Besharam Rang; ಶಾರುಖ್ ಖಾನ್ 'ಪಠಾಣ್' ಸಾಂಗ್ ರಿಲೀಸ್, ದೀಪಿಕಾ ಸಖತ್ ಹಾಟ್ ಎಂದ ಫ್ಯಾನ್ಸ್
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ.
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅನೇಕ ವರ್ಷಗಳ ಬಳಿಕ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಸಿನಿಮಾ ಮಾಡುವುದನ್ನೆ ಬಿಟ್ಟಿದ್ದರು. ಇದೀಗ ನಾಲ್ಕೈದು ವರ್ಷಗಳ ಬಳಿಕ ಕಿಂಗ್ ಖಾನ್ ‘ಪಠಾಣ್’ ಸಿನಿಮಾ ಮೂಲಕ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುವ ಸೂಚನೆ ನೀಡಿದ್ದಾರೆ. ಪಠಾಣ್ ಸಿನಿಮಾದ ಮೇಲೆ ಅವರ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪಠಾಣ್ ಅಪ್ ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಪಠಾಣ್ ಸಿನಿಮಾದಿಂದ ಮೊದಲ ಹಾಡು ರಿಲೀಸ್ ಆಗಿದೆ. ‘ಬೇಷರಂ ರಂಗ್...'ಹಾಡು ಬಿಡುಗಡೆಯಾಗಿ ಕೆಲವೇ ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್ ಗಿಂತ ಅಧಿಕ ವ್ಯೂವ್ಸ್ ಪಡೆದುಕೊಂಡಿದೆ. ಮತ್ತೊಮ್ಮೆ ನಟಿ ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅವರ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಶಾರುಖ್ ಖಾನ್ ಪಠಾಣ್ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಪಠಾಣ್ ರಿಲೀಸ್ ಡೇಟ್ ಕೂಡ ಬಹಿರಂಗವಾಗಿದೆ. ಶಾರುಖ್ ಖಾನ್ ಸಿನಿಮಾ 2023ರ ಜನವರಿ 25ಕ್ಕೆ ರಿಲೀಸ್ ಆಗಲಿದೆ. ಅಂದಹಾಗೆ ಸಾಂಗ್ ರಿಲೀಸ್‌ಗೂ ಮೊದಲು ಸಿನಿಮಾತಂಡ ಟೀಸರ್ ರಿಲೀಸ್ ಮಾಡಿತ್ತು. ಆಗಲೆ ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಈಗ ಹಾಡಿನ ಮೂಲಕ ‘ಪಠಾಣ್’ ತಂಡ ಸದ್ದು ಮಾಡುತ್ತಿದೆ. ವಿಶಾಲ್-ಶೇಖರ್ ಸಂಗೀತ ನಿರ್ದೇಶನ ಮಾಡಿರುವ ‘ಬೇಷರಂ ರಂಗ್..’ ಹಾಡನ್ನು ತುಂಬಾ ಗ್ಲಾಮರಸ್ ಆಗಿ ಚಿತ್ರೀಕರಿಸಲಾಗಿದೆ. ಈ ಹಾಡಿನಲ್ಲಿ ನಟಿ ದೀಪಿಕಾ ಸ್ವಿಮ್ ಸೂಟ್‌ನಲ್ಲೇ ಕಾಣಿಸಿಕೊಂಡಿದ್ದಾರೆ. ದೀಪಿಕಾ ಬೋಲ್ಡ್ ಅವತಾರ ಕಂಡು ನೆಟ್ಟಿಗರು ಸಖತ್ ಹಾಟ್ ಎನ್ನುತ್ತಿದ್ದಾರೆ.
ಶಾರುಖ್ ಖಾನ್ ಸಿನಿಮಾಗಾಗಿ ಹಾಟ್ ಆದ ದೀಪಿಕಾ; ಸ್ವಿಮ್‌ಸೂಟ್ ಫೋಟೋ ವೈರಲ್
ಅಂದಹಾಗೆ ಪಠಾಣ್ ಹಿಂದಿ ಜೊತೆಗೆ ತೆಲುಗು ಹಾಗೂ ತಮಿಳಿನಲ್ಲೂ ಬಿಡುಗಡೆ ಆಗಲಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳ ಹೆೇಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೋ ಹಾಗೆ ಶಾರುಖ್ ಕೂಡ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಗ್ಯಾಪ್‌ನ ಬಳಿಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಅಲ್ಲದೆ ದೊಡ್ಡ ಗೆಲುವು ಪಡೆಯಲೇಬೇಕಾದ ಅನಿವಾರ್ಯತೆ ಶಾರುಖ್ ಖಾನ್ ಅವರಿಗಿದೆ. ಹಾಗಾಗಿ ಈ ಚಿತ್ರಕ್ಕಾಗಿ ಅವರು ತುಂಬ ಶ್ರಮಪಟ್ಟಿದ್ದಾರೆ. ದೇಹ ಹುರಿಗೊಳಿಸಿ 6 ಪ್ಯಾಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲಿ ಶಾರುಖ್ ಅವರ 6 ಪ್ಯಾಕ್ ದರ್ಶನ ಆಗಿದೆ. ಈ ವಯಸ್ಸಿನಲ್ಲೂ ಶಾರುಖ್ ಫಿಟ್ನೆಸ್ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ಸಾಂಗ್ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿರುವ ಪಠಾಣ್ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ನನಗೆ ಬೆಳಗ್ಗೆ ಶಿಫ್ಟ್ ಬೇಡ; ಪುತ್ರ ಆರ್ಯನ್ ಖಾನ್ ಮೊದಲ ಸಿನಿಮಾಗೆ ಶಾರುಖ್ ರಿಯಾಕ್ಷನ್ ವೈರಲ್
ಶಾರುಖ್ ಖಾನ್ ಮತ್ತು ದೀಪಿಕಾ ಈಗಾಗಲೇ ಮೂರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇಬ್ಬರ ಕಾಂಬಿನೇಷನ್ ಅಭಿಮಾನಿಗಳ ಹೃದಯ ಗೆದ್ದಿದೆ. ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್ಪ್ರೆಸ್’ ಮತ್ತು ‘ಹ್ಯಾಪಿ ನ್ಯೂ ಇಯರ್’ ಬಳಿಕ ಇದೀಗ ಪಠಾಣ್ ಮೂಲಕ ನಾಲ್ಕನೇ ಬಾರಿಗೆ ಒಟ್ಟಿಗೆ ಬರ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಹಾಡು ನೋಡಿದ್ರೆ ಪಠಾಣ್ ಸಿನಿಮಾದಲ್ಲೂ ಇಬ್ಬರ ಕೆಮಿಸ್ಟ್ರಿ ವರ್ಕೌಟ್ ಆಗಿದ್ದು ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಾವುದೇ ಅನುಮಾನವಿಲ್ಲ. ಅಂದಹಾಗೆ ಈ ಸಿನಿಮಾದಲ್ಲಿ ಜಾನ್ ಅಬ್ರಹಾಂ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಲನ್ ಆಗಿ ಅಬ್ಬರಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಟೀಸರ್ ಮತ್ತು ಹಾಡಿನ ಮೂಲಕ ಸದ್ದು ಮಾಡುತ್ತಿರುವ ಪಠಾಣ್ ಸಿನಿಮಾ ಹೇಗಿರಲಿದೆ ಎನ್ನುವುದು 2023 ಜನವರಿ 25ಕ್ಕೆ ಗೊತ್ತಾಗಲಿದೆ.