ಬಾಲಿವುಡ್‌ ರಿಚ್‌ ಮ್ಯಾನ್‌ ಅಕ್ಷಯ್ ಕುಮಾರ್ ಅಭಿನಯದ ಕಿಲಾಡಿ ಚಿತ್ರ ನೋಡಿದ್ದೀರಾ ಅಂದ್ಮೇಲೆ ನೀವು ವಾದಾ ರಹಾ ಸನಮ್ ಹಾಡು ಕೇಳಿರಲೇಬೇಕು...

ಹೌದು! ಬಾಲಿವುಡ್‌ ಟಾಪ್ ಚಿತ್ರ ಸಾಹಿತಿ ಆಗಿರುವ ಅನ್ವರ್‌ ಸಾಗರ್‌ 80-90 ದಶಕಗಳಲ್ಲಿ  ಹಾಡುಗಳನ್ನು ರಚಿಸಿದವರು.  ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಮುಂಬೈನ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದರು  ಆದರೆ ಚಿಕಿತ್ಸೆ ವಿಫಲವಾದ ಕಾರಣ ಬುಧವಾರ ಕೊನೆ ಉಸಿರೆಳೆದಿದ್ದಾರೆ. 

ಭೀಕರ ಅಪಘಾತ; ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು ವಿನ್ನರ್ ಮೆಬೀನಾ ದುರ್ಮರಣ

ವೈದ್ಯರೂ ಇನ್ನೂ ಸಾವಿಗೆ ನಿಖರವಾದ ಕಾರಣ ನೀಡಿಲ್ಲವಾದರೂ ಕುಟುಂಬಸ್ಥರು ಆಪ್ತರಿಗೆ ವಯೋಸಹಜ ಕಾಯಿಲೆ ಎಂದೇ ತಿಳಿಸಿದ್ದಾರೆ ಎನ್ನಲಾಗಿದೆ. 

ಡೇವಿಡ್ ಧವನ್ಸ್ ಅವರ 'ಯರಾನಾ', ಜಾಕಿ ಶ್ರಾಫ್‌ ಅಭಿನಯದ 'ಸಪ್ನೆ ಸಾಜನ್ ಕೆ' ಹಾಗೂ ಅನೇಕ ಅಕ್ಷಯ್ ಕುಮಾರ್ ಸಿನಿಮಾಗಳಿಗೆ  ಸಾಹಿತ್ಯ ರಚನೆ ಮಾಡಿದ್ದಾರೆ.  ಅನ್ವರ್‌ ಹೆಚ್ಚಾಗಿ ರೋಮ್ಯಾಂಟಿಕ್‌ ಸಾಹಿತ್ಯ ಬರೆಯುವುದಕ್ಕೆ ಹೆಸರುವಾಸಿಯಾಗಿದ್ದರು. 2004ರಲ್ಲಿ 'ಗರ್ಲ್‌ಫ್ರೆಂಡ್‌' ಸಿನಿಮಾಗೆ  ಅನ್ವರ್‌ ಕೊನೆಯ ಗೀತೆ ರಚನೆ ಮಾಡಿದ್ದರು. ಅನ್ವರ್‌ ಇನ್ನಿಲ್ಲ ಎಂದ ವಿಚಾರವನ್ನು ಇಂಡಿಯಾನ್ ಪರ್ಫಾರ್ಮಿಂಗ್ ರೈಟ್‌ ಸೊಸೈಟಿ  ಲಿಮಿಟೆಡ್‌ ಅವರು ಟ್ಟಿಟ್ಟರ್‌ನಲ್ಲಿ ತಿಳಿಸಿದ್ದಾರೆ.

'ಹಿರಿಯ ಚಲನಚಿತ್ರ ಸಾಹಿತಿ ಹಾಗೂ IPRS ಸದಸ್ಯ ಅನ್ವರ್‌ ಸಾಗರ್‌ ನಿಧನರಾಗಿದ್ದಾರೆ.  ಅವರು ಕುಟುಂಬಕ್ಕೆ ಆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ  ಅನ್ವರ್ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಟ್ಟೀಟ್‌ ಮಾಡಿದ್ದಾರೆ.

ಬಾಲಿವುಡ್ ಚಿತ್ರರಂಗ ಈ ವರ್ಷ ಅನೇಕ ದಿಗ್ಗಜರನ್ನು ಕಳೆದುಕೊಳ್ಳುತ್ತಿರುವ ದುಃಖದಲ್ಲಿದೆ.  ಲಾಕ್ಡೌನ್ ಸಮಯದಲ್ಲಿ ಬ್ಯಾಕ್ ಟು ಬ್ಯಾಕ್ ಆಗಿ ನಟ ಇರ್ಫಾನ್ ಖಾನ್ ಹಾಗೂ ರಿಷಿ ಕಪೂರ್ ನಮ್ಮನ್ನು ಅಗಲಿದ್ದಾರೆ ಅಷ್ಟೇ ಅಲ್ಲದೆ ಕೆಲ ದಿನಗಳ ಹಿಂದೆ ಖ್ಯಾತ ಗಾಯಕ ವಾಜಿದ್ ಖಾನ್ ಕಿಡ್ನಿ ವೈಫಲ್ಯದಿಂದ ಹಾಗೂ ಕೋವಿಡ್19 ಪಾಸಿಟಿವ್ನಿಂದ ಇಹಲೋಕ ತ್ಯಜಿಸಿದ್ದಾರೆ. ಒಟ್ಟಾರೆ 2020 ಯಾರೂ ಊಹಿಸಿರದ ವರ್ಷವಾಗಿ ಉಳಿಯುತ್ತದೆ.