ಸುಶಾಂತ್ ಸಿಂಗ್ ರಜಪೂರ್ ಕೇಸ್ ತನಿಖೆ ಮಾಡುತ್ತಿರುವ ಸಿಬಿಐ ದಿಶಾ ಸಾಲ್ಯಾನ್ ಸಾವಿನ ಪ್ರಕರಣವನ್ನು ರೀಓಪನ್ ಮಾಡಿದೆ. ಸುಶಾಂತ್ ಸಿಂಗ್ ರಜಪೂತ್‌ಗೆ ಮಾಜಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ದಿಶಾ ಸಾಲ್ಯಾನ್ ಮಲಾಡ್ ಅಪಾರ್ಟ್‌ಮೆಂಟ್‌ನ 14ನೇ ಮಹಡಿಯಿಂದ ಬಿದ್ದು ಜೂನ್ 8ರಂದು ಮೃತಪಟ್ಟಿದ್ದರು.

ದಿಶಾ ಸಾಲ್ಯಾನ್ ಸುಶಾಂತ್ ಸಿಂಗ್ ಸಾವಿನ ಒಂದು ವಾರ ಮುನ್ನ ಸಾವನ್ನಪ್ಪಿದ್ದರು. ಮಹಾರಾಷ್ಟ್ರದ ರಾಜಕಾರಣಿಯೊಬ್ಬರು ಆಯೋಜಿಸಿದ್ದರು ಎನ್ನಲಾದ ಪಾರ್ಟಿಯ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.

ಐಶ್ವರ್ಯಾ ರೈ ಸೇರಿ ಬಾಲಿವುಡ್ ಸ್ಟಾರ್‌ಗಳ ಜೊತೆ ಕೆಲಸ ಮಾಡಿದ್ದ ಸೆಲೆಬ್ರಿಟಿ ಮ್ಯಾನೇಜರ್ ಸಾವು

ಈ ಪಾರ್ಟಿಯಲ್ಲಿ ಯಾರ್ಯಾರು ಭಾಗವಹಿಸಿದ್ದರು ಎಂಬ ಮಾಹಿತಿಯನ್ನೂ ಸಿಬಿಐ ಕಲೆ ಹಾಕುತ್ತಿದೆ. ದಿಶಾ ಸಾವಿನ ನಂತರ ಸುಶಾಂತ್ ವಕೀಲರೊಬ್ಬರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಈ ನಡುವೆ ಸಿಬಿಐ ಮ್ಯಾನೇಜರ್ ಉದಯ್ ಸಿಂಗ್ ಗೌರಿ ಅವರನ್ನು ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸುತ್ತಿದೆ.

ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಶವವಾಗಿ ಪತ್ತೆಯಾದಾಗ ಬೆತ್ತಲೆ ಸ್ಥಿತಿಯಲ್ಲಿದ್ದರು! ಪೊಲೀಸರ ಸ್ಪಷ್ಟನೆ

ದಿಶಾಳನ್ನು ಆಸ್ಪತ್ರೆಗೆ ಕರೆದೊಯ್ಯುವ ಹೊತ್ತು ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದರು. ಶತಾಬ್ದಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ದಿಶಾ ಸುಶಾಂತ್ ಸಿಂಗ್ ರಜಪೂತ್ ಸೇರಿ ವರುಣ್ ಸಿಂಗ್, ಐಶ್ವರ್ಯಾ ರೈ ಬಚ್ಚನ್ ಹಾಗೂ ಭಾರತಿ ಸಿಂಗ್ ಜೊತೆಗೂ ಕೆಲಸ ಮಾಡಿದ್ದರು.