ಸಖೇಶ್‌ ಮಾನ ಹಾನಿ ಮಾಡಿರುವುದಾಗಿ ಕಿರುತೆರೆ ನಟಿ ಅನಂತ್ ಮಲಿಕ್‌ಗೆ ಲೀಗಲ್‌ ನೋಟಿಸ್‌ ಕಳುಹಿಸಿದ ವಕೀಲರು.... 

ಸೆಕ್ಷನ್ 164ರಸಿಆರ್‌ಪಿಸಿ ಅಡಿಯಲ್ಲಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಮುಂದೆ ಕಿರುತೆರೆ ನಟಿ ಚಾಹತ್ ಖನ್ನಾ 200 ಕೋಟಿ ಸುಲಿಗೆ ದಂಧೆ ವಿಚಾರಣೆಯಲ್ಲಿ ನೀಡಿದ ಹೇಳಿಕೆಯನ್ನು ದಾಖಲಿಸಲಾಗಿತ್ತು. ಈಗಾಗಲೆ 200 ಕೋಟಿ ಸುಲಿಗೆ ಪ್ರಕರಣದಲ್ಲಿ ಜಾಮೀನು ಎದುರಿಸುತ್ತಿರುವ ಸುಖೇಶ್‌ ಚಂದ್ರಶೇಖರ್‌ ಅವರ ವಕೀಲರು ಈಗ ಕಿರುತೆರೆ ನಟಿ ಚಾಹತ್‌ ಖನ್ನಾಗೆ 100 ಕೋಟಿ ರೂಪಾಯಿಗಳ ಖಾನೂನು ನೋಟಿಸ್‌ ಕಳುಹಿಸಿದ್ದಾರೆ ಎನ್ನಲಾಗಿದೆ. ಚಾಹತ್‌ ನೀಡಿರುವ ಹೇಳಿಕೆಯಿಂದ ಸುಖೇಶ್‌ ಮಾನ ಹಾನಿಯಾಗಿದೆ ಇದರಿಂದ ಭರಿಸಲಾಗದಷ್ಟು ನಷ್ಟ ಆಗಿದೆ ಎಂದಿದ್ದಾರೆ. 

ಸುಖೇಶ್‌ ವಕೀಲರಾದ ಅನಂತ್ ಮಲ್ಲಿಕ್‌ ಚಾಹತ್‌ ರಿಯಾಕ್ಟ್‌ ಮಾಡಬೇಕು ಎಂದು ಹೇಳಿಕೆ ನೀಡಿ ಕೆಲವು ದಿನಗಳ ಅವಕಾಶ ನೀಡಿದ್ದಾರೆ. ಇಲ್ಲದಿದ್ದೆ 100 ಕೋಟಿ ರೂಪಾಯಿ ಕೊಡಬೇಕಾಗುತ್ತದೆ. ಈ ವಿಚಾರದ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಆಗಿಲ್ಲ.

ಜಾಕ್ವೆಲಿನ್​, ನೋರಾ ಫತೇಹಿ, ಸುಕೇಶ್​ ತ್ರಿಕೋನ ಲವ್​ ಸ್ಟೋರಿಗೆ ಬಿಗ್‌ ಟ್ವಿಸ್ಟ್​!

ನೋರಾ ಫತೇಹಿ ತಿರುಗೇಟು:

ಸುಕೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ಸ್ಟಾರ್ ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನೋರಾ ಫತೇಹಿ ಇಬ್ಬರೂ ಆರೋಪಿಗಳಾಗಿದ್ದಾರೆ. ಇಬ್ಬರೂ ನಟನೆಯ ವಿಚಾರಣೆ ನಡೆಯುತ್ತಿದ್ದು ಸುಕೇಶ್ ಬಗ್ಗೆ ಸಾಕಷ್ಟು ಮಾಹಿತಿ ರಿವೀಲ್ ಮಾಡಿದ್ದಾರೆ. ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಸಕೇಶ್, ಮನೆ ಕೊಡಿಸುವುದಾಗಿ ಭರವಸೆ ನೀಡಿದ್ದೆ ಎಂದು ನೋರಾ ನನ್ನ ಬಗ್ಗೆ ಮಾತನಾಡಿದ್ದಾಳೆ. ಆದರೆ ನೋರಾ ಮೊರಕ್ಕೋದಲ್ಲಿ ಆಕೆಯ ಕುಟುಂಬದವರಿಗೆ ಮನೆ ಖರೀದಿಸಲು ನನ್ನಿಂದ ದೊಡ್ಡ ಮೊತ್ತದ ಹಣ ಖರೀದಿಸಿದ್ದಾಳೆ. 9 ತಿಂಗಳ ಹಿಂದೆ ಆಕೆ ಇಡಿಗೆ ನೀಡಿದ ಹೇಳಿಕೆ ನಂತರ ಕಾನೂನಿನಿಂದ ತಪ್ಪಿಸಿಕೊಳ್ಳಲು ಕಥೆಗಳನ್ನು ಕಟ್ಟು ತಿದ್ದಾಳೆ' ಎಂದು ಹೇಳಿದ್ದಾರೆ. 
ಸುಕೇಶ್ ಚಂದ್ರಶೇಖರ್ ಹೇಳಿಕೆ 

ನೋರಾ ತನಗೆ ಕಾರು ಬೇಕಾಗಿಲ್ಲ ಮತ್ತು ಅದನ್ನು ತನಗಾಗಿ ತೆಗೆದುಕೊಳ್ಳಲಿಲ್ಲ ಎಂಬುದು ದೊಡ್ಡ ಸುಳ್ಳು. ಏಕೆಂದರೆ ಅವಳು ನನ್ನ ಜೀವನಕ್ಕೆ ಬಂದ ನಂತರ ತನ್ನ ಕಾರನ್ನು ಬದಲಾಯಿಸಬೇಕಾಗಿತ್ತು, ಏಕೆಂದರೆ ತುಂಬಾ ಚೀಪ್ ಆಗಿ ಕಾಣುತ್ತಿದ್ದ ಕಾರು ಬಳಸುತ್ತಿದ್ದಳು. ಅವಳು ಆಯ್ಕೆ ಮಾಡಿದ ಕಾರನ್ನು ನಾನು ಅವಳಿಗೆ ನೀಡಿದ್ದೇನೆ. ಚಾಟ್‌ಗಳು ಮತ್ತು ಸ್ಕ್ರೀನ್‌ಶಾಟ್‌ಗಳು ED ಬಳಿ ಇದೆ. ಇದರಲ್ಲಿ ಯಾವುದೇ ಸುಳ್ಳಿಲ್ಲ, ನಾನು ಅವಳಿಗೆ ರೇಂಜ್ ರೋವರ್ ನೀಡಲು ಬಯಸಿದ್ದೆ, ಆದರೆ ಕಾರು ಸ್ಟಾಕ್‌ನಲ್ಲಿ ಲಭ್ಯವಿರಲಿಲ್ಲ. ಅವಳಿಗೆ ತುರ್ತಾಗಿ ಕಾರು ಬೇಕಿತ್ತು. ನಾನು ಅವಳಿಗೆ BMW S ಸರಣಿಯನ್ನು ನೀಡಿದ್ದೇನೆ. ಅವಳು ಭಾರತೀಯಳಲ್ಲದ ಕಾರಣ ಅವಳು ಅದನ್ನು ತನ್ನ ಆತ್ಮೀಯ ಗೆಳತಿಯ ಪತಿಯ ಹೆಸರಿನಲ್ಲಿ ನೋಂದಾಯಿಸಲು ಕೇಳಿದಳು. ನಾನು ಮತ್ತು ನೋರಾ ಎಂದಿಗೂ ವೃತ್ತಿಪರ ವಹಿವಾಟು ನಡೆಸಿಲ್ಲ' ಎಂದು ಸುಕೇಶ್ ಹೇಳಿದ್ದಾರೆ.