Asianet Suvarna News Asianet Suvarna News

ಮತ್ತೆ ಮುನ್ನೆಲೆಗೆ ಬಂತು ಮೀ ಟೂ: ಕಮಲ ಹಾಸನ್​ ವಿರುದ್ಧ ಖ್ಯಾತ ಗಾಯಕಿ ಚಿನ್ಮಯಿ ಕೆಂಡಾಮಂಡಲ!

ನಟ ಕಮಲ ಹಾಸನ್​ ವಿರುದ್ಧ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ್​ ಅವರು ಬಹಳ ಗರಂ ಆಗಿದ್ದಾರೆ. ಮತ್ತೆ ಮುನ್ನೆಲೆಗೆ ಬಂದಿದೆ ಮೀ ಟೂ. ಏನಿದು ವಿಷ್ಯ? 
 

Chinmayi Sripada Criticizes Kamal Haasan For Attending Me Too Accused Vairamuthus Event suc
Author
First Published Jan 2, 2024, 2:29 PM IST

2018ರಲ್ಲಿ ಭಾರಿ ಸದ್ದು ಮಾಡಿದ್ದ ವಿಷಯಗಳಲ್ಲಿ ಒಂದು ಮೀ ಟೂ ಅಭಿಯಾನ. ಕಮಲ​ ಹಾಸನ್​ ಪುತ್ರಿ, ನಟಿ ಶ್ರುತಿ ಹಾಸನ್​ ಅವರು ತಮಗೆ ಆಗಿರುವ ಲೈಂಗಿಕ ದೌರ್ಜನ್ಯದ ಕುರಿತು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲದೇ ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಮಹಿಳೆಯರು ಈ ವಿಷಯ ಬಗ್ಗೆ ಬಹಿರಂಗವಾಗಿ ಮಾತನಾಡಿದರು. ತಮ್ಮ ಮೇಲಾಗಿರುವ ಲೈಂಗಿಕ ದೌರ್ಜನ್ಯದ ಕುರಿತು ಹೇಳಿಕೆ ನೀಡಿದರು. ಇಂದಿಗೂ ಕೆಲವು ನಟಿಯರು ನಿರ್ದೇಶಕರು, ನಿರ್ಮಾಪಕು, ನಟರು ಹೀಗೆ ತಮಗೂ  ಲೈಂಗಿಕ ದೌರ್ಜನ್ಯ ಆಗಿರುವುದನ್ನು ಹೇಳುತ್ತಲೇ ಇದ್ದಾರೆ. ಸಿನಿಮಾದಲ್ಲಿ ನೆಲೆಯೂರಬೇಕು ಎಂದರೆ ಹೇಗೆ ತಮ್ಮನ್ನು ನೇರವಾಗಿ ಮಂಚಕ್ಕೆ ಕರೆದಿದ್ದರು ಎಂಬ ಬಗ್ಗೆ ವಿಷಯ ಹೇಳುತ್ತಲೇ ಇದ್ದಾರೆ. ಈ ವಿಷಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ,  ಖ್ಯಾತ ಗಾಯಕಿ ಮತ್ತು ಡಬ್ಬಿಂಗ್​ ಆರ್ಟಿಸ್ಟ್ ಚಿನ್ಮಯಿ ಶ್ರೀಪಾದ.

ಚಿನ್ಮಯಿ ಅವರು ಇದೀಗ ನಟ ಕಮಲ ಹಾಸನ್​ ವಿರುದ್ಧ ಕಿಡಿ ಕಾರಿದ್ದಾರೆ, ಅವರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ ಕಮಲ ಹಾಸನ್​ ಅವರು, ವೇದಿಕೆಯೊಂದನ್ನು ಹಂಚಿಕೊಂಡಿರುವ ಹಿನ್ನೆಲೆಯಲ್ಲಿ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಮಲ ಹಾಸನ್​ ಅವರು ತಮಿಳಿನ ಜನಪ್ರಿಯ ಗೀತರಚನಕಾರ ವೈರಮುತ್ತು ಅವರ ಜೊತೆ ವೇದಿಕೆ ಹಂಚಿಕೊಂಡಿದ್ದು, ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೋಗಿರುವುದೇ ಇಷ್ಟೆಲ್ಲಾ ಗಲಾಟೆಗೆ ಕಾರಣವಾಗಿದೆ.

ಹೊಸ ವರ್ಷಕ್ಕೆ ಹೊಸ ಸರ್​ಪ್ರೈಸ್​: ಅಯೋಧ್ಯೆ ಪುಣ್ಯಭೂಮಿಯಲ್ಲಿ ಡಾ.ಬ್ರೋ- ರಾಮಾಯಣ ನಂಟಿರೋ ನೇಪಾಳಕ್ಕೂ ಭೇಟಿ

ಅಷ್ಟಕ್ಕೂ ಆಗಿರುವುದು ಏನೆಂದರೆ, ಚಿನ್ಮಯಿ ಅವರು, ಈ ಹಿಂದೆ  ವೈರಮುತ್ತು ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. 2018ರಲ್ಲಿ ಈ ಘಟನೆ ನಡೆದಿತ್ತು. ವೈರಮುತ್ತು ಅವರ ವಿರುದ್ಧ ಭಾರಿ ಆಪಾದನೆ ಮಾಡಿದ್ದದರು ಚಿನ್ಮಯಿ. ಆದರೆ ಇದೀಗ ವೈರಮುತ್ತು ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಕಮಲ ಹಾಸನ್​ ಅವರು ಹೋಗಿರುವುದು ಗಾಯಕಿಯ ಕೋಪಕ್ಕೆ ಕಾರಣವಾಗಿದೆ.  ಪುಸ್ತಕ ಬಿಡುಗಡೆ ಸಮಾರಂಭದ ಫೋಟೋ ಶೇರ್ ಮಾಡಿರುವ ಚಿನ್ಮಯಿ,​ ಈ ಹಿಂದೆ ಕೂಡ ಕಮಲ ಹಾಸನ್ ಇದೇ ರೀತಿ ಮಾಡಿದ್ದರು. ಅವರ ಮಗಳೇ ಮೀ ಟೂ ಅಭಿಯಾನವನ್ನು ಆರಂಭಿಸಿದವರು. ವೈರಮುತ್ತ ಅವರ ವಿರುದ್ಧ ಎಷ್ಟೊಂದು ಆಪಾದನೆ ಇದ್ದರೂ ಈಗ ಮತ್ತೊಮ್ಮೆ ಕಮಲ ಹಾಸನ್ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
  
ಕಮಲ ಹಾಸನ್ ಅವರಂತಹ ಸ್ಟಾರ್​ಗಳು ಇಂಥ ಮೀ ಟೂ ಆರೋಪ ಹೊತ್ತವರಿಗೆ ಬೆಂಬಲ ನೀಡುತ್ತಿರುವುದು ಸರಿಯಲ್ಲ. ತಮಿಳುನಾಡಿನ ಅತ್ಯಂತ ಶಕ್ತಿಶಾಲಿ ಜನರು ನನಗೆ ಕಿರುಕುಳ ನೀಡಿದವರ ಜೊತೆ ನಿಂತಿದ್ದಾರೆ. ಮತ್ತೊಂದೆಡೆ, ನನ್ನನ್ನು ಇಂಡಸ್ಟ್ರಿಯಿಂದ ನಿಷೇಧಿಸಲಾಯಿತು, ನನ್ನ ವೃತ್ತಿಜೀವನ ಮುಗಿದಿದೆ. ಅಪರಾಧಿಗಳನ್ನು ಬೆಂಬಲಿಸುವ ಮತ್ತು ಉತ್ತೇಜಿಸುವ ಮತ್ತು ಪ್ರಾಮಾಣಿಕರನ್ನು ಬಂಧಿಸುವ ಸಂಪೂರ್ಣ ಪರಿಸರ ವ್ಯವಸ್ಥೆಯು ನಾಶವಾಗುತ್ತದೆ ಎಂದು ಹೇಳೀರುವ ಗಾಯಕಿ,  ನನ್ನ ಆಸೆ ಈಡೇರುವವರೆಗೆ ನಾನು ಪ್ರಾರ್ಥಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ಇದನ್ನು ಬಿಟ್ಟರೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.  

ಪತಿಯ ಕಣ್ಣಿಗೆ ಬಟ್ಟೆ ಕಟ್ಟಿ ಡಿಫರೆಂಟಾಗಿ ಗರ್ಭಿಣಿ ವಿಷ್ಯ ತಿಳಿಸಿದ ನಟಿ ಅದಿತಿ: ವಿಡಿಯೋ ನೋಡಿ ಆಹಾ ಎಂದ ಫ್ಯಾನ್ಸ್​

Follow Us:
Download App:
  • android
  • ios