೇಗ ಕುಟುಂಬ ಸದಸ್ಯರು ಜೊತೆ ಮಾತನಾಡಿ ಒಂದು ದಿನಾಂಕ ನಿಗದಿ ಮಾಡಿ ಆ ಕಾರ್ಯಕ್ರಮ ಯಾವ ರೀತಿ ಆಗಬೇಕು ಅಂತ ತೀರ್ಮಾನಿಸಲಾಗುವುದು'. ಎಂದು ಸಿಎಂ ಹೇಳಿದರು.
ಕಮಿಟಿ ರಚನೆ..
'ಪುನೀತ್ ರಾಜ್‌ಕುಮಾರ್ ಮತ್ತು ರಾಜ್ ಕುಮಾರ್ ಅವ್ರಿಗೆ ಗೌರವ ಬರುವ ಹಾಗೆ ಯಾವ ರೀತಿ ಕಾರ್ಯಕ್ರಮ ಮಾಡಬೇಕು ಅಂತ ತೀರ್ಮಾನಿಸಲು ಕಮಿಟಿ ರಚಿಸಲಾಗುವುದು ಕುಟುಂಬ ಸದಸ್ಯರ ಜೊತೆ ಚರ್ಚೆ ಮಾಡಿ ದಿನಾಂಕ ನಿಗದಿ ಮಾಡಿ ಆದಷ್ಟು ಬೇಗ ಕರ್ನಾಟಕ ರತ್ನ ಪ್ರಶಸ್ತಿ ಕೊಡುತ್ತೇವೆ' ಎಂದರು.
Puneeth Rajkumar Memory: ಸುರಿಯುವ ಹಿಮದಲ್ಲೂ ಅಪ್ಪು ನೆನೆಯುತ್ತಿರುವ ಕೊಪ್ಪಳದ ಯೋಧರು..!
ಇನ್ನು ಪುನೀತ್ ರಾಜಕುಮಾರ್ ಬರ್ತ್ ಡೇ ಹಿನ್ನೆಲೆ ಯುವ ಕಾಂಗ್ರೆಸ್ ಇಂದು ಉಚಿತವಾಗಿ ಜೇಮ್ಸ್ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಿದೆ. ಗರುಡ ಮಾಲ್ ನಲ್ಲಿ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಯ ಶೋ ನಿಂದಲೇ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಉಚಿತ ಶೋ ಏರ್ಪಡಿಸಲಾಗಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ನಲ್ಪಾಡ್ ಹ್ಯಾರೀಸ್ ಈ ವ್ಯವಸ್ಥೆ ಮಾಡಿದ್ದಾರೆ.
