Boycott Pathaan ಅಶ್ಲೀಲವಾಗಿ ಕಾಣಿಸಿಕೊಂಡ ದೀಪಿಕಾ; ಶಾರುಖ್ 'ಪಠಾಣ್' ಚಿತ್ರ ಬಹಿಷ್ಕಾರಕ್ಕೆ ಒತ್ತಡ
ಶಾರುಖ್ ಖಾನ್ ಮತ್ತು ದೀಪಿಕಾ ಅಭಿನಯದ ಪಠಾಣ್ ಸಿನಿಮಾ ಜನವರಿಯಲ್ಲಿ ರಿಲೀಸ್. ಬೇಶರಾಮ್ ರಂಗ್ ಹಾಡಿನಿಂದ ಚಿತ್ರಕ್ಕೆ ಬಹಿಷ್ಕಾರ?
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಪಠಾಣ್ ಚಿತ್ರದ ಮೂಲಕ ಬಿ-ಟೌನ್‌ಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬೆಂಗಳೂರಿನ ಸುಂದರಿ ದೀಪಿಕಾ ಪಡುಕೋಣೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಜನವರಿ 2023ರಂದು ಸಿನಿಮಾ ರಿಲೀಸ್ ಆಗಲಿದ್ದು, ಸ್ಪೆಷಲ್ ಹಾಡು 'ಬೇಶರಮ್ ರಂಗ್' ಬಿಡುಗಡೆಯಾಗಿದೆ. ಸಿಕ್ಕಾಪಟ್ಟೆ ಹಾಟ್ ಆಗಿ ದೀಪಿಕಾ ಕಾಣಿಸಿಕೊಂಡಿದ್ದಾರೆ ಅಲ್ಲದೆ ಕೇಸರಿ ಬಟ್ಟೆ ಧರಿಸಿರುವುದಕ್ಕೆ ಹಿಂದು ಸಂಘಟನೆಗಳು ಗರಂ ಆಗಿದ್ದಾರೆ. ಈಗ ಪಠಾಣ್ ಬ್ಯಾನ್ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.
ಇಂಡೋರ್‌ನ ರಸ್ತೆಗಳಲ್ಲಿ ವೀರ ಶಿವಾಜೀ ಸಂಘದವರು ಶಾರುಖ್ ಖಾನ್ ಪೋಸ್ಟರ್‌ಗಳನ್ನು ಸುಟ್ಟಿದ್ದಾರೆ. ಮಾಹಿತಿಗಳ ಪ್ರಕಾರ ಬೇಶರಮ್ ರಂಗ್ ಹಾಡಿನಲ್ಲಿ ದೀಪಿಕಾರನ್ನು ಅಶ್ಲೀಲವಾಗಿ ತೋರಿಸಿದ್ದಾರೆ ಇದರಿಂದ ಹಿಂದುಗಳ ಭಾವನೆಗೆ ದಕ್ಕಿಯಾಗಿದೆ ಹೀಗಾಗಿ ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಅಲ್ಲದೆ ಶಾರುಖ್ ಕಮ್ ಬ್ಯಾಕ್ ಸಿನಿಮಾ ಇದಾಗಿರುವ ಕಾರಣ ಬಿ-ಟೌನ್‌ನಲ್ಲಿ ದೊಡ್ಡ ಪ್ರಚಾರ ಸಿಗುತ್ತಿದೆ. ಸಿನಿಮಾ ಹಿಟ್ ಆಗಬೇಕೆಂದು ದೀಪಿಕಾರನ್ನು ಈ ರೀತಿ ತೋರಿಸಲಾಗಿದೆ ಎಂದು ಕೂಡ ನೆಟ್ಟಿಗರು ಆರೋಪ ಮಾಡಿದ್ದಾರೆ.
'ಒಂದು ರೀತಿಯಲ್ಲಿ ಹೇಳಬೇಕು ಅಂದ್ರೆ ಬೇಶರಮ್ ರಂಗ್ ಹಾಡು ಆಕ್ಷೇಪಾರ್ಹ. ಕಲುಷಿತ ಮನಸ್ಥಿತಿಯಿಂದ ಹಾಡನ್ನು ಮಾಡಲಾಗಿದೆ ಅಲ್ಲದೆ ನಾಯಕ ಮತ್ತು ನಾಯಕಿ ಬೇಕೆಂದು ಕೇಸರಿ ಮತ್ತು ಹಸಿರು ಬಟ್ಟೆ ಉಡುಪು ಧರಿಸಿದ್ದಾರೆ ಇದನ್ನು ನಾವು ಪ್ರಶ್ನೆ ಮಾಡಲೇಬೇಕು' ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ. ಅಲ್ಲದೆ ಮಧ್ಯಪ್ರದೇಶದಲ್ಲಿ ಬಿಡುಗಡೆ ಮಾಡಬೇಕಾ ಬೇಡ್ವಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ಸೆನ್ಸಾರ್ ಮಂಡಳಿ ಅನುಮತಿ ನೀಡಿದ್ದು ಹೇಗೆ?: ವಿರೋಧ ಪಕ್ಷದ ನಾಯಕ ಗೋವಿಂದ್ ಸಿಂಗ್ ಕೂಡ ಚಿತ್ರದ ದೃಶ್ಯಗಳ ಬಗ್ಗೆ ಕಿಡಿಕಾರಿದ್ದಾರೆ. ಚಿತ್ರದ ದೃಶ್ಯವು ಅಸಭ್ಯ ಮತ್ತು ಕೊಳಕು. ಭಾರತೀಯ ಸಂಸ್ಕೃತಿ ಇದನ್ನು ಒಪ್ಪಲು ಸಾಧ್ಯವಿಲ್ಲ. ಈ ತರಹದ ಅರೆನಗ್ನ ದೃಶ್ಯಗಳು ಯುವಜನತೆಯಲ್ಲಿ ಮೂಡಿಬರುವುದು ನಮ್ಮ ದೇಶದ ಸಂಪ್ರದಾಯವಲ್ಲ. ಉದ್ದೇಶಪೂರ್ವಕ ಷಡ್ಯಂತ್ರದ ಅಡಿಯಲ್ಲಿ ಇದನ್ನು ಮಾಡಲಾಗುತ್ತಿದೆ. ನಾನು ಅದನ್ನು ಖಂಡಿಸುತ್ತೇನೆ. ದುಡ್ಡು ಕೊಟ್ಟರೆ ಬಿಜೆಪಿ ಸರ್ಕಾರದಲ್ಲಿ ಏನು ಬೇಕಾದರೂ ಆಗುತ್ತದೆ. ಇಂಥ ದೃಶ್ಯಗಳಿರುವ ಚಿತ್ರವನ್ನು ಸೆನ್ಸಾರ್ ಮಂಡಳಿ ಒಪ್ಪಿದ್ದು ಹೇಗೆ. ಇದರಿಂದ ಅರ್ಥವಾಗುವುದು ಏನೆಂದರೆ, ಸಂಸ್ಕೃತಿ ಇರುವುದು ಬಿಜೆಪಿಯವರ ಭಾಷಣದಲ್ಲಿ ಮಾತ್ರ ಎನ್ನುವುದು ಎಂದು ಹೇಳಿದ್ದಾರೆ.
Besharam Rang; ಶಾರುಖ್ ಖಾನ್ 'ಪಠಾಣ್' ಸಾಂಗ್ ರಿಲೀಸ್, ದೀಪಿಕಾ ಸಖತ್ ಹಾಟ್ ಎಂದ ಫ್ಯಾನ್ಸ್
ಇಂಥ ದೃಶ್ಯಗಳಿರುವ ಚಿತ್ರಗಳಿಗೆ ಸೆನ್ಸಾರ್ ಮಂಡಳಿ ಒಪ್ಪಿಗೆ ನೀಡಿದ್ದು ಏಕೆ? ಸರ್ಕಾರದ ಪ್ರತಿನಿಧಿಗಳು ಸೆನ್ಸಾರ್ ಮಂಡಳಿಯಲ್ಲಿ ಇರೋದಿಲ್ಲವೇ? ಮೊದಲಿಗೆ ಹಣ ತೆಗೆದುಕೊಂಡು ಇಂಥ ಚಿತ್ರಗಳಿಗೆ ಅನುಮತಿ ನೀಡುತ್ತಾರೆ. ಬಳಿಕ ಇಡೀ ದೇಶದ ವಾತಾವರಣ ಹಾಳಾಗುವ ಸೂಚನೆ ಸಿಕ್ಕ ಬಳಿಕ ಇದನ್ನು ಖಂಡಿಸಲು ಹೋಗುತ್ತಾರೆ. ಚಿತ್ರದಲ್ಲಿ ಕೇಸರಿ ಬಣ್ಣವನ್ನು ಕೆಟ್ಟದಾಗಿ ತೋರಿಸಿದ್ದಾರೆ. ಇದು ಖಂಡಿತಾ ತಪ್ಪು. ಚಿತ್ರದಲ್ಲಿ ಕೇಸರಿ ಬಟ್ಟೆ ಹಾಕಿಕೊಂಡು ತೋರಿಸಿರುವ ಆಕ್ಷೇಪಾರ್ಹ ದೃಶ್ಯಗಳನ್ನು ಈ ಕೂಡಲೇ ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ.