ಪ್ರತಿಷ್ಠಿತ ಕಾನ್ಸ್ ಚಿತ್ರೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಈ ಬಾರಿ ಕಾನ್ಸ್ ನಲ್ಲಿ ಭಾರತೀಯ ಸೆಲೆಬ್ರಿಟಿಗಳು ಮಿಂಚುತ್ತಿದ್ದಾರೆ. ಮೇ 17ರಿಂದ ಪ್ರಾರಂಭವಾಗಿರುವ ಚಿತ್ರೋತ್ಸವದಲ್ಲಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಭಾರತದಿಂದ ಆಯ್ಕೆಯಾಗಿದ್ದಾರೆ. ಸೆಲೆಬ್ರಿಟಿಗಳು ತರಹೇವಾರಿ ಉಡುಗೆಯಲ್ಲಿ ಮಿಂಚುತ್ತಿದ್ದಾರೆ. ಆದರೆ ಈ ನಡುವೆ ಉಕ್ರೇನ್ ಮಹಿಳೆೊಬ್ಬರು ಬೆತ್ತಲಾಗಿ ಅತ್ಯಾಚಾರ ನಿಲ್ಲಿಸಿ ಎಂದು ಪ್ರತಿಭಟನೆ ಮಾಡಿದ್ದಾರೆ.
ಪ್ರತಿಷ್ಠಿತ ಕಾನ್ಸ್ ಚಿತ್ರೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಈ ಬಾರಿ ಕಾನ್ಸ್ ನಲ್ಲಿ ಭಾರತೀಯ ಸೆಲೆಬ್ರಿಟಿಗಳು ಮಿಂಚುತ್ತಿದ್ದಾರೆ. ಮೇ 17ರಿಂದ ಪ್ರಾರಂಭವಾಗಿರುವ ಚಿತ್ರೋತ್ಸವದಲ್ಲಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಭಾರತದಿಂದ ಆಯ್ಕೆಯಾಗಿದ್ದಾರೆ. ಸೆಲೆಬ್ರಿಟಿಗಳು ತರಹೇವಾರಿ ಉಡುಗೆಯಲ್ಲಿ ಮಿಂಚುತ್ತಿದ್ದಾರೆ. ಆದರೆ ಈ ನಡುವೆ ಉಕ್ರೇನ್ ಮಹಿಳೆೊಬ್ಬರು ಬೆತ್ತಲಾಗಿ ಅತ್ಯಾಚಾರ ನಿಲ್ಲಿಸಿ ಎಂದು ಪ್ರತಿಭಟನೆ ಮಾಡಿದ್ದಾರೆ. ಉಕ್ರೇನಿಯಲ್ ಹೋರಾಟಗಾರ್ತಿ ಬಟ್ಟೆಯನ್ನು ಕಿತ್ತೆಸೆದು ಸೆಲೆಬ್ರಿಟಿ ಮತ್ತು ಜನರ ನಡುವೆ ಬೆತ್ತಲಾಗಿ ನಮ್ಮ ಮೇಲೆ ದೌರ್ಜನ್ಯ ನಿಲ್ಲಿಸಿ ಎಂದು ಕೂಗಾಡಿದ್ದಾರೆ.
ಉಕ್ರೇನ್ ಮಹಿಳೆ ಕಾನ್ಸ್ ಚಿತ್ರೋತ್ಸವದಲ್ಲಿ ತನ್ನ ದೇಹದ ಮೇಲೆ ಉಕ್ರೇನ್ ಮೇಲೆ ನಡೆಯುತ್ತಿರುವ ಅತ್ಯಾಚಾರದ ವಿರುದ್ಧ ಸಂದೇಶವನ್ನು ಬರೆದುಕೊಂಡು ಬಂದಿದ್ದರು. ಈ ವೇಳೆ ಎಲ್ಲರೂ ಚಿತ್ರೋತ್ಸವಕ್ಕೆ ಬರುತ್ತಿರುವುದನ್ನು ಗಮನಿಸಿ ತನ್ನ ಮೈ ಮೇಲಿದ್ದ ಬಟ್ಟೆಯನ್ನು ಕಿತ್ತು ಬಿಸಾಕಿ ‘ನಮ್ಮನ್ನು ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ’ ಎಂದು ಕಿರುಚುತ್ತ ಓಡಾಡಿದ್ದಾಳೆ.
ಪ್ರತಿಷ್ಠಿತ ಕಾನ್ಸ್ ಕಾರ್ಯಕ್ರಮದಲ್ಲಿ ನಾಲ್ಕನೇ ದಿನದಂದು ಜಾರ್ಜ್ ಮಿಲ್ಲರ್ ಅವರ ತ್ರೀ ಥೌಸಂಡ್ ಇಯರ್ಸ್ ಆಫ್ ಲಾಂಗಿಂಗ್‍ನ ಪ್ರಥಮ ಪ್ರದರ್ಶನದ ಸಂದರ್ಭದಲ್ಲಿ ಉಕ್ರೇನಿಯನ್ ಮಹಿಳೆ ಈ ರೀತಿ ಪ್ರತಿಭಟನೆ ಮಾಡುವ ಮೂಲಕ ವಿಶ್ವವೇ ಅಚ್ಚರಿ ಪಡುವಂತೆ ಮಾಡಿದೆ. ಈ ಮಹಿಳೆ ರೆಡ್ ಕಾರ್ಪೆಟ್ ಸಂದರ್ಭದಲ್ಲಿ ಬಟ್ಟೆ ಕಿತ್ತೆಸೆದು ಬೆತ್ತಲಾಗಿದ್ದಾಳೆ. ಈ ವೇಳೆ ಎಲ್ಲರಿಗೂ ಕೇಳಿಸುವಂತೆ ಕೂಗಾಡಲು ಶುರುಮಾಡಿದ್ದರು. ಅಲ್ಲಿದ್ದ ಸಿಬ್ಬಂದಿ ಆಕೆಯನ್ನು ಹೊರಗೆ ರೆಡ್ ಕಾರ್ಪೆಟ್ ನಿಂದ ಕರೆದುಕೊಂಡು ಹೋದರು.
ಓವರ್ ಡಯಟ್‌ನಿಂದ ಅಜ್ಜಿ ರೀತಿ ಕಾಣಿಸುತ್ತಿರುವ ಐಶ್ವರ್ಯ ರೈ; ಮತ್ತೆ ಟ್ರೋಲ್?
ಈ ಘಟನೆ ಈಗ ವಿಶ್ವದ ಗಮನ ಸೆಳೆದಿದೆ. ಅಂದಹಾಗೆ ಉಕ್ರೇನ್ ಮಹಿಳೆ ತನ್ನ ಎದೆಯ ಮೇಲೆ ಉಕ್ರೇನ್ ಧ್ವಜದ ನೀಲಿ ಮತ್ತು ಹಳದಿ ಬಣ್ಣದಲ್ಲಿ ‘ನಮ್ಮನ್ನು ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ ಎಂದು ಬರೆದುಕೊಂಡಿದ್ದರು. ಕಾಲು ಮತ್ತು ತೊಡೆಯಲ್ಲಿ ಕೆಂಪು ಬಣ್ಣದಲ್ಲಿ ಚಿತ್ರಿಸಿಕೊಂಡಿದ್ದಾರೆ.
ಅಂದಹಾಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಕಾನ್ಸ್ ಚಿತ್ರೋತ್ಸವದಲ್ಲಿ ಭಾಷಣ ಮಾಡಿದ್ದರು. ಮಾಜಿ ನಟ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮೊದಲ ದಿನ ಕಾನ್ಸ್ ನಲ್ಲಿ ಮಾಡಿದ ಭಾಷಣ ಎಲ್ಲರ ಗಮನ ಸೆಳೆದಿತ್ತು. ಈ ವರ್ಷದ ಕಾನ್ ಚಿತ್ರೋತ್ಸವದಲ್ಲಿ ಉಕ್ರೇನ್-ರಷ್ಯಾ ಯುದ್ಧ ಎಲ್ಲರ ಗಮನ ಸೆಳೆದಿದೆ. ಈ ಕಾರ್ಯಕ್ರಮದಲ್ಲಿ ಉಕ್ರೇನ್ ನಿರ್ಮಾಪಕರು ಹಲವು ಉಕ್ರೇನ್ ಸಿನಿಮಾವನ್ನು ಪ್ರದರ್ಶನ ಮಾಡಿದ್ದಾರೆ.
Cannes 2022: Deepika Padukoneಯ ರೆಡ್ ಕಾರ್ಪೆಟ್ ರೆಟ್ರೋ ಲುಕ್ ಟ್ರೋಲ್!
ಝೆಲೆನ್ಸ್ಕಿ ಕಳೆದ ತಿಂಗಳು ರಷ್ಯಾ ವಶಪಡಿಸಿಕೊಂಡ ಪ್ರದೇಶಗಳಲ್ಲಿ ನೂರಾರು ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ ಎಂದಿದ್ದರು. ಇದರಲ್ಲಿ ಸಣ್ಣ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ ಎಂದು ಬಹಿರಂಗ ಪಡಿಸಿದ್ದರು. ಇದು ಉಕ್ರೇನ್ ನ ಭೀಕರ ಪರಿಸ್ಥಿತಿಯನ್ನು ಬಿಚ್ಚಿಡುತ್ತಿದೆ.
