Asianet Suvarna News Asianet Suvarna News

ಶ್ರೀದೇವಿ ಜೊತೆಗಿನ ಮೊದಲ ಫೋಟೋ ಹಂಚಿಕೊಂಡ ಬೋನಿ ಕಪೂರ್; ಯಾವ ಸಿನಿಮಾಗೂ ಕಮ್ಮಿ ಇಲ್ಲ ಇವರ ಲವ್ ಸ್ಟೋರಿ

ಭಾರತದ ಮೊದಲ ಮಹಿಳಾ ಸೂಪರ್ ಸ್ಟಾರ್  ಶ್ರೀದೇವಿ ನಿಧನ ಹೊಂದಿ ಇಂದಿಗೆ 5 ವರ್ಷಗಳಾಗಿದೆ. ಪತಿ ಬೋನಿ ಕಪೂರ್ ಶ್ರೀದೇವಿ ಜೊತೆಗಿನ ಮೊದಲ ಫೋಟೋ ಶೇರ್ ಮಾಡಿ ಭಾವುಕರಾಗಿದ್ದಾರೆ. 

Boney Kapoor Shares His First Picture With Sridevi andwhere is the love story of them sgk
Author
First Published Feb 24, 2023, 5:39 PM IST

ಭಾರತದ ಮೊದಲ ಮಹಿಳಾ ಸೂಪರ್ ಸ್ಟಾರ್  ಶ್ರೀದೇವಿ ನಿಧನ ಹೊಂದಿ 5 ವರ್ಷಗಳೇ ಕಳೆಯಿತು. ಇಂದು (ಫೆಬ್ರವರಿ 24) ಶ್ರೀದೇವಿ ಅವರ ಪುಣ್ಯತಿಥಿ. 2018ರಲ್ಲಿ ಶ್ರೀದೇವಿ ಅಪಾರ ಸಂಖ್ಯೆಯ ಅಭಿಮಾನಿಗಳು, ಕುಟುಂಬ, ಚಿತ್ರರಂಗವನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದರು. ದುಬೈನಲ್ಲಿ ಮದುವೆಗೆ ಹಾಜರಾಗಿದ್ದ ಶ್ರೀದೇವಿ ಹೋಟೆಲ್ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಶ್ರೀದೇವಿ ನಿಧನ ಬಾಲಿವುಡ್‌ಗೆ ಬರಸಿಡಿಲು ಬಡಿದಂತೆ ಆಗಿತ್ತು. ಖ್ಯಾತ ನಟಿಯ ಸಾವು ದೊಡ್ಡ  ಮಟ್ಟದ ಸಂಚಲ ಹುಟ್ಟುಹಾಕಿತ್ತು. ಶ್ರೀದೇವಿ ಈಗ ನೆನಪು ಮಾತ್ರ. ಸದ್ಯ ಅವರ ಇಬ್ಬರೂ ಮಕ್ಕಳು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. 

ಪತ್ನಿ ಜೊತೆಗಿನ ಮೊದಲ ಫೋಟೋ ಹಂಚಿಕೊಂಡ ಬೋನಿ ಕಪೂರ್ 

5ನೇ ಪುಣ್ಯತಿಥಿ ಸಮಯದಲ್ಲಿ ಖ್ಯಾತ ನಟಿಯನ್ನು ಮತ್ತೆ ನೆನಪಿಸಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಶ್ರೀದೇವಿ ಅವರ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿವೆ. ಶ್ರೀದೇವಿ ನೆನೆದು ಪುಣ್ಯಸ್ಮರಣೆ ಮಾಡುತ್ತಿದ್ದಾರೆ. ಶ್ರೀದೇವಿ ಪತಿ ಬೋನಿ ಕಪೂರ್ ಕೂಡ ಪತ್ನಿ ಫೋಟೋ ಶೇರ್ ಮಾಡಿ ಭಾವುಕರಾಗಿದ್ದಾರೆ. ಶ್ರೀದೇವಿ ಜೊತೆಗಿನ ಮೊದಲ ಫೋಟೋವನ್ನು ಬೋನಿ ಕಪೂರ್ ಹಂಚಿಕೊಂಡಿದ್ದಾರೆ. ಇದು 1984ರಲ್ಲಿ ಕ್ಲಿಕ್ಕಿಸಿದ ಫೋಟೋ ಎಂದು ಹೇಳಿದ್ದಾರೆ. ಫೋಟೋ ಶೇರ್ ಮಾಡಿ, 'ನನ್ನ ಮೊದಲ ಚಿತ್ರ 1984'ಎಂದು ಹೇಳಿದ್ದಾರೆ. 

ಮತ್ತೊಂದು ಫೋಟೋ ಶೇರ್ ಮಾಡಿ ಶ್ರೀದೇವಿ ನಮ್ಮನ್ನು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮತ್ತೊಂದು ಫೋಟೋದಲ್ಲಿ ಶ್ರೀದೇವಿ ತನ್ನ ಕುಟುಂಬದ ಜೊತೆ ಇದ್ದಾರೆ. ಇಬ್ಬರೂ ಮಕ್ಕಳಾದ ಖುಷಿ ಕಪೂರ್, ಜಾನ್ವಿ ಕಪೂರ್ ಮತ್ತು ರೀನಾ ಕಪೂರ್ ಸೇರಿದಂತೆ ಕುಟುಂಬದ ಜೊತೆ ಪೋಸ್ ನೀಡಿದ್ದಾರೆ. 

ಶ್ರೀದೇವಿ ಮೊದಲ ನೋಟಕ್ಕೆ ಫಿದಾ 

1970 ರ ದಶಕ. ಬೋನಿ ಕಪೂರ್ ಬಾಲಿವುಡ್ ನ ಖ್ಯಾತ ನಿರ್ಮಾಪಕರಾಗಿದ್ದರು. ಶ್ರೀದೇವಿಯನ್ನ ತಮಿಳು ಚಿತ್ರದಲ್ಲಿ ಮೊದಲ ಸಲ ನೋಡಿದಾಗಲೇ ಆಕೆಯ ಸೌಂದರ್ಯಕ್ಕೆ ಮನಸೋತಿದ್ದರು. 1979ರಲ್ಲಿ ಬಾಲಿವುಡ್ ಮೊದಲ ಸಿನಿಮಾ 'Solva Sawan' ಚಿತ್ರದ ಚಿತ್ರೀಕರಣದ ವೇಳೆ ಮೊದಲ ಬಾರಿಗೆ ಭೇಟಿ ಮಾಡಿದರು. ಆದರೆ ಆ ವೇಳೆ ಸರಿಯಾಗಿ ಮಾತನಾಡಲಿಲ್ಲ.

ಹಾಲಿವುಡ್ ದಿಗ್ಗಜ ಸ್ಟೀವನ್ ಸ್ಪೀಲ್ಬರ್ಗ್ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ರು ಶ್ರೀದೇವಿ: ಕಾರಣವೇನು?

'ಮಿಸ್ಟರ್ ಇಂಡಿಯಾ'ಗೆ ಆಫರ್ ಮಾಡಿದ ಬೋನಿ ಕಪೂರ್ 

ಶ್ರೀದೇವಿಯ ಜೊತೆ ಆತ್ಮೀಯತೆ ಬೆಳಸಿಕೊಳ್ಳಬೇಕು ಎಂಬ ಕಾರಣಕ್ಕೆ 'ಮಿಸ್ಟರ್ ಇಂಡಿಯಾ' ಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟರು. ನಿರೀಕ್ಷೆಯಂತೆ ಶ್ರೀದೇವಿ ಮತ್ತು ಬೋನಿ ಅವರ ನಡುವೆ ಸ್ನೇಹವೂ ಉತ್ತಮವಾಯಿತು. 'ಮಿಸ್ಟರ್ ಇಂಡಿಯಾ ಸಿನಿಮಾಗೆ ಶ್ರೀದೇವಿ ಕೇಳಿದ್ದಕ್ಕಿಂತ ಹೆಚ್ಚು ಸಂಭಾವನೆ ನೀಡಿದ್ದರು ಬೋನಿ ಕಪೂರ್. ಆದರೆ ಶ್ರೀದೇವಿಗೆ ಬೋನಿ ಕಪೂರ್ ಪ್ರೀತಿಯ ಬಲೆಯಲ್ಲಿ ಬೀಳಲಿಲ್ಲ. 

ಮೋನಾ ಜೊತೆ ಬೋನಿ ಕಪೂರ್ ಮದುವೆ

ಆದರೆ ಅದೇ ಸಮಯಕ್ಕೆ ಶ್ರೀದೇವಿ, ನಟ ಮಿಥುನ್ ಚಕ್ರವರ್ತಿ ಜೊತೆ ಸೀಕ್ರೆಟ್ ಆಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇದರಿಂದ ಆಘಾತಗೊಂಡ ಬೋನಿ ಕಪೂರ್ ಶ್ರೀದೇವಿ ಗುಂಗಿನಿಂದ ಹೊರ ಬಂದು ಮೋನಾ ಜೊತೆ ಸಪ್ತಪದಿ ತುಳಿದರು. ಇವರ ದಾಂಪತ್ಯಕ್ಕೆ ಅರ್ಜುನ್ ಮತ್ತು ಅನ್ಷುಲ್ ಕಪೂರ್ ಇಬ್ಬರೂ ಮಕ್ಕಳಿದ್ದಾರೆ.

 
 
 
 
 
 
 
 
 
 
 
 
 
 
 

A post shared by Boney.kapoor (@boney.kapoor)

Actress Sridevi ಸಾವಿಗೆ 5 ವರ್ಷ: ಭಾವುಕ ನುಡಿನಮನ ಸಲ್ಲಿಸಿದ ಮಗಳು ಜಾಹ್ನವಿ ಕಪೂರ್​

ಮದುವೆಗೂ ಮೊದಲು ಗರ್ಭಿಣಿ, 1996ರಲ್ಲಿ ವಿವಾಹ

ಮಿಥುನ್ ಚಕ್ರವರ್ತಿಯಿಂದ ದೂರ ಆಗಿ ಶ್ರೀದೇವಿ ಒಂಟಿಯಾಗಿದ್ದರು. ಒಂಟಿಯಾಗಿದ್ದ ಶ್ರೀದೇವಿ ಬುದುಕಿಗೆ ರೀ ಎಂಟ್ರಿ ಕೊಟ್ಟರು ಬೋನಿ ಕಪೂರ್. ಶ್ರೀದೇವಿಗೆ ಆಶ್ರಯ ನೀಡಿದರು. ಇಬ್ಬರ ನಡುವಿನ ಸ್ನೇಹ ಬೆಳೆಯಿತು. ಶ್ರೀದೇವಿ ಮದುವಿಗೂ ಮುಂಚಿಯೇ ಗರ್ಭಿಣಿ ಆದರು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಬೋನಿ ಕಪೂರ್ ತಮ್ಮ ಮೊದಲ ಪತ್ನಿ ಮೋನಾಗೆ ವಿಚ್ಛೇದನ ನೀಡಿ 1996ರಲ್ಲಿ ಶ್ರೀದೇವಿಯನ್ನ ಮದುವೆ ಆದರು. ಶ್ರೀದೇವಿ ಮತ್ತು ಬೋನಿ ಕಪೂರ್ ದಂಪತಿಗೆ ಇಬ್ಬರು ಮಕ್ಕಳು, ಖುಷಿ ಮತ್ತು ಜಾನ್ವಿ ಕಪೂರ್. ಇಬ್ಬರೂ ಈಗ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. 

Follow Us:
Download App:
  • android
  • ios