ಕೇರಳ ಸ್ಟೋರಿಯಿಂದ ಕಾಶ್ಮೀರ್ ಫೈಲ್ಸ್ ವರೆಗೆ ಬಾಕ್ಸ್ ಆಫೀಸ್‌ಗೆ ಶಾಕ್ ನೀಡಿದ ಕಡಿಮೆ ಬಜೆಟ್ ಸಿನಿಮಾಗಳಿವು!
ಅದಾ ಶರ್ಮ ನಟಿಸಿರುವ ದಿ ಕೇರಳ ಸ್ಟೋರ್ ಈ ದಿನಗಳಲ್ಲಿ ಸಖತ್ ಸುದ್ದಿಯ್ಲಲಿದೆ. ಹಲವು ವಿವಾದಗಳ ನಂತರವೂ ಬಾಕ್ಸ್ ಆಪೀಸ್‌ನಲ್ಲಿ ತನ್ನ ಓಟ ಮುಂದುವರಿಸಿದೆ ಮತ್ತು ಸಾಕಷ್ಷು ಭಾರೀ ಮೊತ್ತವನ್ನು ಸಹ ಸಂಗ್ರಹಿಸಿದೆ. ಆದರೆ ಈ ಸಿನಿಮಾ ನಿರ್ಮಾಣದ ಬಜೆಟ್ ಕೇಳಿದರೆ ನಿಜವಾಗಿಯೂ ಆಶ್ಚರ್ಯವಾಗುತ್ತೆ. ಈ ರೀತಿ ಕಡಿಮೆ ಬಜೆಟ್‌ನ ಸಿನಿಮಾಗಳು ಹಿಟ್ ಆಗಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಬಾಕ್ಸ್ ಆಫೀಸ್‌ಗೆ ಶಾಕ್ ನೀಡಿದ ಕಡಿಮೆ ಬಜೆಟ್ ಸಿನಿಮಾಗಳ ವಿವರ ಇಲ್ಲಿದೆ.
tamil nadu multiplexes stops screening of the kerala story nsn
40 ಕೋಟಿ ಬಜೆಟ್‌ನಲ್ಲಿ ತಯಾರಾದ ಕೇರಳ ಕಥಾ ಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ ಮತ್ತು ಅದಾ ಶರ್ಮಾ ನಟಿಸಿದ್ದಾರೆ. ಆದರೆ 7 ದಿನಗಳಲ್ಲಿ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ 81.36 ಕೋಟಿ ರೂಪಾಯಿ ಗಳಿಸಿದೆ.
ಅನುಪಮ್ ಖೇರ್ ಸ್ಟಾರರ್ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡಿದೆ. 2022 ರಲ್ಲಿ ಬಿಡುಗಡೆಯಾದ ಈ ಚಿತ್ರವು 15 ರಿಂದ 25 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲ್ಪಟ್ಟಿತ್ತು ಆದರೆ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿಗಳಿಗಿಂತ ಹೆಚ್ಚು ಗಳಿಸಿ ದಾಖಲೆ ಮಾಡಿದೆ.
2019 ರಲ್ಲಿ ಬಿಡುಗಡೆಯಾದ ವಿಕ್ಕಿ ಕೌಶಲ್ ನಟಿಸಿದ ಉರಿ ಚಿತ್ರ ಸರ್ಜಿಕಲ್ ಸ್ಟ್ರೈಕ್ ಸುಮಾರು 25 ಕೋಟಿ ಬಜೆಟ್‌ನಲ್ಲಿ ಮಾಡಲ್ಪಟ್ಟಿದೆ ಮತ್ತು ಭಾರತದಲ್ಲೇ ಈ ಚಿತ್ರ 245 ಕೋಟಿಗೂ ಹೆಚ್ಚು ಗಳಿಸಿದೆ.
.
2019 ರಲ್ಲಿ ಬಿಡುಗಡೆಯಾದ ಅಮಿತಾಬ್ ಬಚ್ಚನ್ ಮತ್ತು ತಾಪ್ಸಿ ಪನ್ನು ಅವರ ಬದ್ಲಾ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 88 ಕೋಟಿಗಳನ್ನು ಸಂಗ್ರಹಿಸಿದೆ. ಆದರೆ ಈ ಚಿತ್ರದ ಬಜೆಟ್ ಕೇವಲ 37 ಕೋಟಿ ಆಗಿತ್ತು.
ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅವರ ಚಿತ್ರ ಸ್ತ್ರೀ ಸಿನಿಮಾ ಸುಮಾರು 24 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ ಆದರೆ ಈ ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿಯೇ 130 ಕೋಟಿ ಕಲೆಕ್ಷನ್ ಮಾಡಿದೆ.
2018 ರಲ್ಲಿ ಬಿಡುಗಡೆಯಾದ ಆಯುಷ್ಮಾನ್ ಖುರಾನಾ ಮತ್ತು ಟಬು ಅವರ ಚಲನಚಿತ್ರ ಅಂಧಧುನ್ ಭಾರತದಲ್ಲಿಯೇ ಸರಿಸುಮಾರು 75 ಕೋಟಿಗಳನ್ನು ಸಂಗ್ರಹಿಸಿದೆ. ವಾಸ್ತವವಾಗಿ ಈ ಚಿತ್ರದ ಬಜೆಟ್ 32 ಕೋಟಿ.