ಮದ್ವೆ ಮಾಡ್ಕೊಂಡ್ರೆ ಅವಕಾಶ ಕಳೆದುಕೊಳ್ಳುವೆ; ನಟಿ ಸೌಂದರ್ಯಗಿದ್ದ ಭಯ ಇದಂತೆ

27 ವರ್ಷ ಬದುಕಿದ್ದರೂ ಅಗಾಧ ಸಾಧನೆ ಮಾಡಿ ಎಲ್ಲರನ್ನೂ ಅಗಲಿರುವ ನಟಿ ಸೌಂದರ್ಯ ಜೀವನದಲ್ಲಿ ಮದುವೆ ಎನ್ನುವುದೇ ಶಾಪವಾಯಿತೆ? ಜನರ ಅನಿಸಿಕೆಗೆ ನಟಿ ಕೊಟ್ಟ ಉತ್ತರವೇನು?
 

Is marriage a curse in Actress Soundarya life

ನಟಿ ಸೌಂದರ್ಯ (Soundarya) ಯಾರಿಗೆ ತಾನೆ ಗೊತ್ತಿಲ್ಲ? ಹೆಸರಿಗೆ ತಕ್ಕಂತೆ ಸೌಂದರ್ಯದ ಘನಿಯಾಗಿದ್ದ  ನಟಿ, ಅದ್ಭುತ ನಟನೆಗೆ ಹೆಸರುವಾಸಿಯಾದವರು. ಸೌಂದರ್ಯ ಎಂದಾಕ್ಷಣ ನೆನಪಾಗುವುದು ಆಪ್ತಮಿತ್ರ ಚಿತ್ರ. ವಿಭಜಿತ ವ್ಯಕ್ತಿತ್ವ (split personality) ನಟನೆಯಿಂದ ಮೋಡಿ ಮಾಡಿದ ಸೌಂದರ್ಯ 27ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದರು. ಈ ಚಿಕ್ಕ ವಯಸ್ಸಿನಲ್ಲಿಯೇ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದು, ಈಕೆಯ ಮರಣದ ನಂತರ ಬಹಿರಂಗಗೊಂಡಿತ್ತು. ಅಂಥ ವ್ಯಕ್ತಿತ್ವ ಈಕೆಯದ್ದು. ಅಂದಹಾಗೆ ಇವರ ಮೂಲ ಹೆಸರು  ಸೌಮ್ಯ ಸತ್ಯನಾರಾಯಣ (Sowmya Satyanarayana). ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸೈ ಎನಿಸಿಕೊಂಡು ಕೋಟ್ಯಂತರ ಅಭಿಮಾನಿಗಳನ್ನು (Fans) ಗಳಿಸಿದ್ದ ಸೌಂದರ್ಯ, ಚಿಕ್ಕ ವಯಸ್ಸಿನಲ್ಲಿಯೇ ನಿರ್ಮಾಪಕಿಯೂ ಆಗಿದ್ದರು. ಇವರು ಕನ್ನಡದಲ್ಲಿ ನಿರ್ಮಾಣ ಮಾಡಿದ್ದ `ದ್ವೀಪ' (Dweepa) ಸಿನಿಮಾ ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಆದರೆ 2004 ಏಪ್ರಿಲ್ 17ರಂದು ಚಿತ್ರರಂಗದ ಪಾಲಿಗೆ ಕರಾಳ ದಿನ. ತೆಲಂಗಾಣದ ಕರೀಂನಗರಕ್ಕೆ ಪ್ರಚಾರಕ್ಕೆಂದು ಸೌಂದರ್ಯ ಅವರು ತಮ್ಮ ಸಹೋದರ ಅಮರನಾಥರೊಂದಿಗೆ ಬೆಂಗಳೂರಿನ ಮನೆಯಿಂದ ಹೊರಟಾಗ ವಿಮಾನ ದುರಂತ (Air Crash) ಸಂಭವಿಸಿ ಮೃತಪಟ್ಟರು.  ಐದು ತಿಂಗಳ ಗರ್ಭಿಣಿಯಾಗಿದ್ದರು ಈಕೆ,  ಕೋಟ್ಯಂತರ ಅಭಿಮಾನಿಗಳನ್ನು ಬಿಟ್ಟು ಹೋದರು. 1992ರಲ್ಲಿ ತೆರೆ ಕಂಡ ಕನ್ನಡದ `ಗಂಧರ್ವ' (Gandharva) ಚಿತ್ರದಿಂದ ಸಿನಿ ಪಯಣ ಆರಂಭಿಸಿದ್ದ ಇವರು,  ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅಲ್ಲಿಯೂ ಭರ್ಜರಿ ಯಶಸ್ಸು ಕಂಡರು. ಆಧುನಿಕ ಮಹಾನಟಿ ಸಾವಿತ್ರಿ ಎಂದೇ ಅಭಿಮಾನಿಗಳಿಂದ ಕರೆಸಿಕೊಂಡರು.  ದಕ್ಷಿಣ ಚಿತ್ರರಂಗದ ಎಲ್ಲಾ ಟಾಪ್ ನಿರ್ದೇಶಕರೊಂದಿಗೆ ಮತ್ತು ನಟರೊಂದಿಗೆ ಕಾರ್ಯನಿರ್ವಹಿಸಿದ ಇವರು,  ಕನ್ನಡ ಚಿತ್ರದಿಂದ ಸಿನಿರಂಗ ಪ್ರವೇಶ ಮಾಡಿದ್ದ ಸೌಂದರ್ಯರ ಕೊನೆಯ ಚಿತ್ರ ಕನ್ನಡದ ಆಪ್ತಮಿತ್ರ. 

ಹಂದಿ ಮಾಂಸದ ಜೊತೆ ಟೈಟ್, ಸೌದಿಯಲ್ಲಿ ಅರೆಸ್ಟ್​​ ಘಟನೆ ಬಿಚ್ಚಿಟ್ಟ ಅನುರಾಗ್​ ಕಶ್ಯಪ್​!

 7 ಏಪ್ರಿಲ್ 2003 ರಂದು ಇವರ ಮದುವೆ ಜಿ.ಎಸ್. ರಘು (GS Raghu) ಅವರ ಜೊತೆ ನೆರವೇರಿತು. 21ನೇ ವಯಸ್ಸಿನಲ್ಲಿಯೇ ಮದುವೆಯಾದ ಸೌಂದರ್ಯ ಅವರು ಮದುವೆಯಿಂದ  ಖುಷಿಯಾಗಿದ್ದರಾ ಅಥವಾ ಮದುವೆಯಾದ ಮೇಲೆ ಅವರ ಜೀವನವೇ ಬದಲಾಗಿ ಹೋಯ್ತಾ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಸೌಂದರ್ಯ ಮದುವೆಯಾಗಿದ್ದೇ ತಪ್ಪಾಯ್ತು ಎಂಬರ್ಥದಲ್ಲಿಯೂ ಮಾತು ಕೇಳಿಬಂದಿದೆ. ಹಾಗಿದ್ದರೆ ಈ ಬಗ್ಗೆ ಸೌಂದರ್ಯ ಮತ್ತು ರಘು ದಂಪತಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 

ನಾಯಕಿಯೊಬ್ಬಳು ಮದುವೆಯಾದ ಮೇಲೆ ಆಕೆಯ ಆದ್ಯತೆಗಳೇ ಬೇರೆಯಾಗುತ್ತವೆ. ಅವಳ ಗ್ಲಾಮರ್​ ಹೋಗುತ್ತದೆ ಎನ್ನುವುದು ನಿಜವೇ ಎಂಬ ಪ್ರಶ್ನೆಗೆ ಸೌಂದರ್ಯ ಹೌದು. ಇದು ನಿಜ ಎಂದಿದ್ದಾರೆ. ಇದರ ಅರ್ಥ ಯಾವುದೇ ಒಂದು ಮೂಲೆಯಲ್ಲಿ ಮದುವೆಯಾದ ಮೇಲೆ ತಮ್ಮ ಗ್ಲಾಮರ್​ ಕಡಿಮೆಯಾಗಿರುವ ಬಗ್ಗೆ ನಟಿಯಲ್ಲಿ ಅನಿಸಿಕೆ ಶುರುವಾಗಿತ್ತೇ ಎಂದು ಎನಿಸುವುದು ಉಂಟು. 'ಮದುವೆಯಾದ ಮೇಲೆ ಆದ್ಯತೆಗಳೇ ಬೇರೆಯಾಗಿ ಬಿಡುತ್ತವೆ. ಸಿಂಗಲ್​ ಆಗಿರುವಾಗಿ ಡೆಡಿಕೇಷನ್​ ಹೆಚ್ಚಿಗೆ ಇರುತ್ತದೆ. ಮಾಡುವ ಕೆಲಸದಲ್ಲಿ ಏಕಾಗ್ರತೆ ಇರುತ್ತದೆ. ಆದರೆ ಮದುವೆಯಾದ ಮೇಲೆ ಮನಸ್ಸು ಡೈವರ್ಟ್​ ಆಗಿಬಿಡುತ್ತದೆ. ಒಂದು ವಿಷಯದಲ್ಲಿ ಫುಲ್​ ಡಿಡಿಕೇಷನ್​ (Dedication) ಕೊಡಲು ಸಾಧ್ಯವಾಗುವುದಿಲ್ಲ. ಪತಿ, ಮಕ್ಕಳು ಎಂದೆಲ್ಲಾ ಕೇರ್​ ಟೇಕಿಂಗ್​ ಹೆಚ್ಚಾಗುವ ಕಾರಣದಿಂದ ಸಿನಿಮಾದ ವಿಷಯದಲ್ಲಿ ಹೆಚ್ಚು ಗಮನ ಹರಿಸಲು ಸಾಧ್ಯವಾಗುವುದಿಲ್ಲ' ಎಂದು ಒಪ್ಪಿಕೊಂಡಿದ್ದ ನಟಿ ಸೌಂದರ್ಯ, ತಾವು ಹಾಗಲ್ಲ ಎಂದೂ ಹೇಳಿದ್ದರು. 'ನನಗೆ ಯಾವುದೇ ವಿಷಯದಲ್ಲಾದರೂ ಸೈ. ಡೆಡಿಕೇಷನ್​ ಮುಖ್ಯ. ಸಂಪೂರ್ಣ ಮನಸ್ಸನ್ನು ಇಟ್ಟು ಕೆಲಸ ಮಾಡುತ್ತೇನೆ' ಎಂದಿದ್ದರು. ಸೌಂದರ್ಯ ಅವರ ಈ ಮಾತುಗಳನ್ನು ಕೇಳಿದ ಅಭಿಮಾನಿಗಳು ಆಕೆ ಮದುವೆಯಾಗಿದ್ದು ತಪ್ಪಾಯಿತು ಎಂಬ ಭಾವನೆ ಇದ್ದಂತಿದೆ ಎಂದು ವರ್ಣಿಸುತ್ತಿದ್ದಾರೆ.

Amitabh Bachchan: ಫಿಲ್ಮ್​ ಟಾಕೀಸ್​ನಲ್ಲಿ ಅಮಿತಾಭ್​ ಪ್ಯಾಂಟ್​ ಒಳಗೆ ಇಲಿ ಹೊಕ್ಕಾಗ....

ಇವೇ ವೇಳೆ ಸೌಂದರ್ಯ ಪತಿ ರಘು ಕೂಡ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. 'ಇಬ್ಬರದ್ದೂ ಸಮಾನ ಅಭಿರುಚಿ. ಸಿನಿಮಾ ಎಂದರೆ  ಇಬ್ಬರಿಗೂ ಇಷ್ಟ. ಇಬ್ಬರೂ  ಇಷ್ಟಪಟ್ಟು ಮದ್ವೆ ಆದ್ವಿ' ಎಂದಿದ್ದರು. ಹೋದ ಕಡೆಗಳಲ್ಲೆಲ್ಲಾ ಅಭಿಮಾನಿಗಳು ಸೌಂದರ್ಯ ಅವರನ್ನು ಮುತ್ತಿಕೊಳ್ಳೋದನ್ನು ನೋಡಿ ಕಸಿವಿಸಿ ಆಗ್ತಿತ್ತಾ ಎಂದು ಕೇಳಿದ ಪ್ರಶ್ನೆಗೆ ಅಷ್ಟೇ ನೈಜತೆಯಿಂದ ಉತ್ತರ ಕೊಟ್ಟಿದ್ದ ರಘು, 'ಹೌದು, ಮೊದ ಮೊದಲು ಹೀಗೆ ಅನ್ನಿಸ್ತಿತ್ತು. ಆದರೆ ಬರುಬರುತ್ತಾ ಇದು ಕಾಮನ್​ ಎನಿಸಿತು. ಆಕೆ ನಟಿಯಾಗಿದ್ದರಿಂದ ಇವೆಲ್ಲಾ ಸರ್ವೇ ಸಾಮಾನ್ಯ ಎನ್ನಿಸಿತು' ಎಂದಿದ್ದಾರೆ. ನಟಿಯನ್ನು ಮದುವೆಯಾಗಿದ್ದಕ್ಕೆ (marriage) ಇಗೋ ಸಮಸ್ಯೆ ಎದುರಾಯಿತಾ ಎಂದು ಕೇಳಿದಾಗ, 'ಹಾಗೆ ಆಗಲಿಲ್ಲ. ಏಕೆಂದರೆ ಆಕೆ ನಟಿಯೆಂಬುದನ್ನು ನೋಡಿ ನಾನು ಮದುವೆಯಾಗಲಿಲ್ಲ. ಅವಳು ಇಷ್ಟವಾದುದಕ್ಕೆ ಮದುವೆಯಾಗಿದ್ದು' ಎಂದಿದ್ದಾರೆ. 

Latest Videos
Follow Us:
Download App:
  • android
  • ios