ಲಿಂಡ್ಸೆ ಲೋಹಾನ್ ಎಂಬ ಹಾಲಿವುಡ್‌ನ ದೊಡ್ಡ ನಟಿಯ ಹೆಸರು ನಿಮಗೆ ಗೊತ್ತಿರಬಹುದು. ಈಕೆ ಹಲವು ಇಂಗ್ಲಿಷ್ ಫಿಲಂಗಳಲ್ಲಿ ನಟಿಸಿ, ಒಳ್ಳೆಯ ಹೆಸರೂ ಗಳಿಸಿದ್ದಳು. ಆದರೆ, ಈಕೆಯ ತಂದೆ ಒಂದು ವಿಚಿತ್ರ ಸುದ್ದಿಯನ್ನು ನೀಡಿದ. ತನ್ನ ಮಗಳು ಖ್ಯಾತಿಗೆ ಬರುವ ಮುನ್ನ ಮೈ ಮಾರಿ ಹಣ ಮಾಡುತ್ತಿದ್ದಳು ಎಂದ. ಅದು ನಿಜವೋ ಸುಳ್ಳೋ ಎಂಬುದಕ್ಕಿಂತಲೂ, ಹಾಗೆ ಹಲವು ನಟಿಯರು ಮಾಡಿರುವುದು ನಿಜ ಎಂಬುದು ಈ ಉದ್ಯಮದಲ್ಲಿ ಇರುವ ಎಲ್ಲರಿಗೂ ಗೊತ್ತು.

ಹಾಗೇ ಬಾಲಿವುಡ್‌ ಮತ್ತು ಸೌತ್ ಇಂಡಿಯಾದ ಸಿನಿಮಾ ಉದ್ಯಮಗಳು ಸಹ. ಇಲ್ಲೂ ಹಲವು ನಟಿಯರು ಮಾಂಸ ದಂಧೆಯಲ್ಲಿ ಸಿಕ್ಕಿಬಿದ್ದ ಉದಾಹರಣೆಗಳು ಬೇಜಾನ್ ಇವೆ.

ಶ್ವೇತಾ ಬಸು

ಶ್ವೇತಾ ಬಸು ಎಂಬ ಈ ನಟಿ ಬಂಗಾಳಿ ಮೂಲದವಳು. 2002 ರಲ್ಲಿ ಮಕ್ದೀ ಎಂಬ ಫಿಲಂ ಬಂತು. ಅದರಲ್ಲಿ ಲೀಡ್ ರೋಲ್‌ನಲ್ಲಿ ನಟಿಸಿದ ಈಕೆಗೆ ಅದಕ್ಕಾಗಿಯೇ ನ್ಯಾಷನಲ್ ಅವಾರ್ಡ್ ಕೂಡ ಬಂತು. ಮುಂದೆ ಕೆಲವೇ ವರ್ಷಗಳ ಬಳಿಕ, ವೇಶ್ಯಾವಾಟಿಕೆ ದಂಧೆಯಲ್ಲಿ ಸಂಬಂಧಿಸಿ ಈಕೆಯನ್ನು ಪೊಲೀಸರು ಬಂಧಿಸಿದರು. ಆದರೆ ಆಕೆಯನ್ನು ಹೈದರಾಬಾದ್‌ಗೆ ಕರೆಸಿಕೊಂಡ ಏಜೆಂಟ್‌ಗೂ ವೇಶ್ಯಾವಾಟಿಕೆಗೂ ಸಂಬಂಧವಿತ್ತೇ ಹೊರತು ಶ್ವೇತಾ ಬಸುವಿಗೆ ಆ ಬಗ್ಗೆ ಏನೂ ಸಂಬಂಧವಿಲ್ಲ ಎಂದು ಕೋರ್ಟ್‌ನಲ್ಲಿ ಪ್ರೂವ್ ಆಯಿತು. ಶ್ವೇತಾಗೆ ಏನೂ ಸಮಸ್ಯೆಯಾಗಲಿಲ್ಲ.

ಕನ್ನಡದ ಈ ಖ್ಯಾತ ನಟಿಯ ಮೇಲೂ  ಕೇಳಿ ಬಂದಿತ್ತು ಆರೋಪ!

ಶೆರ್ಲಿನ್ ಚೋಪ್ರಾ

ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಟ್ವಿಟ್ಟರ್‌ನಲ್ಲಿ ಕೆಲವು ವರ್ಷಗಳ ಹಿಂದೆ ಒಂದು ಶಾಕಿಂಗ್ ಸತ್ಯವನ್ನು ರಿವೀಲ್ ಮಾಡಿದಳು. ಅದೇನೆಂದರೆ, ತಾನು ಬಾಲಿವುಡ್‌ನಲ್ಲಿ ನಟಿಯಾಗಿ ಖ್ಯಾತಿ ಪಡೆಯುವುದಕ್ಕೂ ಮೊದಲು, ಹಣಕ್ಕಾಗಿ ಮೈ ಮಾರಿಕೊಳ್ಳುತ್ತಿದೆ ಎಂಬುದು. ಅದೂ ಅಂತಿಂಥ ದಂಧೆಯಲ್ಲ, ದೊಡ್ಡ ಮೊತ್ತದ, ಉನ್ನತ ವಲಯದಲ್ಲಿ ನಡೆಯುವ ವೇಶ್ಯಾವಾಟಿಕೆ. ಆದರೆ ಅಂಥದ್ದೆಲ್ಲ ತನಗೆ ಈಗ ಅಗತ್ಯವಿಲ್ಲ ಅಂತಲೂ ಟ್ವೀಟ್‌ ಮಾಡಿಕೊಂಡಿದ್ದಳು. ಈಕೆ ಬಿಗ್‌ ಬಾಸ್, ಎಂಟಿವಿ ಶೋಗಳಲ್ಲೂ ಭಾಗವಹಿಸಿದ್ದಳು.

ಭುವನೇಶ್ವರಿ

ಈಕೆ ತಮಿಳು ನಟಿ. 2009ರಲ್ಲಿ ಚೆನ್ನೈಯಲ್ಲಿ ತನ್ನ ಮನೆಯಿರುವ ಅಪಾರ್ಟ್‌ಮೆಂಟ್‌ನಲ್ಲಿ ಈಕೆ ಸೆಕ್ಸ್ ದಂಧೆ ನಡೆಸುತ್ತಿದ್ದಾಳೆ ಎಂದು ಆರೋಪಿಸಿ ಇಲ್ಲಿಗೆ ರೈಡ್ ಮಾಡಿ, ಆಕೆಯನ್ನು ಬಂಧಿಸಿದ್ದರು. ಇದಕ್ಕೂ ಮೊದಲು ಹಲವು ಸಲ ಆಕೆಯ ಮನೆಗೆ ಇದೇ ಕಾರಣಕ್ಕಾಗಿ ರೈಡ್ ನಡೆದದ್ದೂ ಉಂಟು. ಈಕೆ ಹಲವು ಉದಯೋನ್ಮುಖ ನಟಿಯರನ್ನು ತನ್ನ ಬಳಿ ಇಟ್ಟುಕೊಂಡು ಈ ಉದ್ಯಮ ನಡೆಸುತ್ತಿದ್ದಾಳೆ ಎಂಬುದು ಆರೋಪ. ಆದರೆ ತನ್ನ ಪ್ರಭಾವಿ ರಾಜಕೀಯ ಕನೆಕ್ಷನ್‌ಗಳಿಂದಾಗಿ ಪಾರಾಗುತ್ತಿದ್ದಾಳೆ ಎನ್ನಲಾಗುತ್ತಿದೆ.

ಬೆಳಗಾವಿ; ಹೆಸರಿಗೆ ಮಸಾಜ್ ಪಾರ್ಲರ್..ಒಳಗೆ ?

ಐಶ್ ಅನ್ಸಾರಿ

ತೆಲುಗಿನಲ್ಲಿ ತುಂಬಾ ಮಂದಿ ನಟಿಯರು ಹೀಗೆ ಪೊಲೀಸರ ದೂರುಪಟ್ಟಿಯಲ್ಲಿ ದಾಖಲಾದದ್ದು ಉಂಟು. ಇದರಲ್ಲಿ ಕೆಲವು ಕೋರ್ಟ್‌ನಲ್ಲಿ ಪ್ರೂವ್ ಆಗಿಲ್ಲ. ಇನ್ನು ಹಲವು ಮಂದಿಗೆ ಸಣ್ಣಪುಟ್ಟ ಶಿಕ್ಷೆಯಾಗಿದೆ. 2013ರಲ್ಲಿ ಕಿನ್ನೆರ, ಶರ್ವಾಣಿ, 2010ರಲ್ಲಿ ಸಾಯಿರಾ ಬಾನು ಮತ್ತು ಜ್ಯೋತಿ, 2009 ರಲ್ಲಿ ಸೀಮಾ- ಮುಂತಾದವರು ಅಪಾರ್ಟ್‌ಮೆಂಟ್‌ಗಳಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆದರೆ ಇಂಥ ಕೇಸುಗಳನ್ನು ಪ್ರೂವ್ ಮಾಡುವುದೇ ಕಷ್ಟ. ನಿಲ್ಲಿಸುವುದು ಇನ್ನಷ್ಟು ಕಷ್ಟ. ಒಬ್ಬರು ಈ ದಂಧೆ ನಿಲ್ಲಿಸಿದರೆ ಇನ್ನೊಬ್ಬರು ಶುರು ಹಚ್ಚಿಕೊಳ್ಳುತ್ತಾರೆ. ತೆಲುಗಿನ ಹೈದರಾಬಾದ್ ಹಾಗೂ ತಮಿಳಿನ ಚೆನ್ನೈಗಳು ಇಂಥ ದಂಧೆಗೆ ನಟೋರಿಯಸ್‌ ಆಗಿವೆ.

ಕರ್ನಾಟಕದ ಬೆಂಗಳೂರೂ ಕಡಿಮೆ ಏನಿಲ್ಲ. ಇಲ್ಲಿನ ಕೆಲವು ನಟಿಯರ ಹೆಸರು ಕೂಡ ಮಾಂಸ ದಂಧೆಯಲ್ಲಿ ಕೇಳಿಬಂದದ್ದು ಉಂಟ. ಕೆಲವು ಕಿರುತೆರೆ ನಟಿಯರು, ಹೈ ಲೆವೆಲ್ ಮಂದಿಗೆ ಸೆರಗು ಹಾಸುವ ಹವ್ಯಾಸ ಇಟ್ಟುಕೊಂಡಿದ್ದಾರೆ ಎಂದು ಇಂಡಸ್ಟ್ರಿ ಒಳಗಿನವರೇ ಪಿಸುಗುಟ್ಟಿಕೊಂಡು ಹೇಳುತ್ತಾರೆ. ಡ್ರಗ್ ದಂಧೆ ಇದ್ದ ಹಾಗೆ ಇದರಲ್ಲೂ ನಾನಾ ಕೊಂಡಿಗಳು, ಒಳವ್ಯವಹಾರಗಳು ಇವೆ. ಇದನ್ನೆಲ್ಲ ಬಲ್ಲವನೇ ಬಲ್ಲ. ಪೊಲೀಸರು ಕೆಲವೊಮ್ಮೆ ಮಾತ್ರ ರೈಡ್ ಮಾಡಿ, ಕೆಲವರನ್ನು ಫಿಟ್ ಮಾಡುವುದು, ಕೆಲವರನ್ನು ಬಿಟ್ಟುಕೊಡುವುದು ನಡೆದೇ ಇದೆ.