ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸಿ ಬಳಿಕ ಅವರನ್ನು ಐಸಿಸ್‌ ಉಗ್ರರನ್ನಾಗಿ ಪರಿವರ್ತಿಸುವ ಕಥಾ ಹಂದರದ ಸಿನಿಮಾ ‘ದ ಕೇರಳ ಸ್ಟೋರಿ’ 100 ಕೋಟಿ ರು. ಸಂಪಾದನೆ ಮಾಡಿದೆ. ಚಿತ್ರ ಬಿಡುಗಡೆಯಾದ 9 ದಿನದಲ್ಲಿ ಒಟ್ಟು 112.99 ಕೋಟಿ ರು. ಗಳಿಸಿದೆ. ಮೇ.5ರಂದು ಬಿಡುಗಡೆಯಾಗಿದ್ದ ಸಿನಿಮಾ ಶನಿವಾರ ಒಂದೇ ದಿನದಲ್ಲಿ 19.5 ರು. ಕಲೆಕ್ಷನ್‌ ಮಾಡಿದೆ ಎಂದು ಚಿತ್ರ ನಿರ್ಮಾಣ ಮಾಡಿರುವ ಸನ್‌ಶೈನ್‌ ಪಿಕ್ಚ​ರ್‍ಸ್ ಹೇಳಿದೆ.

ಮುಂಬೈ ಮೇ.15) ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸಿ ಬಳಿಕ ಅವರನ್ನು ಐಸಿಸ್‌ ಉಗ್ರರನ್ನಾಗಿ ಪರಿವರ್ತಿಸುವ ಕಥಾ ಹಂದರದ ಸಿನಿಮಾ ‘ದ ಕೇರಳ ಸ್ಟೋರಿ’ 100 ಕೋಟಿ ರು. ಸಂಪಾದನೆ ಮಾಡಿದೆ. ಚಿತ್ರ ಬಿಡುಗಡೆಯಾದ 9 ದಿನದಲ್ಲಿ ಒಟ್ಟು 112.99 ಕೋಟಿ ರು. ಗಳಿಸಿದೆ. ಮೇ.5ರಂದು ಬಿಡುಗಡೆಯಾಗಿದ್ದ ಸಿನಿಮಾ ಶನಿವಾರ ಒಂದೇ ದಿನದಲ್ಲಿ 19.5 ರು. ಕಲೆಕ್ಷನ್‌ ಮಾಡಿದೆ ಎಂದು ಚಿತ್ರ ನಿರ್ಮಾಣ ಮಾಡಿರುವ ಸನ್‌ಶೈನ್‌ ಪಿಕ್ಚ​ರ್‍ಸ್ ಹೇಳಿದೆ.

ಕೇರಳದಲ್ಲಿ 32,000 ಹಿಂದೂ ಯುವತಿಯರನ್ನು ಪ್ರೀತಿಯ ಜಾಲದಲ್ಲಿ ಬೀಳಿಸಿಕೊಂಡು, ಇಸ್ಲಾಂಗೆ ಮತಾಂತರ ಮಾಡಿ ಬಳಿಕ ಸಿರಿಯಾ, ಅಷ್ಘಾನಿಸ್ತಾನದಂತಹ ರಾಷ್ಟ್ರಗಳಿಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರನ್ನು ಐಸಿಸ್‌ಗೆ ಸೇರಿಸಿ ಆತ್ಮಾಹುತಿ ಬಾಂಬ್‌ ದಾಳಿಗೆ ಬಳಸಿಕೊಳ್ಳಲಾಗಿದೆ ಎಂಬ ಕಥಾ ಹೊಂದಿರುವ ಸಿನಿಮಾಗೆ ಎಲ್ಲೆಡೆ ಭಾರಿ ಪರ ವಿರೋಧ ವ್ಯಕ್ತವಾಗಿತ್ತು. ಸುದೀಪ್ತೋ ಸೇನ್‌ ಚಿತ್ರ ನಿರ್ದೇಶಿಸಿದ್ದು, ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಕೇರಳ ಸ್ಟೋರಿಯಿಂದ ಕಾಶ್ಮೀರ್‌ ಫೈಲ್ಸ್‌ ವರೆಗೆ ಬಾಕ್ಸ್‌ ಆಫೀಸ್‌ಗೆ ಶಾಕ್‌ ನೀಡಿದ ಕಡಿಮೆ ಬಜೆಟ್‌ ಸಿನಿಮಾಗಳಿವು!

ಇನ್ನು ತಮಿಳುನಾಡು ಮಲ್ಟಿಪ್ಲೆಕ್ಸ್‌ ಪ್ರದರ್ಶಕರು ಸಿನಿಮಾ ಪ್ರದರ್ಶಿಸದಂತೆ ತಾವೇ ನಿರ್ಬಂಧಿಸಿಕೊಂಡಿದ್ದರೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಚಿತ್ರವನ್ನು ರಾಜ್ಯದಲ್ಲಿ ನಿಷೇಧಿಸಿದ್ದಾರೆ. ಆದರೆ ಉತ್ತರ ಪ್ರದೇಶ, ಹರ್ಯಾಣ, ಮಧ್ಯಪ್ರದೇಶಗಳಲ್ಲಿ ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಲಾಗಿದೆ.