ತಾವು ಸತ್ತಿರುವುದಾಗಿ ಸುಳ್ಳು ಸುದ್ದಿ ಹರಡಿಸಿ, ಪ್ರಚಾರ ಗಿಟ್ಟಿಸಿಕೊಂಡ ನಟಿ ಪೂನಂ ಪಾಂಡೆ ವಿರುದ್ಧ ದಾಖಲಾಗುತ್ತಾ ಕೇಸ್​? ಹಾಗೊಂದು ವೇಳೆ ಕೇಸ್​ ದಾಖಲಾದರೆ ಏನಿರಲಿದೆ ಶಿಕ್ಷೆ?  

 ಈಗ ಎಲ್ಲೆಲ್ಲೂ ಬಾಲಿವುಡ್​ ನಟಿ ಪೂನಂ ಪಾಂಡೆಯ ವಿಷಯವೇ ಓಡಾಡುತ್ತಿದೆ. ನಿನ್ನೆ ಈಕೆ ಸತ್ತರೆಂಬ ಸುದ್ದಿ ಇಂಡಸ್ಟ್ರಿಗೆ ಬರಸಿಡಿಲು ಬಡಿದ ಸುದ್ದಿ ಬಂತು. ಹಾಟೆಸ್ಟ್​ ನಟಿ, ಮಾದಕ ತಾರೆ ಎಂದೇ ಖ್ಯಾತಿ ಪಡೆದ, ಸದಾ ತಮ್ಮ ಬಟ್ಟೆಗಳಿಂದಲೇ ವಿವಾದದಲ್ಲಿಯೂ ಇದ್ದ 32 ವರ್ಷದ ನಟಿ ಪೂನಂ ಪಾಂಡೆ ಸಾವಿನ ಸುದ್ದಿ ಅಭಿಮಾನಿಗಳನ್ನು ಇನ್ನಿಲ್ಲದಂತೆ ಕಾಡಿತು. ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ ಎಂಬ ಸುದ್ದಿ ಬಂತು. ಗರ್ಭಕಂಠದ ಕ್ಯಾನ್ಸರ್​ ಅವರನ್ನು ಬಲಿ ತೆಗೆದುಕೊಂಡಿತು ಎನ್ನಲಾಗಿತ್ತು. ಇದಕ್ಕೆ ಕಾರಣ, ಪೂನಂ ತಂಗಿ ಹೇಳಿದ ಮಾತು. ಅಕ್ಕ ಗರ್ಭಕಂಠ ಕ್ಯಾನ್ಸರ್​ ಸತ್ತಿದ್ದಾಗಿ ಹೇಳಿದ್ದರು. ಆದರೆ ಆಕೆಯ ಮೃತದೇಹ ಸಿಗದ ಕಾರಣ ಹಾಗೂ ಕುಟುಂಬಸ್ಥರ ಫೋನ್​ಗಳು ಸ್ವಿಚ್​ ಆಫ್​ ಆಗಿದ್ದರಿಂದ ಅನುಮಾನ ಹುಟ್ಟಿದ ಬೆನ್ನಲ್ಲೇ ನಟಿ ಖುದ್ದು ವಿಡಿಯೋ ಮೂಲಕ ತಾನು ಸತ್ತಿಲ್ಲ ಎಂದು ಹೇಳಿದರು.

ನಟ-ನಟಿ ಸೇರಿದಂತೆ ಸೆಲೆಬ್ರಿಟಿಗಳ ಸಾವಿನ ಸುದ್ದಿ ಕೆಲವು ವೇಳೆ ಬರುವುದು ಉಂಟು. ಆದರೆ ಅಂಥ ಕೃತ್ಯವನ್ನು ಯಾರೋ ಕಿಡಿಗೇಡಿಗಳು ಹರಿಯಬಿಡುತ್ತಾರೆ. ಆದರೆ ಇಲ್ಲಿ ಹಾಗಲ್ಲ. ಖುದ್ದು ಪೂನಂ ಪಾಂಡೆಯೇ ಅಂಥ ಕೃತ್ಯ ಮಾಡಿದ್ದಾರೆ. ತಮ್ಮ ಸಾವಿನ ಸುದ್ದಿಯನ್ನು ತಮ್ಮ ಕುಟುಂಬಸ್ಥರಿಂದ ಹರಿಬಿಟ್ಟಿದ್ದಾರೆ. ಈಕೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಹಲವರು ಕಂಬನಿ ಮಿಡಿದಿದ್ದರು. ಆದರೆ ಇದೀಗ ಸಾವು ಗರ್ಭಕಂಠ ಕ್ಯಾನ್ಸರ್​ ಕುರಿತು ಜಾಗೃತಿ ಮೂಡಿಸಲು ಹೀಗೆ ಮಾಡಿರುವುದಾಗಿ ವಿಡಿಯೋ ಮೂಲಕ ಹೇಳಿದ್ದಾರೆ. ಇದರಿಂದ ನಟಿಗೆ ಎಲ್ಲರೂ ಛೀಮಾರಿ ಹಾಕುತ್ತಿದ್ದಾರೆ.

View post on Instagram

ಸತ್ತೆನೆಂದು ಹೇಳಿ ಮೂರ್ಖರನ್ನಾಗಿ ಮಾಡಿದ ಪೂನಂ ಪಾಂಡೆ! ಕೆಲ ದಿನಗಳ ಹಿಂದಷ್ಟೇ ನಟಿ ಹೇಳಿದ್ದೇನು?

ಈ ವಿಷಯ ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋದರೆ, ಯಾರಾದರೂ ಈಕೆಯ ಸುಳ್ಳನ್ನು ಗಂಭೀರವಾಗಿ ತೆಗೆದುಕೊಂಡರೆ ಕೇಸ್​ ಕೂಡ ದಾಖಲಿಸಬಹುದಾಗಿದೆ. ಚಿತ್ರನಿರ್ಮಾಪಕ ಅಶೋಕ್​ ಪಂಡಿತ್​ ಅವರು ವಿಡಿಯೋ ಮೂಲಕ ನಟಿಯ ವಿರುದ್ಧ ಕೇಸ್​ ದಾಖಲು ಮಾಡಿ ಈಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಷ್ಟಕ್ಕೂ ಭಾರತೀಯ ದಂಡ ಸಂಹಿತೆಯ 63ನೇ ಕಲಮಿನ ಪ್ರಕಾರ, ಯಾವುದೇ ವ್ಯಕ್ತಿ ಉದ್ದೇಶಪೂರ್ವಕವಾಗಿ ಅಥವಾ ದುರುದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯನ್ನು ನೀಡಿದರೆ, ಅದು ಅಪರಾಧವೆಂದು ಸಾಬೀತಾದರೆ ಅಂಥವರಿಗೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಅಥವಾ ಐವತ್ತು ಸಾವಿರದವರೆಗೆ ವಿಸ್ತರಿಸಬಹುದಾದ ದಂಡ ಹಾಗೂ ಎರಡೂ ವಿಧಿಸುವ ಅವಕಾಶವಿದೆ.

ಇದೀಗ ಸೋಷಿಯಲ್​ ಮೀಡಿಯಾಗಳಲ್ಲಿ ನಟಿಯ ವಿರುದ್ಧ ಬೈಕಾಟ್​ ಟ್ರೆಂಡ್​ ಕೂಡ ಶುರುವಾಗಿದೆ. ಈಕೆ ಮಾಡುವ ಚಿತ್ರಗಳನ್ನು ನೋಡದಂತೆ ಆಗ್ರಹಿಸಲಾಗುತ್ತಿದೆ. ಇದೇ ವೇಳೆ ಅಭಿಮಾನಿಗಳ ಭಾವನೆಯ ಜೊತೆ ಆಡಿದ ಕಾರಣಕ್ಕೆ ಕೇಸ್​ ದಾಖಲಿಸುವಂತೆಯೂ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. 

ಅಮಿತಾಭ್​ರಿಂದ ಹಿಡಿದು ಶಾರುಖ್​ವರೆಗೆ... ಸತ್ತರೆಂದು ಸುದ್ದಿಯಾಗಿ ಹಲ್​ಚಲ್​ ಸೃಷ್ಟಿಸಿದ್ದ ಬಾಲಿವುಡ್​ ಸ್ಟಾರ್ಸ್ ಇವರು​!

View post on Instagram