ಮಸಾಜ್ ಮಾಡಿಸಿಕೊಳ್ಳಬೇಕು ಅಂತಾ ಸ್ಪಾಗೆ ಹೋದ್ರೆ ಬಕ್ರಾ ಆಗೋದು ಪಕ್ಕಾ| ಮಸಾಜ್ ಸೆಂಟರ್‌ನಲ್ಲಿ ಮಾಂಸ ದಂಧೆ ನಡೆಸುತ್ತಿದ್ದ ಗ್ಯಾಂಗ್ ಅಂದರ್| ಸ್ಪಾ ಎಂದು ಅನುಮತಿ ಪಡೆದು ಅಮಾಯಕ ಹೆಣ್ಣು ಮಕ್ಕಳನ್ನ ಅನೈತಿಕ ಚಟುವಟಿಕೆಗೆ ಬಳಸುತ್ತಿದ್ದ ಖದೀಮರು| ಶ್ರೀಮಂತ ಮಕ್ಕಳನ್ನ ಸೆಳೆದು ವಂಚನೆ ಮಾಡಿದ್ದ ಕಿರಾತಕರು|
ಬೆಳಗಾವಿ(ಫೆ.07): ಮಸಾಜ್ ಮತ್ತು ಸ್ಪಾ ಸೆಂಟರ್ ಹೆಸರಿನಲ್ಲಿ ಮಾಂಸ ದಂಧೆ ಅಡ್ಡೆಯ ಮೇಲೆ ದಾಳಿ ಪೊಲೀಸರು ದಾಳಿ ಮಾಡಿದ ಘಟನೆ ಇಂದು(ಭಾನುವಾರ) ನಗರದಲ್ಲಿ ನಡೆದಿದೆ. ನಗರದ ಕಾಂಗ್ರೆಸ್ ರಸ್ತೆಯಲ್ಲಿದ್ದ ನ್ಯೂ ಗೇಟ್ ವೆ ಯುನಿಸೆಕ್ಸ್ ಸ್ಪಾ ಹೆಸರಿನಲ್ಲಿ ಮಸಾಜ್ ಸೆಂಟರ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಸಿಇಎನ್ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಮೂವರು ಯುವತಿಯರ ರಕ್ಷಣೆ, ಇಬ್ಬರು ಖದೀಮರ ಬಂಧಿಸಿಲಾಗಿದೆ. ಬಂಧಿತರನ್ನ ಬೆಳಗಾವಿ ಮೂಲದ ಕೇದಾರಿ ಶಿಂಧೆ, ಪ್ರಕಾಶ್ ಯಳ್ಳೂರ್ಕರ್ ಎಂದು ಗುರುತಿಸಲಾಗಿದೆ. ರಕ್ಷಣೆ ಮಾಡಿದ ಮೂವರು ಯುವತಿಯರನ್ನ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ ಎಂದುನ ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ವಿಕ್ರಮ್ ಆಮಟೆ ಅವರು, ಯುವತಿಯರಿಂದ ಮಸಾಜ್ ಮಾಡಲಾಗುತ್ತೆ ಅಂತ ಈ ಗ್ಯಾಂಗ್ ಆನ್‌ಲೈನ್‌ನಲ್ಲಿ ಪ್ರಚಾರ ಮಾಡುತ್ತಿತ್ತು. ಅಷ್ಟೇ ಅಲ್ಲದೇ ಮಹಿಳೆಯರು ಮಸಾಜ್ ಮಾಡಿಸಿಕೊಂಡ್ರೆ ಶೇ. 50ರಷ್ಟು ರಿಯಾಯಿತಿ ಸಿಗಲಿದೆ ಎಂದು ಖದೀಮರು ಪ್ರಚಾರ ಮಾಡುತ್ತಿದ್ದರು. ವೆಬ್‌ಸೈಟ್ ನೋಡಿ ಸಂಪರ್ಕಿಸಿದವರಿಗೆ ವಾಟ್ಸಪ್‌ನಲ್ಲಿ ಯುವತಿಯರ ಫೋಟೊ ಕಳಿಸಿ ಅಟ್ರ್ಯಾಕ್ಟ್ ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ವೇಶ್ಯಾವಾಟಿಕೆ ಸೋಗಲ್ಲಿ ಹನಿಟ್ರ್ಯಾಪ್: ಚಾಲಾಕಿ ದಂಪತಿ ಅರೆಸ್ಟ್
ಯುವತಿಯರಿಂದ ಬಾಡಿ ಟು ಬಾಡಿ ಮಸಾಜ್ ಮಾಡಿಸ್ತೀವಿ ಎಂದು ಆಸೆ ತೋರಿಸಿ ಶ್ರೀಮಂತ ಯುವಕರಿಗೆ ಮೋಸ ಮಾಡಲಾಗುತ್ತಿತ್ತು. ರಾಜ್ಯ, ಗುಜರಾತ್ ಸೇರಿ ಹೊರ ರಾಜ್ಯದ ಯುವತಿಯರನ್ನಿಟ್ಟುಕೊಂಡು ಮಾಂಸ ದಂಧೆಯನ್ನ ನಡೆಸುತ್ತಿದ್ದರು. ಮಸಾಜ್ ಮಾಡಿಸಿಕೊಂಡ ನಂತರ ಹೆಚ್ಚಿನ ಹಣಕ್ಕೆ ಕಿರಾತಕರು ಡಿಮ್ಯಾಂಡ್ ಮಾಡುತ್ತಿದ್ದರು ಎಂಧು ಮಾಹಿತಿ ನೀಡಿದ್ದಾರೆ.
ಶ್ರೀಮಂತ ಯುವಕರನ್ನು ಹನಿಟ್ರ್ಯಾಪ್ ಮಾಡುತ್ತಿದ್ದ ಶಂಕೆಯಲ್ಲಿ ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಇಎನ್ ಪೊಲೀಸರು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದಾರೆ. ಆನ್‌ಲೈನ್‌ನಲ್ಲಿ ಹೇಗೆ ವಂಚನೆ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆಯನ್ನ ಆರಂಭಿಸಲಾಗಿದೆ. ಸಿಪಿಐ ಬಿ.ಆರ್ ಗಡ್ಡೆಕರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 7, 2021, 11:14 AM IST