ಮುಂಬೈ(ಆ.  09) ನಿಗೂಢ ಸಾವಿಗೆ ಗುರಿಯಾದ ನಟ ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ದೇಹ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಶನಿವಾರ ದೊಡ್ಡ ಸುದ್ದಿಯಾಗಿತ್ತು. ಪೋಸ್ಟ್ ಮಾರ್ಟಂ ವರದಿ ಸಹ ವೈರಲ್ ಆಗಿತ್ತು . 

ಆದರೆ ಇದಕ್ಕೆ ಸ್ಗಷ್ಟನೆ ನೀಡಿರುವ ಮುಂಬೈ ಪೊಲೀಸರು, ಶವ ಬಟ್ಟೆ ಇದ್ದ ಸ್ಥಿತಿಯಲ್ಲೇ ಪತ್ತೆಯಾಗಿತ್ತು ಎಂದು ತಿಳಿಸಿದ್ದಾರೆ.  ದಿಶಾ ದೇಹ ಪತ್ತೆಯಾದಾಗಿನ ಚಿತ್ರಗಳು ಪೊಲೀಸರ ಬಳಿ ಇದ್ದು ಅಗತ್ಯವಿದ್ದಾಗ ಹಾಜರು ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಸುಶಾಂತ್‌ಗೆ ಓವರ್ ಡೋಸ್ ಕೊಟ್ಟಿದ್ದ ಗರ್ಲ್ ಫ್ರೆಂಡ್ ರಿಯಾ?

ಮುಂಬೈ ಮಲಂದ್ ಏರಿಯಾದಲ್ಲಿ ಜುನ್ 8 ಮತ್ತು 9 ರ ನಡುವೆ ದಿಶಾ ದೇಹ ಪತ್ತೆಯಾಗಿತ್ತು. ಆಗ ಸುಶಾಂತ್ ಬದುಕಿದ್ದರು. ದಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 

ದಿಶಾ ಕಟ್ಟಡದ 12  ನೇ ಅಂತಸ್ತಿನಿಂದ ಜಿಗಿದಿದ್ದರು. ಸುಶಾಂತ್ ಸಿಂಗ್ ಸಾವಿನ ನಂತರ ಎರಡೂ ಸಾವಿಗೂ ಲಿಂಕ್ ಹಾಕಿ ಸೋಶಿಯಲ್ ಮೀಡಿಯಾ ಮಾತನಾಡಿತ್ತು.  ದಿಶಾ ಬಗ್ಗೆ ಸಲ್ಲದ ರೂಮರ್ ಹರಡಬೇಡಿ ಎಂದು ಆಕೆಯ ಕುಟುಂಬ ಸಹ ಮನವಿ ಮಾಡಿಕೊಂಡಿದೆ.