ಸೂರ್ಯ ನಟನೆಯ ಸಿನಿಮಾದಲ್ಲಿ 'ಪ್ರೇಮಲು' ಸಿನಿಮಾ ಮೂಲಕ ಸೌತ್ ಇಂಡಿಯಾದಲ್ಲೇ ಫೇಮಸ್ ಆದ ನಟಿ ಮಮಿತಾ ನಾಯಕಿ ಎಂದಾಗ ರಾಧಿಕಾಗೆ ಅನುಮಾನವಿತ್ತು. ಆದರೆ, ಆಕೆಯ ನಟನೆ ನೋಡಿ ಶಾಕ್ ಆಗಿದ್ದಾಗಿ ಹಿರಿಯ ನಟಿ ಹೇಳಿಕೊಂಡಿದ್ದಾರೆ.

'ಪ್ರೇಮಲು' ಸಿನಿಮಾ ಮೂಲಕ ಸೌತ್ ಇಂಡಿಯಾದಲ್ಲೇ ಫೇಮಸ್ ಆದ ನಟಿ ಮಮಿತಾ ಬೈಜು. 2017ರಲ್ಲಿ 'ಸರ್ವೋಪರಿ' ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ 'ಹನಿ ಬೀ 2', 'ವರತನ್', 'ವಿಕೃತಿ', 'ಆಪರೇಷನ್ ಜಾವಾ' ದಂತಹ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದರು. 'ಸೂಪರ್ ಶರಣ್ಯ' ಚಿತ್ರ ಮಮಿತಾಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. 'ಪ್ರೇಮಲು' ಸೂಪರ್ ಹಿಟ್ ಆದ್ಮೇಲಂತೂ ಬೇರೆ ಭಾಷೆಯ ಪ್ರೇಕ್ಷಕರಿಗೂ ಇವರು ಅಚ್ಚುಮೆಚ್ಚಿನ ನಟಿಯಾದರು. ಈಗ ಹಿರಿಯ ನಟಿ ರಾಧಿಕಾ ಶರತ್‌ಕುಮಾರ್, ಮಮಿತಾ ಅವರನ್ನು ಹಾಡಿ ಹೊಗಳಿರುವುದು ಹೊಸ ಸುದ್ದಿ.

Add Asianetnews Kannada as a Preferred SourcegooglePreferred

ಸೂರ್ಯ ನಟನೆಯ 'ವಿಶ್ವನಾಥನ್ ಆ್ಯಂಡ್ ಸನ್ಸ್' ಚಿತ್ರದಲ್ಲಿ ಮಮಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಕಥೆ ಕೇಳಿದಾಗ, ನಾಯಕಿಯ ಪಾತ್ರ ಬಹಳ ಮುಖ್ಯ ಅನಿಸಿತ್ತು ಅಂತ ರಾಧಿಕಾ ಹೇಳಿದ್ದಾರೆ. "ಅದ್ಭುತ ನಟನಾ ಕೌಶಲ್ಯ ಇರೋ ಟಾಪ್ ನಟಿಯೊಬ್ಬರಿಂದ ಮಾತ್ರ ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯ" ಅಂತ ತಾವು ಚಿತ್ರತಂಡಕ್ಕೆ ಹೇಳಿದ್ದಾಗಿಯೂ ರಾಧಿಕಾ ತಿಳಿಸಿದ್ದಾರೆ. ಮಮಿತಾ ನಾಯಕಿ ಅಂತ ಗೊತ್ತಾದಾಗ ಅವರಿಗೆ ಅಚ್ಚರಿಯಾಗಿತ್ತಂತೆ. "ಆದರೆ, ರಿಹರ್ಸಲ್ ವೇಳೆ ಮಮಿತಾ ಆ ಪಾತ್ರವನ್ನು ಅಷ್ಟು ಆಳವಾಗಿ ಅರ್ಥಮಾಡಿಕೊಂಡು, ಭಾವನಾತ್ಮಕವಾಗಿ ನಟಿಸಿದ್ದನ್ನು ನೋಡಿ ನನಗೆ ಶಾಕ್ ಆಯ್ತು. ಈ ಸಿನಿಮಾದ ಪ್ರಮುಖ ಹೈಲೈಟ್‌ಗಳಲ್ಲಿ ಮಮಿತಾ ಕೂಡ ಒಬ್ಬರಾಗುತ್ತಾರೆ" ಎಂದು ರಾಧಿಕಾ ಶರತ್‌ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಚಿತ್ರದಲ್ಲಿ ರಾಧಿಕಾ ಕೂಡ ನಟಿಸುತ್ತಿದ್ದಾರೆ.

ವಿಜಯ್ ಜೊತೆಗಿನ 'ಜನನಾಯಗನ್' ಚಿತ್ರದಲ್ಲಿ ಮಮಿತಾ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇನ್ನು ವಿಘ್ನೇಶ್ ರಾಜ ನಿರ್ದೇಶನದ, ಧನುಷ್ ನಟನೆಯ 'ಕರ' ಚಿತ್ರಕ್ಕೂ ಮಮಿತಾ ನಾಯಕಿ. ಈ ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡುತ್ತಿದ್ದು, ತೇನಿ ಈಶ್ವರ್ ಛಾಯಾಗ್ರಹಣವಿದೆ. ಮಲಯಾಳಂನ ಸುರಾಜ್ ವೆಂಜಾರಮೂಡು ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಈ ವರ್ಷದ ಮಧ್ಯದಲ್ಲಿ 'ಕರ' ತೆರೆಗೆ ಬರುವ ನಿರೀಕ್ಷೆಯಿದೆ. ಇದರ ಫಸ್ಟ್ ಲುಕ್ ಪೋಸ್ಟರ್ ಕೂಡ ಸಖತ್ ಚರ್ಚೆಯಾಗಿತ್ತು. ಇದಲ್ಲದೆ, 'ರಾಕ್ಷಸನ್', 'ಮುಂಡಾಸುಪೆಟ್ಟಿ' ಖ್ಯಾತಿಯ ರಾಮ್ ಕುಮಾರ್ ನಿರ್ದೇಶನದ 'ಇರಂಡು ವಾನಂ' ಚಿತ್ರದಲ್ಲಿ ವಿಷ್ಣು ವಿಶಾಲ್​ಗೆ ನಾಯಕಿಯಾಗಿ ಮಮಿತಾ ಕಾಣಿಸಿಕೊಳ್ಳಲಿದ್ದಾರೆ.

ನಿವಿನ್ ಪೌಳಿ ನಾಯಕ

'ಪ್ರೇಮಲು' ನಂತರ ಮಮಿತಾ ಮಲಯಾಳಂಗೆ 'ಬೆತ್ಲಹೇಂ ಕುಟುಂಬ ಯೂನಿಟ್' ಚಿತ್ರದ ಮೂಲಕ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಿವಿನ್ ಪೌಳಿ ನಾಯಕ. ಗಿರೀಶ್ ಎ.ಡಿ. ಮತ್ತು ಭಾವನಾ ಸ್ಟುಡಿಯೋಸ್ ಕಾಂಬಿನೇಷನ್ ಮತ್ತೆ ಒಂದಾಗಿದೆ. 'ಪ್ರೇಮಲು' ತರಾನೇ ಇದೂ ಒಂದು ರೋಮ್ಯಾಂಟಿಕ್ ಕಾಮಿಡಿ ಚಿತ್ರ ಆಗಿರಲಿದೆ ಎಂದು ಪ್ರೇಕ್ಷಕರು ನಿರೀಕ್ಷಿಸುತ್ತಿದ್ದಾರೆ. 'ಸರ್ವಂ ಮಾಯ' ಮೂಲಕ ಮತ್ತೆ ಫಾರ್ಮ್‌ಗೆ ಬಂದಿರುವ ನಿವಿನ್, ರೊಮ್ಯಾಂಟಿಕ್ ಕಾಮಿಡಿಗಳಲ್ಲೇ ಹೆಸರು ಮಾಡಿರುವ ಗಿರೀಶ್ ಎ.ಡಿ. ಜೊತೆ ಸೇರಿರುವುದರಿಂದ 'ಬೆತ್ಲಹೇಂ ಕುಟುಂಬ ಯೂನಿಟ್' 2026ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರವನ್ನು ಭಾವನಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ದಿಲೀಶ್ ಪೋತನ್, ಫಹಾದ್ ಫಾಸಿಲ್ ಮತ್ತು ಶ್ಯಾಮ್ ಪುಷ್ಕರನ್ ನಿರ್ಮಿಸುತ್ತಿದ್ದಾರೆ. 'ಪ್ರೇಮಲು' ನಂತರ ಭಾವನಾ ಸ್ಟುಡಿಯೋಸ್ ನಿರ್ಮಿಸುತ್ತಿರುವ ಆರನೇ ಸಿನಿಮಾ ಇದು. ಗಿರೀಶ್ ಎ.ಡಿ. ಮತ್ತು ಕಿರಣ್ ಜೋಸಿ ಸೇರಿ ಕಥೆ ಬರೆದಿದ್ದಾರೆ. ಸುರೇಶ್ ಕೃಷ್ಣ, ಬಿಂದು ಪಣಿಕ್ಕರ್, ವಿನಯ್ ಫೋರ್ಟ್, ರೋಶನ್ ಶಾನವಾಸ್, ಶ್ಯಾಮ್ ಮೋಹನ್, ಶಮೀರ್ ಖಾನ್ ಮತ್ತು ಶ್ರಿಂದಾ ಚಿತ್ರದ ಇತರ ತಾರಾಗಣದಲ್ಲಿದ್ದಾರೆ.