ನಟಿ ಭಾವನಾ ಮೆನನ್‌ರಿಂದ ಕಲಿಯಬೇಕಾದ ಜೀವನ ಪಾಠಗಳಿದು!
ಸಿಂಪಲ್ ಆಂಡ್ ಬ್ಯೂಟಿಫುಲ್ ನಟಿ ಭಾವನಾ ಮೆನನ್ ಅನೇಕರಿಗೆ ಸ್ಫೂರ್ತಿ ಅವರಿಂದ ಅಭಿಮಾನಿಗಳು ಕಲಿಯಬೇಕಾದ ಜೀವನ ಪಾಠಗಳಿದು.
2010ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜಾಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಬೋಲ್ಡ್ ಅಂಡ್ ಬ್ಯೂಟಿಫುಲ್ ನಟಿ ಭಾವನಾ.
ಭಾವನಾ ತೆರೆ ಮೇಲೆ ಮಾತ್ರವಲ್ಲದೆ ಆಫ್‌ಸ್ಕ್ರೀನ್‌ನಲ್ಲೂ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ ಅಲ್ಲದೆ ಅವರ ಬೋಲ್ಡ್‌ನೆಸ್ ಅನೇಕರಿಗೆ ಸ್ಫೂರ್ತಿ.
ಭಾವನಾ ಕರುಣಾಮಯಿ. ಪ್ರಾಣಿ ಮತ್ತು ಪಕ್ಷಿಗಳನ್ನು ತುಂಬಾನೇ ಪ್ರೀತಿ ಮಾಡುತ್ತಾರೆ. ಎಲ್ಲೇ ಪ್ರಾಣಿಗಳನ್ನು ನೋಡಿದ್ದರೂ ಮುದ್ದು ಮಾಡುತ್ತಾರೆ ಎಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.
ಸೆಲ್ಫ್ ಲವ್ ತುಂಬಾನೇ ಮುಖ್ಯ. ಜೀವನದಲ್ಲಿ ಏನೇ ಬದಲಾವಣೆಗಳು ಅಗಲಿ ನಮ್ಮನ್ನು ನಾವು ಮೊದಲು priority ಮಾಡಿಕೊಳ್ಳಬೇಕೆಂದು ಹೇಳುತ್ತಾರೆ.
ಸಣ್ಣ ಪುಟ್ಟ ವಿಚಾರಗಳಲ್ಲೂ ಸಂತೋಷ ಹುಡುಕುವುದು. ಖುಷಿ ಕೊಡುವ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
ಜೀವನವನ್ನು ಬ್ಲ್ಯಾಕ್ ಆಂಡ್ ವೈಟ್ ಆಗಿರಬೇಕು ಎಂದೇನು ಇಲ್ಲ. ಕಲರ್‌ಫುಲ್ ಅಗಿರಬೇಕು, ಆ ಕಲರ್‌ನ ನಾವು ಸೇರಿಸಬೇಕು ಎನ್ನುತ್ತಾರೆ.
ಆಪ್ತ ಸ್ನೇಹಿತರ ಜೊತೆ ಸಮಯ ಕಳೆಯಬೇಕು. ಜೀವನದಲ್ಲಿ ಎಷ್ಟೇ ಕಷ್ಟ ಎದುರಾದರೂ ಸ್ನೇಹಿತರ ಜೊತೆ ಒಮ್ಮೆ ಮಾತನಾಡಿದರೆ ಲೈಫ್ ಕೂಲ್ ಅನಿಸುತ್ತದೆ.
ಪ್ರೀತಿಪಾತ್ರರನ್ನು ಹತ್ತಿರ ಇಟ್ಟುಕೊಳ್ಳಿ. ಭಾವನಾ ಪರ್ಸನಲ್ ಲೈಫ್ ತುಂಬಾನೇ ಪ್ರೈವೇಟ್ ಆಗಿಟ್ಟುಕೊಂಡರೂ ಸದಾ ಅವರ ಸಪೂರ್ಟ್‌ಗೆ ಫ್ಯಾಮಿಲಿ ನಿಂತಿರುತ್ತದೆ.