ಬಾಲಿವುಡ್‌ನ ಸೂಪರ್ ಹಿಟ್ ಜೋಡಿ ಎಂದೇ ಖ್ಯಾತಿಗಳಿಸಿರುವ ಶಾರುಖ್ ಖಾನ್(Shah Rukh Khan) ಮತ್ತು ಕಾಜೋಲ್(Kajol) ಇಬ್ಬರು ಮತ್ತೆ ಒಂದಾಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇಬ್ಬರನ್ನು ಒಟ್ಟಿಗೆ ಮತ್ತೆ ಕರೆತರುತ್ತಿದ್ದಾರೆ ನಿರ್ದೇಶಕ ಕರಣ್ ಜೋಹರ್. ಬರೋಬ್ಬರಿ 7 ವರ್ಷಗಳ ಬಳಿಕ ಶಾರುಖ್ - ಕಾಜೋಲ್ ಒಟ್ಟಿಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಬಾಲಿವುಡ್‌ನ ಸೂಪರ್ ಹಿಟ್ ಜೋಡಿ ಎಂದೇ ಖ್ಯಾತಿಗಳಿಸಿರುವ ಶಾರುಖ್ ಖಾನ್(Shah Rukh Khan) ಮತ್ತು ಕಾಜೋಲ್(Kajol) ಇಬ್ಬರು ಮತ್ತೆ ಒಂದಾಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಜೋಡಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದು ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಹೃದಯ ಗೆದ್ದಿತ್ತು. ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ, ಕುಚ್ ಕುಚ್ ಹೋತಾ ಹೇ, ದಿಲ್ವಾವೆ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಈ ಜೋಡಿ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ. ಶಾರುಖ್ ಮತ್ತು ಕಾಜೋಲ್ ಅವರನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಇದೀಗ ಅಭಿಮಾನಿಗಳ ಆಸೆ ಈಡೇರುವ ಸಮಯ ಬಂದಿದೆ.
ಹೌದು, ಅಭಿಮಾನಿಗಳ ಫೇವರಿಟ್ ಜೋಡಿ, ಆನ್ ಸ್ಕ್ರೀನ್ ಸೂಪರ್ ಹಿಟ್ ಕಪಲ್ ಮತ್ತೆ ಒಟ್ಟಿಗೆ ತೆರೆಮೇಲೆ ಬರಲು ಸಜ್ಜಾಗಿದೆ. ಅಂದಹಾಗೆ ಇಬ್ಬರನ್ನು ಒಟ್ಟಿಗೆ ಮತ್ತೆ ಕರೆತರುತ್ತಿದ್ದಾರೆ ನಿರ್ದೇಶಕ ಕರಣ್ ಜೋಹರ್. ಬರೋಬ್ಬರಿ 7 ವರ್ಷಗಳ ಬಳಿಕ ಶಾರುಖ್ - ಕಾಜೋಲ್ ಒಟ್ಟಿಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಸಖತ್ ಎಕ್ಸಾಯಿಟ್ ಆಗಿದ್ದು ತೆರೆಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಅಂದಹಾಗೆ ಈ ಜೋಡಿ ಒಂದಾಗಿರುವುದು ಕರಣ್ ಜೋಹರ್ ನಿರ್ದೇಶನದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ. ಹೌದು, ಅಲಿಯಾ ಭಟ್ ಮತ್ತು ರಣ್ವೀರ್ ಸಿಂಗ್ ನಟನೆಯ ಈ ಸಿನಿಮಾದಲ್ಲಿ ಶಾರುಖ್-ಕಾಜೋಲ್ ಜೋಡಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕರಣ್ ಜೋಹರ್ ಸಾರಥ್ಯದಲ್ಲಿ ಬರ್ತಿರುವ ಈ ಸಿನಿಮಾ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. 6 ವರ್ಷಗಳ ಬಳಿಕ ಕರಣ್ ಜೋಹರ್ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ.
ಅಬ್ಬಾ..!! Shah Rukh Khan 'ಮನ್ನತ್' ನಿವಾಸದ ಹೊಸ ನಾಮಫಲಕದ ಬೆಲೆ ಇಷ್ಟೊಂದಾ
ಕರಣ್ ಜೋಹರ್ ಕೊನೆಯದಾಗಿ ಏ ದಿಲ್ ಹೇ ಮುಷ್ಕಿಲ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾದಲ್ಲಿ ರಣಬೀರ್ ಕಪೂರ್, ಅನುಷ್ಕಾ ಶರ್ಮಾ, ಐಶ್ವರ್ಯ ರೈ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ಮತ್ತೆ ಕರಣ್ ಜೋಹರ್ ನಿರ್ದೇಶನಕ್ಕೆ ಇಳಿದಿದ್ದು ಶಾರುಖ್ ಮತ್ತು ಕಾಜೋಲ್ ಅವರನ್ನು ಕರೆತರುವ ಮೂಲಕ ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದ್ದಾರೆ.
ಅಂದಹಾಗೆ ಸಿನಿಮಾದಲ್ಲಿ ಶಾರುಖ್ ಮತ್ತು ಕಾಜೋಲ್ ಅವರ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಬಾಲಿವುಡ್ ಲೈಫ್ ವರದಿ ಮಾಡಿದೆ. ಹಾಡು ಅಥವಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂದು ವರದಿ ಮಾಡಿದೆ. ಕರಣ್ ಜೋಹರ್ ಕೂಡ ಇಬ್ಬರ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರಂತೆ.
Shahrukh Khan ಹೇಗಾಗಿದ್ದಾರೆ ನೋಡಿ; ಕಿಂಗ್ ಖಾನ್ ಗುರುತೇ ಸಿಗೋಲ್ಲ!
ಇನ್ನು ಶಾರುಖ್ ಖಾನ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಪಠಾಣ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸದ್ಯ ರಾಜ್ ಕುಮಾರ್ ಹಿರಾನಿ ಅವರ ಇನ್ನು ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ತಾಪ್ಸಿ ಪನ್ನು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಮಿಂಚಿದ್ದಾರೆ. ಈ ಎರಡು ಸಿನಿಮಾಗಳ ಜೊತೆಗೆ ಶಾರುಖ್ ತಮಿಳು ನಿರ್ದೇಶಕ ಅಟ್ಲೀ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
