ವೃತ್ತಿ ಜೀವನದಲ್ಲಿ ಏರು ಪೇರು, ಫ್ಯಾಮಿಲಿ ಸಪೋರ್ಟ್ ಬಗ್ಗೆ ಮೊದಲ ಬಾರಿ ಮಾತನಾಡಿದ ನಟಿ ವಿದ್ಯಾ ಬಾಲನ್. 

ಬಾಲಿವುಡ್ ಬೆಸ್ಟ್‌ ಮತ್ತು ವರ್ಸಟೈಲ್ ನಟಿ ವಿದ್ಯಾ ಬಾಲನ್ ಕೈಯಲ್ಲಿ ಆಫರ್‌ಗಳು ಕಡಿಮೆ ಇದ್ದರೂ ಆಕೆ ಮೇಲಿರುವ ಪ್ರೀತಿ ಕಡಿಮೆ ಆಗಿಲ್ಲ. ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿರುವ ರೀತಿಗೆ ವಿದ್ಯಾ ವೃತ್ತಿ ಜೀವನದಲ್ಲಿ ಏನೆಲ್ಲಾ ಬದಲಾವಣೆ ಅಗಿದೆ. ಇದಕ್ಕೆ ಪತಿ ಸಿದ್ಧಾರ್ಥ್‌ ಹೇಗೆ ರಿಯಾಕ್ಟ್ ಮಾಡುತ್ತಾರೆಂದು ಹಂಚಿಕೊಂಡಿದ್ದಾರೆ.

ಪತಿ ಬಗ್ಗೆ ವಿದ್ಯಾ ಮಾತು:

'ನಾನು ನಿಜ ಹೇಳಬೇಕು ನನ್ನ ಪತಿ ಸಿದ್ಧಾರ್ಥ್ ತುಂಬಾ ಒಳ್ಳೆಯ listener. ನಾನು ಹೇಳುವ ಪ್ರತಿಯೊಂದು ವಿಚಾರವನ್ನು ತುಂಬಾ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾರೆ. ಅವರು ಯಾವ ರೀತಿ ಸಲಹೆ ನೀಡುವುದಿಲ್ಲ. ಆದರೆ ಅವರಿಗೆ ಹೇಳುತ್ತಲೇ ನನಗೆ ಒಂದು ಕ್ಲಾರಿಟಿ ಸಿಗುತ್ತದೆ. ಅವರು ನನ್ನ ಸಂಗಾತಿ ಆಗಿ ಪಡೆದುಕೊಂಡಿರುವುದಕ್ಕೆ ನಾನು ಪುಣ್ಯ ಮಾಡಿದ್ದೀನಿ. ನಾವು ಮದುವೆಯಾಗಿ 10 ವರ್ಷ ಆಗಿದೆ ಮದುವೆ ಜೀವನವನ್ನು ನಾನು appreciate ಮಾಡುವುದಕ್ಕೆ ಸಿದ್ಧಾರ್ಥ್ ಅವರೇ ಕಾರಣ'ಎಂದು ಇಟೈಮ್ಸ್‌ ಸಂದರ್ಶನದಲ್ಲಿ ವಿದ್ಯಾ ಮಾತನಾಡಿದ್ದಾರೆ.

'ನನ್ನ ಮದುವೆ ಬಗ್ಗೆ ಅಥವಾ ನನ್ನ ಪತಿ ಜೊತೆಗಿರುವ ಫೋಟೋಗಳನ್ನು ಹಂಚಿಕೊಳ್ಳುವುದಿಲ್ಲ ಏಕೆಂದರೆ ನಾವಿಬ್ಬರೂ ತುಂಬಾನೇ ಪ್ರೈವೇಟ್ ವ್ಯಕ್ತಿಗಳು. ನಾನು ನಟಿ ಎಂದ ಮಾತ್ರಕ್ಕೆ ಎಲ್ಲಾನೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಕಿಲ್ಲ. ಕೆಲಸ ಹೊರತು ಪಡಿಸಿ ನಾನು ನನ್ನ ಫೋಟೋನೇ ಹಾಕುವುದಿಲ್ಲ. ನಾನು ನೋಡಲು ತುಂಬಾನೇ ಬೋಲ್ಡ್ ಆಗಿರುವೆ ಆದರೆ ನಿಜಕ್ಕೂ Shy ವ್ಯಕ್ತಿ. ನಾನು ತುಂಬಾನೇ ಪ್ರೈವೇಟ್ ವ್ಯಕ್ತಿ. ಜನರ ಜೊತೆ ಮಾತನಾಡುತ್ತೀನಿ ಆದರೂ ನನಗೆ ನಂದೇ ಸರ್ಕಲ್ ಇದೆ' ಎಂದು ವಿದ್ಯಾ ಬಾಲನ್ ಹೇಳಿದ್ದಾರೆ.

6 ತಿಂಗಳು ತಮ್ಮ ಮುಖ ನೋಡಿಕೊಳ್ಳದ ವಿದ್ಯಾ ಬಾಲನ್, ಆಗಿದ್ದೇನು?

ವಿದ್ಯಾ ದಿನ:

'ಎಲ್ಲರಂತೆ ನನ್ನ ಲೈಫ್‌ ತುಂಬಾನೇ ನಾರ್ಮಲ್. ಬೆಳಗ್ಗೆ 8.30 ಎದ್ದು ಯೋಗ ಮತ್ತು ವಾಕಿಂಗ್ ಮಾಡುವೆ ಯಾವ ವಾರ ಅನ್ನೋದು ಮುಖ್ಯವಾಗುತ್ತದೆ. ತಿಂಡಿ ತಿಂದು ಟೈಂ ಪಾಸ್ ಮಾಡುತ್ತೀನಿ, ರಿಲ್ಯಾಕ್ಸ್ ಮಾಡುತ್ತೀನಿ. ನನ್ನ ಫ್ಯಾಮಿಲಿಗೆ ಕರೆ ಮಾಡಿ ಮಾತನಾಡುತ್ತೀನಿ, ಅಕ್ಕನ ಮಕ್ಕಳ ಜೊತೆ ಮಾತನಾಡುತ್ತೀನಿ. ಏನಾದರೂ ಕಾರ್ಯಕ್ರಮ ನೋಡುತ್ತೀನಿ ಇಲ್ಲವಾದರೆ ಬುಕ್ ಓದುತ್ತೀನಿ. ಸಂಜೆ ಸಿದ್ಧಾರ್ಥ್‌ ಫ್ರೀ ಇದ್ದರೆ ಅವರ ಜೊತೆ ಸಮಯ ಇಲ್ಲದಿದ್ದರೆ ಮನೆಯಲ್ಲಿ ಸುಮ್ಮನೆ ಇರುತ್ತೀನಿ. ನಾನು ಇಡೀ ಮನೆ ಕ್ಲೀನ್ ಮಾಡುತ್ತೀನಿ' ಎಂದಿದ್ದಾರೆ. 

ಸಾಮಾನ್ಯ ಜನರಂತೆ ಪಾರ್ಕ್‌ನಲ್ಲಿ ಕುಳಿತು ಹರಟಿದ ವಿದ್ಯಾ ಬಾಲನ್ ಶೆಫಾಲಿ ಶಾ

ವಿದ್ಯಾ ವೇಟ್:

' ಜನರು ನನ್ನ ದೇಹ ತೂಕದ ಬಗ್ಗೆ ಮಾತನಾಡುತ್ತಾರೆ ಆದರೆ ನಾನು ಅದಕ್ಕೆ ಕೇರ್ ಮಾಡುತ್ತಿಲ್ಲ. ನಾನು ರಿಯಾಕ್ಟ್ ಮಾಡುತ್ತಿಲ್ಲ ಅಂತ ಜನರಿಗೆ ಗೊತ್ತಾಗುತ್ತಿದೆ. ನನ್ನ ದೇಹದ ಬಗ್ಗೆ ನಾನು ಸಂತೋಷವಾಗಿರುವೆ. ನನ್ನ ಜೊತೆ ನಿಮಗೆ ಪ್ರಾಬ್ಲಂ ಇದ್ದರೆ ಅದು ನಿಮ್ಮ ಪ್ರಾಬ್ಲಂ ಆಗಿರುತ್ತದೆ. ಅರ್ಧ ಇಲ್ಲಸಲ್ಲದ ವಿಚಾರಗಳಿಗೆ ನಾನು ಹೆಡ್‌ಲೈನ್ಸ್ ಆಗುತ್ತೀನಿ. ಕೆಲವೊಮ್ಮೆ ಮನಸ್ಸಿಗೆ ಬಾರವಾಗುತ್ತದೆ ಮನಸ್ಸಿನ ಧೈರ್ಯ ಕಡಿಮೆ ಆಗಿತ್ತು. ಫೋಟೋ ಕ್ಲಿಕ್ ಮಾಡುವಾಗ ಕೈನ ಸೊಂಟದ ಮೇಲೆ ಇಟ್ಟುಕೊಳ್ಳಬೇಕಾ ಅಥವಾ ಹೇಗೆ ಪೋಸ್ ಮಾಡಬೇಕು ಎಂದು ನನಗೆ ಗೊತ್ತಿಲ್ಲ ಅದಿಕ್ಕೆ ಫೋಟೋ ಚೆನ್ನಾಗಿ ಬರೋಲ್ಲ ಅದಕ್ಕೂ ನಾನು ಟಾರ್ಗೇಟ್ ಆಗಿದ್ದೀನಿ' ಎಂದು ವಿದ್ಯಾ ಹೇಳಿದ್ದಾರೆ.