ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾದ ನೀತಾ ಅಂಬಾನಿ ಮಗನ ಮದುವೆ ಪೂರ್ವ ಕಾರ್ಯಕ್ರಮದಲ್ಲಿ ಚನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರರಾದ ಎಂ.ಎಸ್. ಧೋನಿ ಹಾಗೂ ಡ್ವೇನ್ ಬ್ರಾವೋ ಕೋಲಾಟ ಆಡಿದ್ದಾರೆ.

ಮುಂಬೈ(ಮಾ.04): ದೇಶಾದ್ಯಂತ ಕ್ರಿಕೆಟ್‌ ಪ್ರೇಮಿಗಳು ಕುತೂಹಲದಿಂದ ವೀಕ್ಷಿಸುವ ಐಪಿಎಲ್‌ ಇನ್ನೇನು ಕೆಲವೇ ದಿನಗಳಲ್ಲಿ ಮರುಕಳಿಸುತ್ತಿದೆ. ಆದರೆ, ಮುಂಬೈ ಇಂಡಿಯನ್ಸ್‌ ತಂಡ ಮಾಲೀಕ ನೀತಾ ಅಂಬಾನಿ ಮಗ ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಸ್ಟಾರ್ ಬ್ಯಾಟರ್ಸ್‌ಗಳಾದ ಮಹೇಂದ್ರ ಸಿಂಗ್ ಧೋನಿ ಹಾಗೂ ಡ್ವೇನ್ ಬ್ರಾವೋ ಅವರು ಪಾಲ್ಗೊಂಡಿದ್ದು, ಸಖತ್ ಕೋಲಾಟವನ್ನೂ ಆಡಿದ್ದಾರೆ.

ಹೌದು, ಅನಂತ್ ಅಂಬಾನಿ ಮದುವೆಯ ಪೂರ್ವದ ಕಾರ್ಯಕ್ರಮದಲ್ಲಿ ಇಡೀ ದೇಶದ ಎಲ್ಲ ಸ್ಟಾರ್ಸ್‌ಗಳೂ ಕೂಡ ಪಾಲ್ಗೊಂಡಿದ್ದಾರೆ. ಅಷಟೇ ಯಾಕೆ, ವಿಶ್ವದಲ್ಲಿ ನಾನೇ ಗ್ರೇಟ್‌ ಎನ್ನುವ ಜುಕರ್‌ಬರ್ಗ್‌, ಬಿಲ್‌ಗೇಟ್ಸ್, ಟ್ರಂಪ್ ಮಕ್ಕಳನ್ನೂ ಮದುವೆಗೆ ಕರೆಸಿಕೊಳ್ಳಲಾಗಿದೆ. ಈ ಮದುವೆ ಕಾರ್ಯಕ್ರಮ ಸಂಪೂರ್ಣವಾಗಿ ವಿಶ್ವದ ಹಲವು ಸ್ಟಾರ್ಸ್‌ಗಳನ್ನು ಒಂದು ವೇದಿಕೆಯಲ್ಲಿ ಸೇರಿಸಿದ ಖ್ಯಾತಿಯನ್ನು ಹೊಂದಿದೆ. ಅದರಲ್ಲಿಯೂ ಸ್ಟಾರ್‌ ಕ್ರಿಕೆಟರ್ಸ್ಗಳೂ ಪಾಲ್ಗೊಂಡು ಮದುವೆಗೆ ಮೆರಗು ಹೆಚ್ಚಿಸಿದ್ದಾರೆ. ಅದರಲ್ಲಿ ಧೋನಿ ಮತ್ತು ಬ್ರಾವೋ ಅವರ ಡ್ಯಾನ್ಸ್‌ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

ಅನಂತ್ ಅಂಬಾನಿ ಮದುವೆಯಲ್ಲಿ ಧೋನಿ ಮಿಂಚು..! ಮಹಿ ನೋಡಿ ದಂಗಾದ ಫ್ಯಾನ್ಸ್

ದೇಶದಲ್ಲಿ ಚುಟುಕು ಕ್ರಿಕೆಟ್‌ಗೆ ಹೆಚ್ಚು ಪ್ರಾಧಾನ್ಯತೆ ತಂದುಕೊಟ್ಟ ಇಂಡಿಯನ್ ಪ್ರೀಮಿಯರ ಲೀಗ್‌ನ ಅತಿಹೆಚ್ಚು ಕಪ್‌ ಗೆದ್ದ ತಂಡಗಳ ಪೈಕಿ ನೀತಾ ಅಂಬಾನಿ ಮಾಲೀಕತ್ವದ ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಬದ್ಧ ವೈರಿಗಳೇ ಎಂದು ಹೇಳಬಹುದು. ಆದರೆ, ಈಗ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರ ಮಗನ ಮದುವೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಬಂದು ಕೋಲಾಟ ಆಡುತ್ತಿರುವುದು ನೋಡಿ ಜನರು ಫುಲ್ ಖುಷಿಯಾಗಿದ್ದಾರೆ. ಆದರೆ, ಇದನ್ನು ಕಾಮಿಡಿಯನ್ನಾಗಿ ತೆಗೆದುಕೊಂಡಿರುವ ಕೆಲವರು ಕೋಲಾಟಕ್ಕಾಗಿ ತಂಡವನ್ನೇ ಬದಲಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ಕೇಳಲು ಹಾಸ್ಯಾಸ್ಪದ ಎನಿಸಿದರೂ ಸತ್ಯವೇ ಆಗಿದೆ. ಒಟ್ಟಾರೆ, ಇದು ಮದುವೆ ಕಾರ್ಯಕ್ರಮವಾಗಿದ್ದು, ಸ್ಟಾರ್ಸ್‌ಗಳು ಮನರಂಜನೆಗೆ ದೊಡ್ಡ ವೇದಿಕೆಯನ್ನು ಸದುಪಯೋಗ ಮಾಡಿಕೊಂಡಿದ್ದಾರೆ ಎಂಬುದಂತೂ ಸ್ಪಷ್ಟವಾಗಿ ಕಂಡುಬರುತ್ತಿದೆ.

MS Dhoni Dwayne Bravo and Shakshi grooves to Garba steps in AnantAmbani Radhika Merchant Pre-Wedding

ನಿವೃತ್ತಿಯಾಗಿ 5 ವರ್ಷವಾದ್ರೂ ಧೋನಿ ಖದರ್ ಕಡಿಮೆಯಾಗಿಲ್ಲ: 
ಮಹೇಂದ್ರ ಸಿಂಗ್ ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದ ಐದು ವರ್ಷಗಳು ಕಳೆದಿದೆ.. ಆದ್ರೂ ಅವರ ಖದರ್ ಮಾತ್ರ ಒಂಚೂರು ಕಮ್ಮಿಯಾಗಿಲ್ಲ.. ಪಾಪ್ಯುಲಾರಿಟಿಯಲ್ಲೂ ಹಿಂದೆ ಬಿದ್ದಿಲ್ಲ.. ಇನ್ನು ಸ್ಟೈಲ್ ಮತ್ತು ಫಿಟ್ನೆಸ್ನಲ್ಲೂ ಯುವ ಕ್ರಿಕೆಟಿಗರಿಗೆ ಸೆಡ್ಡು ಹೊಡೆಯುತ್ತಿದ್ದಾರೆ. ಅವರ ವಯಸ್ಸು 42 ಆಗಿದ್ದೂ ಇನ್ನೂ ಐಪಿಎಲ್ ಆಡ್ತಿದ್ದಾರೆ. ಆದ್ರೀಗ ಅವರ ಹೊಸ ಸ್ಟೈಲ್ ನೋಡಿ ಫ್ಯಾನ್ಸ್ ದಂಗಾಗಿದ್ದಾರೆ. ಮದುವೆ ಗಂಡಿಗಿಂತ ಮದುವೆಯಲ್ಲಿ ಭಾಗವಹಿಸಿರುವ ಈ ಕ್ರಿಕೆಟಿಗನೇ ಮೇನ್ ಅಟ್ರ್ಯಾಕ್ಷನ್ ಆಗಿದ್ದಾನೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕನನ್ನೊಮ್ಮೆ ನೋಡಿದ್ರೆ 20 ವರ್ಷಗಳ ಹಿಂದೆ ಇಂಟರ್ ನ್ಯಾಷನಲ್ ಕ್ರಿಕೆಟ್ಗೆ ಡೆಬ್ಯು ಮಾಡಬೇಕಾದ್ರೆ ಹೇಗಿದ್ದರೂ ಹಾಗೆಯೇ ಇದ್ದಾರೆ. ಅದೇ ಲುಕ್, ಅದೇ ಸ್ಟೈಲ್, ಅದೇ ಫಿಟ್ನೆಸ್. ಅದೇ ಹೇರ್ಸ್ಟೈಲ್‌ನಲ್ಲಿ ಪುನಃ ಕಾಣಿಸಿಕೊಂಡಿದ್ದಾರೆ.

IPL ಆರಂಭಕ್ಕೂ ಮುನ್ನ ದೈವಿಶಕ್ತಿಯ ಮೊರೆಹೋದ ಧೋನಿ..! ಮಹಿ ಆರಾಧಿಸ್ತಿರೋ ಆ ಅಧಿದೇವತೆ ಯಾರು ಗೊತ್ತಾ..?

ಇನ್ನು ಎಂ.ಎಸ್. ಧೋನಿ ಅವರು, ತಮ್ಮ ನೋಟ ಮತ್ತು ಸ್ಟೈಲ್‌ ಅನ್ನು ಯಾವಾಗಲೂ ಬದಲಿಸಿಕೊಳ್ಳುತ್ತಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಐಪಿಎಲ್‌ನಲ್ಲಿ ಧೋನಿ ಲುಕ್ ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಪ್ರತಿ ವರ್ಷ ಒಂದಲ್ಲ ಒಂದು ಹೊಸ ಲುಕ್ನಲ್ಲಿ ಕಾಣಿಸಿಕೊಳ್ತಾರೆ. ಇದೀಗ ಧೋನಿ ಪುನಃ ತಮ್ಮ ಲುಕ್ ಬದಲಾಯಿಸಿದ್ದು, ತಮ್ಮ ಹಳೆಯ ಶೈಲಿಗೆ ಮರಳಿದ್ದಾರೆ. ಇದರಿಂದ ಮಹಿಯ ಲುಕ್ ಹಾಗೂ ಫಿಟ್ ನೆಸ್ ಕಂಡು ಅಭಿಮಾನಿಗಳು ಸಂತಸಗೊಂಡಿದ್ದಾರೆ.