Asianet Suvarna News Asianet Suvarna News

ದುರಂತಗಳ ಸರಮಾಲೆಯಲ್ಲೇ ಮಿಂದೆದ್ದ ಸೆಕ್ಸ್​ ಬಾಂಬ್​ ಸಿಲ್ಕ್​ ಸ್ಮಿತಾ ಹುಟ್ಟುಹಬ್ಬಕ್ಕೆ ಹೀಗೊಂದು ಅನೌನ್ಸ್​ಮೆಂಟ್​!

 ದುರಂತಗಳ ಸರಮಾಲೆಯಲ್ಲೇ ಮಿಂದೆದ್ದ ಸೆಕ್ಸ್​ ಬಾಂಬ್​ ಎಂದೇ ಖ್ಯಾತಿ ಪಡೆದಿರುವ ಸಿಲ್ಕ್​ ಸ್ಮಿತಾ ಹುಟ್ಟುಹಬ್ಬ ಇಂದು. ಹುಟ್ಟುಹಬ್ಬಕ್ಕೆ  ಹೀಗೊಂದು ಅನೌನ್ಸ್​ಮೆಂಟ್​ ಬಂದಿದೆ!
 

Chandrika Ravi stuns fans with her first look as Silk Smitha an untold story on the way suc
Author
First Published Dec 2, 2023, 9:42 PM IST

ಸೆಕ್ಸ್​ ಬಾಂಬ್​ (Sex Bomb) ಎಂದೇ ಖ್ಯಾತಿ ಪಡೆದಿದ್ದ ನಟಿ ಸಿಲ್ಕ್ ಸ್ಮಿತಾ ಅವರನ್ನು ನೋಡುವುದಕ್ಕಾಗಿಯೇ ಒಂದು ಕಾಲದಲ್ಲಿ ಚಿತ್ರರಂಗಗಳಲ್ಲಿ ನೂಕು ನುಗ್ಗಲಾಗುತ್ತಿತ್ತು. ಈಕೆಯ ಡ್ಯಾನ್ಸ್ ಚಿತ್ರದಲ್ಲಿ ಇದೆ ಎಂದರೆ  ಸ್ಟಾರ್​ ನಟರೂ ತಮ್ಮ ಸಿನಿಮಾ ಬಿಡುಗಡೆಯನ್ನು ಮುಂದೂಡುತ್ತಿದ್ದರು ಎನ್ನುವ ಕಾಲವದು. ಇಂದಿನ ನಟಿಮಣಿಗಳಂತೆ ಪೈಪೋಟಿಗೆ ಬಿದ್ದು ಧಾರಾಳ ದೇಹ ಪ್ರದರ್ಶನಕ್ಕೆ ಅಂದಿನ ನಟಿಯರು ಒಪ್ಪದ ಕಾರಣ ಬಿ ಗ್ರೇಡ್​ ಕಲಾವಿದೆ ಎನ್ನುವ ಪಟ್ಟ ಕಟ್ಟಿ ಕೆಲವು ನಟಿಯರನ್ನು ಬಳಸಿಕೊಳ್ಳುವ ಕಾಲದಲ್ಲಿ ಸಕತ್​ ಫೇಮಸ್​ ಆದವರು ಸಿಲ್ಕ್​ ಸ್ಮಿತಾ.  ಇಂದಿನ ನಟಿಯರಿಗಿಂತಲೂ ನೂರು ಪಾಲು ಉತ್ತಮ ಸೌಂದರ್ಯ ಹಾಗೂ ನಟನಾ ಸಾಮರ್ಥ್ಯ ಹೊಂದಿದ್ದರೂ ನಾಯಕಿಯಾಗಿ ಮಿಂಚುವ ಅವಕಾಶ ಸಿಕ್ಕಿರಲಿಲ್ಲ ಕೆಲವು ನಟಿಯರಿಗೆ. ಅಂಥವರನ್ನು ಕ್ಯಾಬರೆ ನೃತ್ಯಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಅಂಥವರಲ್ಲಿ ಒಬ್ಬರು ಈಕೆ. 

ಇಂದು ಅಂದರೆ ಡಿಸೆಂಬರ್​ 2,  ಸಿಲ್ಕ್​ ಸ್ಮಿತಾ ಅವರ ಹುಟ್ಟುಹಬ್ಬ. ಜೀವನದಲ್ಲಿ ಆರ್ಥಿಕ ಹಿನ್ನಡೆ ಮತ್ತು ಹದಗೆಟ್ಟ ಸಂಬಂಧಗಳಿಂದ ನಟಿ 1996 ರಲ್ಲಿ 35ನೇ ವಯಸ್ಸಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಹೊಳೆಯುವ ಕಣ್ಣುಗಳು, ಸುವಾಸನೆಯ ಕೂದಲು ಮತ್ತು ದ್ರಾವಿಡ ಮೈಬಣ್ಣವು ಸಿಲ್ಕ್ ಸ್ಮಿತಾಳನ್ನು ಖ್ಯಾತಿಯ ಉತ್ತುಂಗಕ್ಕೆ ಕೊಂಡೊಯ್ದಿತು. ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಅವರ ಆತ್ಮಹತ್ಯೆ ಸುದ್ದಿ ಅಭಿಮಾನಿಗಳಲ್ಲಿ ದೊಡ್ಡ ಆಘಾತವನ್ನುಂಟು ಮಾಡಿತು. ಚೆನ್ನೈನ ಫ್ಲಾಟ್‌ನಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಸ್ಮಿತಾ ಅವರ ದೇಹದಲ್ಲಿ ಹೆಚ್ಚುವರಿ ಆಲ್ಕೋಹಾಲ್​ ಕಂಡುಬಂದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನಿರ್ಣಯಿಸಲಾಯಿತು. 1996ರ ಸೆಪ್ಟೆಂಬರ್​ 23ರಂದು ಸ್ಮಿತಾ ಇಹಲೋಕ ತ್ಯಜಿಸಿಯೇ ಬಿಟ್ಟರು. 

Death Anniversary: ಸಿಲ್ಕ್​ ಸ್ಮಿತಾ ಮೃತದೇಹದ ಜೊತೆ ಹಲವು ಬಾರಿ ಸೆಕ್ಸ್​: ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಪತ್ರಕರ್ತ

ಇಂತಿಪ್ಪ ಸಿಲ್ಕ್​ ಸ್ಮಿತಾರ ಸಿಲ್ಕ್ ಜೀವನದ ಹಲವು ಮಜಲುಗಳನ್ನು ಆಧರಿಸಿದ್ದ ಸಿನಿಮಾವೊಂದು ಇದಾಗಲೇ ಬಿಡುಗಡೆಯಾಗಿದೆ.  ವಿದ್ಯಾ ಬಾಲನ್ ಅಭಿನಯದ ‘ದಿ ಡರ್ಟಿ ಪಿಕ್ಚರ್’ ಸಿನಿಮಾ ಸಿಲ್ಕ್​ ಸ್ಮಿತಾ ಅವರ ಜೀವನದ ನರಕ ಯಾತನೆ ಹಾಗೂ ಬಣ್ಣದ ಲೋಕವನ್ನು ತೆರೆದಿಟ್ಟಿದೆ. ಈ ಚಿತ್ರದಿಂದ ವಿದ್ಯಾ ಬಾಲನ್​ ಅವರ ಕೂಡ ಸಕತ್​ ಖ್ಯಾತಿ ಗಳಿಸಿದ್ದರು. ಇದೀಗ ಇವರ ಹುಟ್ಟುಹಬ್ಬದಂದೇ ಮತ್ತೊಂದು ಚಿತ್ರ ಬಿಡುಗಡೆಗೆ ಸಿದ್ಧವಾಗಿರುವುದಾಗಿ ಘೋಷಣೆ ಮಾಡಲಾಗಿದೆ.  ಅವರ ಜೀವನ ಕಥೆಯನ್ನು ಆಧರಿಸಿದ ಮತ್ತೊಂದು ಬಯೋಪಿಕ್ ಅನ್ನು ಇಂದು ಘೋಷಿಸಲಾಗಿದ್ದು, ಇದರ ಹೆಸರು  ‘ಸಿಲ್ಕ್ ಸ್ಮಿತಾ-ದಿ ಅನ್‌ಟೋಲ್ಡ್ ಸ್ಟೋರಿ’.
 
ಈ ಸಿನಿಮಾದಲ್ಲಿ ಚಂದ್ರಿಕಾ ರವಿ ಸಿಲ್ಕ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.   ಸಿಲ್ಕ್ ಸ್ಮಿತಾ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಈ ಪೋಸ್ಟರ್ ನಲ್ಲಿ ಚಂದ್ರಿಕಾ ರವಿ ಸಿಲ್ಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಎಕ್ಸ್​ ಖಾತೆಯಲ್ಲಿ ಅದನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ. ಈ ಚಿತ್ರವು ಪ್ಯಾನ್ ಇಂಡಿಯಾ ಚಲನಚಿತ್ರವಾಗಿ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ . ಈ ಚಿತ್ರವನ್ನು ಜಯರಾಮ್ ನಿರ್ದೇಶನ ಮಾಡುತ್ತಿದ್ದು, ಸ್ತ್ರಿ ಸಿನಿಮಾಸ್ ಅಡಿಯಲ್ಲಿ ಎಸ್ ಬಿ ವಿಜಯ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ  ಪತ್ರಕರ್ತ ಬೈಲ್ವಾನ್ ರಂಗನಾಥನ್ ಅವರು ಸಿಲ್ಕ್​ ಸ್ಮಿತಾ ಕುರಿತ ಭಯಾನಕ ಅಂಶವನ್ನು ಹೇಳಿದ್ದರು.  ಅದೇನೆಂದರೆ ಸಿಲ್ಕ್​ ಸ್ಮಿತಾ ಅವರು ಮೃತಪಟ್ಟ ಬಳಿಕ ಅವರ ಶವದೊಂದಿಗೆ ಅತ್ಯಾಚಾರ ಮಾಡಲಾಗಿತ್ತು ಎನ್ನುವ ಶಾಕಿಂಗ್​ ಸತ್ಯವನ್ನು ಬೈಲ್ವಾನ್​ ರಂಗನಾಥನ್​ ತಿಳಿಸಿದ್ದಾರೆ.  ಕಾಮಪ್ರಚೋದಕ ದೃಶ್ಯಗಳಲ್ಲಿ ನಟಿಸಿ ಅಭಿಮಾನಿಗಳಿಗೆ ಬಿಸಿ ಏರಿಸುತ್ತಿದ್ದ,  ಐಟಂ ಸಾಂಗ್​ಗಳಿಗೆ  ಸೊಂಟ ಬಳುಕಿಸಿ ಪುರುಷರ ನಿದ್ದೆ ಕದಿಯುತ್ತಿದ್ದ ಸಿಲ್ಕ್​ ಸ್ಮಿತಾ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಿನ ರೀತಿಯಲ್ಲಿ ಇತ್ತು. ಇವರನ್ನು ಒಮ್ಮೆಯಾದರೂ ಸೇರಬೇಕು, ಈಕೆಯ ಜೊತೆ ಸೆಕ್ಸ್​ ಮಾಡಬೇಕು ಎಂದುಕೊಂಡವರು ಆಕೆಯ ಮೃತದೇಹದ ಮೇಲೆ ಸೆಕ್ಸ್​ ಮಾಡಿದ್ದರು ಎಂಬ ವಿಷಯ ತಿಳಿಸಿದ್ದರು. ಚಿತ್ರದಲ್ಲಿ ಈ ಎಲ್ಲಾ ಅಂಶಗಳು ಇವೆಯೇ ಎಂದು ಕಾದುನೋಡಬೇಕಿದೆ. 

ಸೆಕ್ಸ್​ ಬಾಂಬ್​ ಸಿಲ್ಕ್​ ಸ್ಮಿತಾ ಕಚ್ಚಿದ ಸೇಬು ಹರಾಜು: ಪುಣ್ಯತಿಥಿ ವೇಳೆ ಇಂಟರೆಸ್ಟಿಂಗ್​ ವಿಷ್ಯ ಬೆಳಕಿಗೆ

Follow Us:
Download App:
  • android
  • ios