ಸಾಮಾನ್ಯ ಜನರಂತೆ ಪಾರ್ಕ್‌ನಲ್ಲಿ ಕುಳಿತು ಹರಟಿದ ವಿದ್ಯಾ ಬಾಲನ್ ಶೆಫಾಲಿ ಶಾ
ಶನಿವಾರದಂದು ವಿದ್ಯಾ ಬಾಲನ್ (Vidya Balan) ಮತ್ತು ಶೆಫಾಲಿ ಶಾ (Shefali Shah) ತಮ್ಮ ಜಲ್ಸಾ ಚಿತ್ರದ ಪ್ರಚಾರಕ್ಕಾಗಿ ತೆರಳಿದ್ದರು. ಈ ವೇಳೆ ಇಬ್ಬರ ನಡುವೆ ಫ್ರೆಂಡ್ಲಿ ಬಾಂಡಿಗ್ ಕಾಣಿಸಿಕೊಂಡಿತು. ಪಾರ್ಕಿನಲ್ಲಿ ಕುಳಿತು ಇಬ್ಬರೂ ಹರಟೆ ಹೊಡೆಯುತ್ತಿರುವುದು ಕಂಡು ಬಂದಿದೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಮುಂಬೈನ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡರು.
ವಿದ್ಯಾ ಬಾಲನ್ ಮತ್ತು ಶೆಫಾಲಿ ಶಾ ಅವರನ್ನು ಜುಹುದಲ್ಲಿ ಪಾಪರಾಜಿಗಳು ಗುರುತಿಸಿದ್ದಾರೆ. ಅವರು ತಮ್ಮ ಜಲ್ಸಾ ಚಿತ್ರದ ಪ್ರಚಾರಕ್ಕೆ ಬಂದಿದ್ದರು. ಈ ವೇಳೆ ಇಬ್ಬರೂ ಮಾತನಾಡುತ್ತಿರುವುದು ಕಂಡು ಬಂತು. ಫೋಟೋಶೂಟ್ ಮುಗಿದ ನಂತರ ಇಬ್ಬರೂ ಪಾರ್ಕ್‌ನಲ್ಲಿ ಕುಳಿತು ಆರಾಮವಾಗಿ ಮಾತನಾಡುತ್ತಿದ್ದರು.ವಿದ್ಯಾ ಬಾಲನ್ ಕಪ್ಪು ಬಿಳಿ ಮಿಶ್ರಿತ ಸೀರೆಯನ್ನು ಧರಿಸಿದ್ದರು. ಅದೇ ಸಮಯದಲ್ಲಿ, ಶೆಫಾಲಿ ಶಾ ಕೂಡ ಸುಂದರವಾದ ಸೀರೆಯಲ್ಲಿ ಕಾಣಿಸಿಕೊಂಡರು. ಇಬ್ಬರೂ ಕೂದಲನ್ನು ಕಟ್ಟಿದ್ದರು. ಸಾಂಪ್ರದಾಯಿಕ ಉಡುಗೆಯಲ್ಲಿ ಇಬ್ಬರೂ ಎಂದಿನಂತೆ ತುಂಬಾ ಸುಂದರವಾಗಿ ಕಾಣುತ್ತಿದ್ದರು.
ಮಲೈಕಾ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಜೀನ್ಸ್ ಜೊತೆ ಕಿತ್ತಳೆ ಕ್ರಾಪ್ ಟಾಪ್ ಧರಿಸಿದ್ದರು. ಸಿಂಪಲ್ ಲುಕ್ ನಲ್ಲೂ ಗ್ಲಾಮರಸ್ ಆಗಿ ಕಾಣಿಸುತ್ತಿದ್ದರು.
ಪೂಜಾ ಹೆಗ್ಡೆ ಜುಹುದಲ್ಲಿ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾದರು. ಈ ಸಮಯದಲ್ಲಿ ಅವರು ನೀಲಿ ಬಣ್ಣದ ಜಂಪ್‌ಸೂಟ್ ಧರಿಸಿದ್ದರು. ಇದರೊಂದಿಗೆ ತಲೆಗೂದಲು ಕಟ್ಟದೆ ಹಾಗೇ ಬಿಟ್ಟು ಕೊಂಡಿದ್ದರು. ಪೂಜಾ ಅಭಿನಯದ 'ರಾಧೆ ಶ್ಯಾಮ್' ಚಿತ್ರ ವಿಶ್ವಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ.
ಅನುಷ್ಕಾ ಶರ್ಮಾ ಕೂಡ ಫಿಲ್ಮ್ ಸಿಟಿಯ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಅನುಷ್ಕಾ ಜೀನ್ಸ್ ಮತ್ತು ಕಪ್ಪು ಟೀ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನ ಫಿಟ್ ಮಮ್ಮಿ ಅನುಷ್ಕಾ ತುಂಬಾ ಸುಂದರವಾಗಿ ಕಾಣುತ್ತಿದ್ದರು
ಈ ದಿನಗಳಲ್ಲಿ ಸಮಂತಾ ರುತ್ ಪ್ರಭು ಮುಂಬೈನಲ್ಲಿದ್ದಾರೆ. ಅವರು ಫಿಲ್ಮ್ ಸಿಟಿಯ ಹೊರಗೆ ಕಾಣಿಸಿಕೊಂಡರು. ಅವರು ಟಿ-ಶರ್ಟ್ ಮತ್ತು ಕಪ್ಪು ಜೀನ್ಸ್ ಧರಿಸಿದ್ದರು. ತೆರೆದ ಕೂದಲಿನಲ್ಲಿ ಸೌತ್ ನಟಿ ಸುಂದರವಾಗಿ ಕಾಣುತ್ತಿದ್ದರು.
ಅದೇ ಸಮಯದಲ್ಲಿ, ಅನನ್ಯ ಪಾಂಡೆ ಮುಂಬೈನಲ್ಲಿ ಖಾರ್‌ನಲ್ಲಿರುವ ಧರ್ಮ ಕಚೇರಿಯ ಹೊರಗೆ ಕಾಣಿಸಿಕೊಂಡರು. ಅವರು ಡೆನಿಮ್ ಜೊತೆ ಕಪ್ಪು ಕ್ರಾಪ್ ಟಾಪ್ ಧರಿಸಿದ್ದರು. ಅವರು ಕಟ್ಟಿದ ಕೂದಲಿನಲ್ಲಿ ಮತ್ತು ಮೇಕ್ಅಪ್ ಇಲ್ಲದೆಯೂ ಸುಂದರವಾಗಿ ಕಾಣುತ್ತಿದ್ದರು.
ರಶ್ಮಿ ದೇಸಾಯಿ ಅವರನ್ನೂ ಪಾಪರಾಜಿಗಳು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಅವರು ಬೂದು ಬಣ್ಣದ ಸ್ಕರ್ಟ್ ಜೊತೆಗೆ ಕಪ್ಪು ಕ್ರಾಪ್ ಟಾಪ್ ಧರಿಸಿದ್ದ ರಶ್ಮಿಕಾ ಕನ್ನಡಕದ ಜೊತೆ ಗ್ಲಾಮರಸ್ ಆಗಿ ಕಾಣಿಸಲು ನಟಿ ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.