Asianet Suvarna News Asianet Suvarna News

ಜೂ.ಎನ್‌ಟಿಆರ್ ಸಿನಿಮಾ ರಿಜೆಕ್ಟ್ ಮಾಡಿದ ಸಮಂತಾ; ಸಂಭಾವನೆ ಕೇಳಿ ಹೌಹಾರಿದ ಚಿತ್ರತಂಡ

ನಟಿ ಸಮಂತಾ ಸೌತ್ ಸ್ಟಾರ್ ಜೂ ಎನ್ ಟಿ ಆರ್ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ. ಜೂ ಎನ್ ಟಿ ಆರ್ ನಟನೆಯ 30ನೇ ಸಿನಿಮಾಗೆ ಸಮಂತಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ಸಿನಿಮಾತಂಡ ಪ್ರಯತ್ನ ಪಟ್ಟಿತ್ತು. ಆಧರೆ ಸ್ಯಾಮ್ ರೆಜೆಕ್ಟ್ ಮಾಡಿದ್ದಾರೆ. 

buzz Samantha rejects NTR30 film Due To remuneration Issue sgk
Author
Bengaluru, First Published Aug 26, 2022, 12:27 PM IST

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಮತ್ತೆ ಬ್ಯುಸಿಯಾಗಿದ್ದಾರೆ. ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಹೊರಹೊಮ್ಮಿರುವ ಸಮಂತಾ ಸೌತ್ ಮಾತ್ರವಲ್ಲದೇ ಬಾಲಿವುಡ್‌ನಲ್ಲೂ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಮದುವೆ ಬಳಿಕ ಸಮಂತಾಗೆ ಸಿನಿಮಾ ಆಫರ್ ಗಳು ಕಡಿಮೆಯಾಗಿತ್ತು. ಈ ಬಗ್ಗೆ ಬೇಸರ ಹೊರಹಾಕಿದ್ದರು. ಆದರೀಗ ವಿಚ್ಛೇದನ ಬಳಿಕ ಸಮಂತಾ ಮತ್ತೆ ಬ್ಯುಸಿಯಾಗಿದ್ದಾರೆ. ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ -2 ಸೀರಿಸ್ ಮತ್ತು ಪುಷ್ಪ ಸಿನಿಮಾದ ಹಾಡಿನ ಬಳಿಕ ಸಮಂತಾ ಸಿಕ್ಕಪಾಟ್ಟೆ  ಕ್ರೇಜ್ ಸೃಷ್ಟಿಸಿದ್ದಾರೆ. ಆದರೆ ಸಮಂತಾ ದೊಡ್ಡ ಮಟ್ಟದ ಸಕ್ಸಸ್ ಬಳಿಕ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 

ಪುಷ್ಪ ಸಿನಿಮಾದ ಹೂ ಅಂತೀಯ ಮಾವ... ಹಾಡಿನ ನಂತರ ಸಮಂತಾ ಅವರ ಕ್ರೇಜ್ ನೋಡಿದ ನಿರ್ದೇಶಕ ಕೊರಟಾಲ ಶಿವ ಅವರು ಸಮಂತಾ ಅವರ ಜೊತೆ ಕೆಲಸ ಮಾಡಲು ಮುಂದೆ ಬಂದಿದ್ದಾರೆ. ಕೊರಟಾಲ ಶಿವ ಮತ್ತು ಜೂ.ಎನ್ ಟಿ ಆರ್ ಕಾಂಬಿನೇಷನ್ ಸಿನಿಮಾಗೆ ಸಮಂತಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ಪ್ರಯತ್ನ ಮಾಡಲಾಗುತ್ತಿತ್ತು. ಜೂ.ಎನ್ ಟಿ ಆರ್ ಅವರ #NTR30 ಚಿತ್ರದ ನಾಯಕಿ ಪಾತ್ರಕ್ಕೆ ಸಮಂತಾ ಅವರನ್ನು ಸಂಪರ್ಕ ಮಾಡಲಾಗಿದೆ ಎಂಬ ವದಂತಿಗಳು ಈ ಹಿಂದೆಯೇ ಕೇಳಿಬರುತ್ತಿವೆ. ಆದರೆ ಸಮಂತಾ ಈ ಆಫರ್ ತಿರಸ್ಕರಿಸಿದ್ದಾರಂತೆ. ಜೂ.ಎನ್ ಟಿ ಆರ್ ಸಿನಿಮಾ ತಿರಸ್ಕರಿಸಿರುವುದು ಟಾಲಿವುಡ್‌ಗೆ ಅಚ್ಚರಿ ಮೂಡಿಸಿದೆ. 

ಸಂಭಾವನೆ ಕಾರಣಕ್ಕೆ ಸಿನಿಮಾ ತಿರಸ್ಕರಿಸಿದ ಸ್ಯಾಮ್ 

ಅಂದಹಾಗೆ ಸಮಂತಾ ಈ ಆಫರ್ ತಿರಸ್ಕರಿಸಲು ಕಾರಣ ಸಂಭಾವನೆ ಎನ್ನಲಾಗುತ್ತಿದೆ. ಸಮಂತಾ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಹೀಗಿರುವಾಗ ಸಮಂತಾ ತನ್ನ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಹಾಗಾಗಿ ಕೊರಟಾಲ ಶಿವ ಮತ್ತು ಜೂ.ಎನ್ ಟಿ ಆರ್ ಸಿನಿಮಾಗೂ ಸಮಂತಾ ಅತೀ ಹೆಚ್ಚು ಸಂಭಾವನೆ ಬೇಡಿಕೆ ಇಟ್ಟ ಕಾರಣ ಅಷ್ಟು ಸಂಭಾವನೆ ಕೊಡಲು ಸಿನಿಮಾತಂಡ ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಹಾಗಾಗಿ ಸಂಭಾವನೆಯಲ್ಲಿ ರಾಜಿಯಾಗದ ಸಮಂತಾ #NTR30 ತಿರಸ್ಕರಿಸಿದ್ದಾರೆ ಎನ್ನಲಾಗಿದೆ.   

ಈ ವಿಚಾರಕ್ಕೆ ರಶ್ಮಿಕಾ-ಸಮಂತಾ ಮಧ್ಯೆ ಸಿಕ್ಕಾಪಟ್ಟೆ ಪೈಪೋಟಿಯಂತೆ

ಸಮಂತಾ ಬೇಡಿಕೆ ಇಟ್ಟ ಸಂಭಾವನೆ ಎಷ್ಟು

ಅಷ್ಟಕ್ಕೂ ಸಮಂತಾ ಬೇಡಿಕೆ ಇಟ್ಟ ಸಂಭಾವನೆ ಎಷ್ಟು ಅಂತೀರಾ ಬರೋಬ್ಬರಿ 4 ಕೋಟಿ ರೂಪಾಯಿ ಕೇಳಿದ್ದಾರಂತೆ. ಸಿನಿಮಾತಂಡ ಸಮಂತಾ ಅವರಿಗೆ 2.5 ಕೋಟಿ ರೂಪಾಯಿ ಕೊಡಲು ಮುಂದಾಗಿದ್ದರಂತೆ. ಆದರೆ ಸಮಂತಾ 4 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರಂತೆ. ಅಲ್ಲದೇ ಕೊರಟಾಲ ಶಿವ ಅವರ ಸಿನಿಮಾದಲ್ಲಿ ನಾಯಕಿಯರಿಗೆ ಹೆಚ್ಚು ಸ್ಕೋಪ್ ಇಲ್ಲದ ಕಾರಣ ಸಮಂತಾ ಈ ಸಿನಿಮಾ ಮಾಡಲು ಮೊದಲೇ ಹಿಂದೇಟು ಹಾಕಿದ್ದಂತೆ. ಇದೀಗ ಸಂಭಾವನೆ ಕೇಳಿ ಸಿನಿಮಾತಂಡ ಶಾಕ್ ಆಗಿದೆಯಂತೆ. 

ಪಾಪರಾಜಿ ನೋಡಿ ಓಡೋಡಿ ಹೋದ ಸಮಂತಾ; ಯಾಕಿಷ್ಟು ಅವಸರ ಎಂದ ಫ್ಯಾನ್ಸ್

ರಶ್ಮಿಕಾ, ಪೂಜಾ ಸಂಭಾವನೆ ಎಷ್ಟು?

ಸಮಂತಾ ಮಾತ್ರಲ್ಲದೇ ಅನೇಕ ಸ್ಟಾರ್ ನಟಿಯರು 4 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರಂತೆ. ಪೂಜಾ ಹೆಗ್ಡೆ ಮತ್ತು ರಶ್ಮಿಕಾ ಮಂದಣ್ಣ ಸಹ ಅತೀ ಹೆಚ್ಚು ಸಂಭಾವನೆ ಬೇಡಿಕೆ ಇಡುತ್ತಿದ್ದಾರಂತೆ. ಮೂಲಗಳ ಪ್ರಕಾರ ಪೂಜಾ ಹೆಗ್ಡೆ ಮತ್ತು ರಶ್ಮಿಕಾ ಇಬ್ಬರೂ  4ಕೋಟಿ ರೂಪಾಯಿ ಬೇಡಿಕೆ ಇಡುತ್ತಿದ್ದಾರೆ ಎನ್ನಲಾಗಿದೆ. ಇನ್ನು ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ಸಹ ಸೌತ್ ಸಿನಿಮಾಗಳಿಗೆ ಅತಿ ಹೆಚ್ಚು ಸಂಭಾವನೆ ಕೇಳುತ್ತಿದ್ದು 5 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ ಎನ್ನಲಾಗಿದೆ. 

Follow Us:
Download App:
  • android
  • ios