Asianet Suvarna News Asianet Suvarna News

ಅಮಿತಾಭ್​ರಿಂದ ಹಿಡಿದು ಶಾರುಖ್​ವರೆಗೆ... ಸತ್ತರೆಂದು ಸುದ್ದಿಯಾಗಿ ಹಲ್​ಚಲ್​ ಸೃಷ್ಟಿಸಿದ್ದ ಬಾಲಿವುಡ್​ ಸ್ಟಾರ್ಸ್ ಇವರು​!

ಬಾಲಿವುಡ್​ನ ಹಲವು ನಟ-ನಟಿಯರು ನಿಧನರಾಗಿರುವುದಾಗಿ ಸುದ್ದಿಯಾಗಿದ್ದು ಈ ಹಿಂದೆ ಸಿನಿ ಇಂಡಸ್ಟ್ರಿಯಲ್ಲಿ ಹಲ್​ಚಲ್​ ಸೃಷ್ಟಿಯಾಗಿತ್ತು. ಯಾರವರು?
 

Bollywood actors and actresses have passed away has created a stir in the film industry suc
Author
First Published Feb 3, 2024, 2:58 PM IST

ನಟಿ ಪೂನಂ ಪಾಂಡೆ ಸತ್ತುಹೋಗಿರುವ ಸುದ್ದಿ ಕೇಳಿ ದುಃಖ ಪಟ್ಟವರು ಅದೆಷ್ಟೋ ಮಂದಿ. ಏಕಾಏಕಿ ಈ ರೀತಿ ಎಲ್ಲರನ್ನೂ ಬಿಟ್ಟುಹೋಗಿ ಶಾಕ್​ ಕೊಟ್ಟಿದ್ದ ನಟಿಗಾಗಿ ಇಡೀ ಇಂಡಸ್ಟ್ರಿ ಕಂಬನಿ ಮಿಡಿಯಿತು. ಆದರೆ ಪ್ರಚಾರದ ಗಿಮಿಕ್​ ಅದೆಷ್ಟು ಮಟ್ಟಿಗೆ ಕೆಲವು ನಟರನ್ನು ಹುಚ್ಚರನ್ನಾಗಿಸುತ್ತದೆ ಎನ್ನುವುದಕ್ಕೆ ಈ ನಟಿಯೇ ಸಾಕ್ಷಿ. ಪ್ರಚಾರಕ್ಕಾಗಿ ಏನೇನೋ ಮಾಡುವವರು ಇದ್ದಾರೆ. ಬಟ್ಟೆ ಬಿಚ್ಚಿ ಹಲ್​ಚಲ್​ ಸೃಷ್ಟಿಸುವವರು ಇದ್ದಾರೆ. ಅದೇ ರೀತಿ ಮಾಡಿ ರಾತ್ರೋರಾತ್ರಿ ಫೇಮಸ್​ ಆದವರೂ ನಮ್ಮ ಕಣ್ಣುಮುಂದೆ ಇದ್ದಾರೆ. ಇದಾಗಲೇ ಹಲವಾರು ಕಾಂಟ್ರವರ್ಸಿಗಳನ್ನು ಮೈಮೇಲೆ ಎಳೆದುಕೊಂಡಿದ್ದ, ಬೆತ್ತಲಾಗಿ ಓಡಾಡುವುದಾಗಿ ಹೇಳಿ ಜನರ ಗಮನ ಸೆಳೆದಿದ್ದ ನಟಿ ಪೂನಂ ಪಾಂಡೆ ಈಗ ತಾನು ಸತ್ತಿರುವಂತೆ  ನಾಟಕವಾಡಿದ್ದನ್ನು ಕೇಳಿ ಎಲ್ಲರೂ ಶಾಕ್​  ಆಗಿದ್ದಾರೆ. ಪ್ರಚಾರಕ್ಕಾಗಿ ಈ ಪರಿಯ ಗಿಮಿಕ್​ ಮಾಡಿರುವ ಬಗ್ಗೆ ನಟಿಗೆ ಛೀಮಾರಿ ಹಾಕುತ್ತಿದ್ದಾರೆ.

ಈ ಮೊದಲು ಕೂಡ ಬಾಲಿವುಡ್​ನಲ್ಲಿ ಹಲವಾರು ನಟ-ನಟಿಯರ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿದ್ದು ಇದೆ. ಈ ಸುದ್ದಿ ಕಾಳ್ಗಿಚ್ಚಿನಂತೆಯೇ ವೇಗವಾಗಿ ಹರಡಿ  ಸಿನಿ ಪ್ರಿಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದು ಇದೆ. ಅಮಿತಾಭ್​ ಬಚ್ಚನ್​ ಅವರಿಂದ ಹಿಡಿದು ಶಾರುಖ್​ ಖಾನ್​ವರೆಗೆ ಹಲವಾರು ಸಿನಿ ತಾರೆಯರ ಸಾವಿನ ಸುದ್ದಿ ಬಂದಿದೆ. ಆದರೆ ಒಂದೇ ಒಂದು ವ್ಯತ್ಯಾಸ ಎಂದರೆ ಪೂನಂ ಪಾಂಡೆಯಂತೆ ಈ ಸಾವಿನ ಸುದ್ದಿ ಬಂದಿರಲಿಲ್ಲ. ಇಲ್ಲಿ ಖುದ್ದು ನಟಿ ಪ್ರಚಾರಕ್ಕಾಗಿ ತನ್ನನ್ನು ತಾನೇ ಸಾಯಿಸಿಕೊಂಡರು, ಆದರೆ ಉಳಿದ ಪ್ರಕರಣದಲ್ಲಿ ಅದ್ಯಾವ್ಯಾವುದೋ ಕಾರಣಗಳಿಂದ ಗಾಳಿ ಸುದ್ದಿ ಹರಡಿತ್ತು. ಅಂಥ ಕೆಲವು ನಟರ ಪರಿಚಯ ಇಲ್ಲಿ ಮಾಡಿಸಲಾಗಿದೆ.

ಸತ್ತೆನೆಂದು ಹೇಳಿ ಮೂರ್ಖರನ್ನಾಗಿ ಮಾಡಿದ ಪೂನಂ ಪಾಂಡೆ? ಕೆಲ ದಿನಗಳ ಹಿಂದಷ್ಟೇ ನಟಿ ಹೇಳಿದ್ದೇನು?

ಅಮಿತಾಭ್​ ಬಚ್ಚನ್​ ಅವರು ಅಮೆರಿಕದಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟಿರುವ ಸುದ್ದಿಯಾಗಿ ಇಡೀ ಇಂಡಸ್ಟ್ರಿ ಶಾಕ್​ಗೆ ಒಳಗಾಗಿತ್ತು.  ಈ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ ನಂತರ ಖುದ್ದು ನಟ ಬಂದು ಈ ಬಗ್ಗೆ ಸ್ಪಷ್ಟನೆ ಕೊಡಬೇಕಾಯಿತು. ಈ ವಿಷಯ ಖುದ್ದು ಅವರಿಗೆ ತಿಳಿದಿರಲಿಲ್ಲ. ನಂತರ ವಿಷಯ ತಿಳಿಯುತ್ತಲೇ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಾವು ಜೀವಂತವಾಗಿರುವುದಾಗಿ ಹೇಳಿದರು.  ಅದೇ ರೀತಿ, ಭಾರತದ ನೈಟಿಂಗೇಲ್, ಲತಾ ಮಂಗೇಶ್ಕರ್ ಕೂಡ ನಕಲಿ ಸಾವಿನ ವದಂತಿಗಳಿಗೆ ಬಲಿಯಾದರು. ಇವರು ಹೃದಯಾಘಾತದಿಂದ ತೀರಿಕೊಂಡರು ಎನ್ನುವ ಸುದ್ದಿ ಹರಡಿತ್ತು. ನಂತರ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಬಂದು ಸ್ಪಷ್ಟನೆ ನೀಡಿದ್ದರು. 
 

 ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಸುಳ್ಳು ಸಾವಿನ ವದಂತಿಗಳಿಗೆ ಬಲಿಯಾದವರು. ಕೆಲವು ದಿನ ಅವರು ಇಲ್ಲದ ಸಮಯದಲ್ಲಿ ಅವರ ಸಾವಿನ ವಿಷಯ ಸಕತ್​ ಸದ್ದು ಮಾಡಿತು. ಅಮೆರಿಕದ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಈ ಸುದ್ದಿ ಹರಡಿತ್ತು.  ನಂತರ ಅವರ  PR ತಂಡವು  ಸೂಪರ್‌ಸ್ಟಾರ್‌ ರಜನಿ ಅವರು ಅಮೆರಿಕಕ್ಕೆ  ವಿಹಾರಕ್ಕೆ ಬಂದಿದ್ದಾರೆ ಮತ್ತು ಚೆನ್ನಾಗಿದ್ದಾರೆ. ದಯವಿಟ್ಟು ಗಾಳಿಸುದ್ದಿಯನ್ನು ನಂಬಬೇಡಿ ಎನ್ನಬೇಕಾಯಿತು.  ಅದೇ ರೀತಿ ಧಕ್​ ಧಕ್​ ಬ್ಯೂಟಿ ಮಾಧುರಿ ದೀಕ್ಷಿತ್ ಕೂಡ ಸತ್ತ ಬಗ್ಗೆ ಸುದ್ದಿಯಾಗಿತ್ತು. ಹೃದಯಾಘಾತದಿಂದ ನಟಿ ಸಾವನ್ನಪ್ಪಿದ್ದಾರೆ ಎಂದು ಸುದ್ದಿಯಾಗಿತ್ತು. ಅದರಂತೆಯೇ ಬಾಲಿವುಡ್​ ನಟ ಆಯುಷ್ಮಾನ್ ಖುರಾನಾ ಸುದ್ದಿ ಕೂಡ ಹೀಗೆಯೇ ಹರಡಿತ್ತು. ಸ್ವಿಟ್ಜರ್ಲೆಂಡ್​ನಲ್ಲಿ ಸ್ನೋಬೋರ್ಡಿಂಗ್ ಅಪಘಾತದಲ್ಲಿ ಇವರು ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿಯಾಗಿತ್ತು. ನಂತರ ಇಬ್ಬರೂ ನಟರು ತಾವು ಜೀವಂತ ಇರುವುದಾಗಿ ಹೇಳಿಕೊಳ್ಳಬೇಕಾಯಿತು. ಇನ್ನು ಶಾರುಖ್​ ಖಾನ್​ ಅಪಘಾತದಲ್ಲಿ ಮೃತಪಟ್ಟಿರುವ ಸುದ್ದಿ ಬರಸಿಡಿಲಿನಂತೆ ಬಂದೆರಗಿತ್ತು. ಅಪಘಾತವಾಗಿ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. 
  
ದೀಪಿಕಾ ಬೆತ್ತಲಾದರೂ ಓಡಲಿಲ್ಲವೇಕೆ 'ಫೈಟರ್'​ ಚಿತ್ರ? ನಿರ್ದೇಶಕ ಕೊಟ್ಟ ಉತ್ತರ ಕೇಳಿ...

Follow Us:
Download App:
  • android
  • ios