ಶ್ರೀದೇವಿಗೆ ಒಂದು ಟ್ರಕ್‌ ತುಂಬಾ ಗುಲಾಬಿ ಹೂ ಕಳಿಸಿದ ಸೂಪರ್‌ ಸ್ಟಾರ್!

ಬಾಲಿವುಡ್ ದಂತಕಥೆ ಶ್ರೀದೇವಿ ಜೊತೆಗೆ ನಟಿಸಲು ಸೂಪರ್‌ಸ್ಟಾರ್‌ಗಳು ಕಾತರಿಸುತ್ತಿದ್ದರು. ಒಬ್ಬ ಸೂಪರ್‌ಸ್ಟಾರ್‌ ಶ್ರೀದೇವಿಗಾಗಿ ಟ್ರಕ್ ತುಂಬಾ ಗುಲಾಬಿ ಹೂಗಳನ್ನು ಕಳುಹಿಸಿದ್ದರು. ಮತ್ತೊಬ್ಬ ಸೂಪರ್‌ ಸ್ಟಾರ್‌ ಶ್ರೀದೇವಿ ಜೊತೆಗೆ ನಟಿಸಲೇ ಭಯಪಡುತ್ತಿದ್ದರು. ಅದೇನು ಇವರ ಕತೆ, ನೋಡೋಣ ಬನ್ನಿ. 

Bollywood superstar who sent truck full of roses to Actress Sridevi bni

ಶ್ರೀದೇವಿ ಒಂದು ಕಾಲದಲ್ಲಿ ಬಾಲಿವುಡ್‌ನ ದಂತಕಥೆ. ಎಂತೆಂಥಾ ಸೂಪರ್‌ ಸ್ಟಾರ್‌ ಹೀರೋಗಳೂ ಈಕೆಯ ಜೊತೆಗೆ ಕೆಲಸ ಮಾಡಲು ಕಾತರಿಸಿ ಕಾಯುತ್ತಿದ್ದರು ಎಂಬುದು ಸುಳ್ಳಲ್ಲ. ಅವರಲ್ಲಿ ಒಬ್ಬ ಸೂಪರ್‌ಸ್ಟಾರ್‌ ಅಂತೂ ಒಂದು ಟ್ರಕ್ ತುಂಬಾ ಗುಲಾಬಿ ಹೂಗಳನ್ನು ಶ್ರೀದೇವಿಗೆ ಕಳಿಸಿದ್ದರಂತೆ! 

ಹೌದು, ಸೂಪರ್‌ಸ್ಟಾರ್‌ ಅಮಿತಾಭ್ ಬಚ್ಚನ್ ಜೊತೆ ಒಂದು ಫಿಲಂನಲ್ಲಿ ನಟಿಸಲು ಶ್ರೀದೇವಿ ನಿರಾಕರಿಸಿದ್ದರು. ಆದರೂ ಶ್ರೀದೇವಿಯನ್ನು ಓಲೈಸಲು ಬಚ್ಚನ್‌ ವಿಶಿಷ್ಟ ರೀತಿಯಲ್ಲಿ ಪ್ರಯತ್ನಿಸಿದ್ದರು. ಶ್ರೀದೇವಿ ಆಗ ಬಾಲಿವುಡ್‌ನ ಬಲು ಬೇಡಿಕೆಯ ಅಪ್ರತಿಮ ನಟಿಯರಲ್ಲಿ ಒಬ್ಬರು. ತನ್ನ ಅಭಿನಯದಿಂದ, ಕಣ್ಣೋಟದಿಂದ ಪ್ರೇಕ್ಷಕರನ್ನು ಹೇಗೆ ಆಕರ್ಷಿಸಬೇಕು ಎಂದು ತಿಳಿದಿದ್ದವಳು. 

ಶ್ರೀದೇವಿ ಮತ್ತು ಬಚ್ಚನ್‌ ಒಟ್ಟು ಐದು ಫಿಲಂಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಮೊದಲ ಬಾರಿಗೆ ಶ್ರೀದೇವಿ ಮತ್ತು ಬಿಗ್ ಬಿ ತೆರೆ ಹಂಚಿಕೊಂಡಿದ್ದು ಇಂಕ್ವಿಲಾಬ್ ಚಿತ್ರದಲ್ಲಿ. ಇದರ ನಂತರ, ಅವರಿಬ್ಬರೂ ಆಖ್ರಿ ರಾಸ್ತಾದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಎರಡೂ ಚಿತ್ರಗಳು ಹಿಟ್ ಆದವು. ಬಿಗ್ ಬಿ, ಶ್ರೀದೇವಿಯೊಂದಿಗೆ ಮತ್ತೊಂದು ಸಿನಿಮಾದಲ್ಲಿ ನಟಿಸಲು ಬಯಸಿದ್ದರು. ಆದರೆ, ಶ್ರೀದೇವಿ ಆ ಚಿತ್ರದ ಭಾಗವಾಗಲು ಇಷ್ಟಪಡಲಿಲ್ಲ. 

ಅನೇಕ ನಟಿಯರು ಅಮಿತಾಭ್‌ ಬಚ್ಚನ್ ಅವರೊಂದಿಗೆ ಕೆಲಸ ಮಾಡುವ ಕನಸು ಕಂಡಿದ್ದರೆ, ಶ್ರೀದೇವಿಗೆ ವಿಭಿನ್ನ ಆದ್ಯತೆಗಳಿದ್ದವು. ಅವರು ಯಾವಾಗಲೂ ಮಹಿಳೆಯರನ್ನು ಹೈಲೈಟ್ ಮಾಡುವ ಮತ್ತು ಅವರನ್ನು ಗಮನದಲ್ಲಿಟ್ಟುಕೊಳ್ಳುವ ಚಲನಚಿತ್ರಗಳ ಭಾಗವಾಗಲು ಬಯಸಿದ್ದರು. ಅಂದರೆ ತನ್ನ ಪಾತ್ರಕ್ಕೆ ಹೆಚ್ಚಿನ ಆದ್ಯತೆ ಇರಬೇಕು ಎಂಬುದು ಆಕೆಯ ಬಯಕೆ ಆಗಿತ್ತು. ಆದ್ದರಿಂದ, ಅಮಿತಾಭ್ ಅವರು ಶ್ರೀದೇವಿಯನ್ನು ಖುದಾ ಗವಾಹ್‌ನ ಭಾಗವಾಗಬೇಕೆಂದು ಬಯಸಿದಾಗ, ಅವಳ ಮನವೊಲಿಸಲು ವಿಶಿಷ್ಟವಾದ ಮಾರ್ಗವನ್ನೇ ಕಂಡುಕೊಳ್ಳಬೇಕಾಯಿತು.

ಅಮಿತಾಭ್ ಬಚ್ಚನ್ ಮತ್ತು ಶ್ರೀದೇವಿ ಕುರಿತಾದ ಈ ಕತೆ ʼಶ್ರೀದೇವಿ: ದಿ ಎಟರ್ನಲ್ ಸ್ಕ್ರೀನ್ ಗಾಡೆಸ್ʼನಲ್ಲಿ ಕಾಣಿಸಿಕೊಂಡಿದೆ. ಶ್ರೀದೇವಿ ಅಭಿನಯದ ಈ ಚಿತ್ರದ ಹಾಡುಗಳನ್ನು ದಿವಂಗತ ಸರೋಜ್ ಖಾನ್ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. ಅವರು ಸಂದರ್ಶನವೊಂದರಲ್ಲಿ ಈ ಸಂಪೂರ್ಣ ಕಥೆಯನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದನ್ನು ಹಂಚಿಕೊಂಡಿದ್ದಾರೆ.

ಶ್ರೀದೇವಿಯನ್ನು ಒಲಿಸಿಕೊಳ್ಳಲು ಅಮಿತಾಭ್ ಬಚ್ಚನ್ ಅವಳಿಗೆ ಗುಲಾಬಿ ಹೂಗಳಿಂದ ತುಂಬಿದ ಟ್ರಕ್ ಅನ್ನೇ ಕಳುಹಿಸಿದರು! ಅದು ಎಷ್ಟಿತ್ತು ಎಂದರೆ ಅವಳ ಸುತ್ತಲೂ ಹೂವುಗಳನ್ನು ಚೆಲ್ಲಿ ಮುಚ್ಚಿಹಾಕುವಷ್ಟಿತ್ತು. ಆದರೂ ಶ್ರೀದೇವಿ ಈ ಪಾತ್ರ ಮಾಡಲು ಮನಸ್ಸು ಮಾಡಲಿಲ್ಲ. ಆ ಚಿತ್ರದಲ್ಲಿ ತನ್ನ ಪಾತ್ರಕ್ಕೆ ಸಾಕಷ್ಟು ಆದ್ಯತೆಯಿಲ್ಲ ಎಂದು ಆಕೆ ಭಾವಿಸಿದ್ದಳು.

ಕೊನೆಗೂ ಶ್ರೀದೇವಿ ಬಚ್ಚನ್ ಜೊತೆಗೆ ನಟಿಸಲು ಕೆಲಸ ಮಾಡಲು ಒಪ್ಪಿಕೊಂಡಳು. ಆದರೆ ಒಂದು ಶರತ್ತು ಹಾಕಿದಳು. ಬಚ್ಚನ್‌ನ ಪತ್ನಿ ಮತ್ತು ಮಗಳ ಎರಡೂ ಪಾತ್ರಗಳನ್ನು ನೀಡಿದರೆ ಮಾತ್ರ ತಾನು ಚಿತ್ರದ ಭಾಗವಾಗುತ್ತೇನೆ ಎಂದು ಆಕೆ ನಿರ್ಮಾಪಕರಿಗೆ ಶರತ್ತು ಹಾಕಿದಳು. ಚಿತ್ರ ನಿರ್ಮಾಪಕರಾದ ಮನೋಜ್ ದೇಸಾಯಿ ಮತ್ತು ಮುಕುಲ್ ಆನಂದ್ ಅವರ ಷರತ್ತನ್ನು ಒಪ್ಪಿಕೊಂಡರು. ಹಾಗೇ ಆಯಿತು. ಚಿತ್ರ ಬಿಡುಗಡೆಯಾದ ನಂತರ, ಖುದಾ ಗವಾ ಶ್ರೀದೇವಿ ಮತ್ತು ಅಮಿತಾಭ್ ಬಚ್ಚನ್ ಇಬ್ಬರಿಗೂ ಭಾರಿ ಯಶಸ್ಸನ್ನು ತಂದುಕೊಟ್ಟಿತು. ಅವರ ಜೋಡಿಯನ್ನು ಬಾಲಿವುಡ್‌ನ ಅತ್ಯಂತ ಅಪ್ರತಿಮ ಸಹಯೋಗಗಳಲ್ಲಿ ಒಂದಾಗಿ ದೃಢಪಡಿಸಿತು. 

ದೇಹಕ್ಕೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿದಾಗ ಆಗಿದ್ದೇನು? ಪಡಬಾರದ ಪಾಡಿನ ಬಗ್ಗೆ ಶೆರ್ಲಿನ್​ ಚೋಪ್ರಾ ಶಾಕಿಂಗ್​ ವಿಷ್ಯ ರಿವೀಲ್​

ಶ್ರೀದೇವಿ ಜೊತೆಗೆ ನಟಿಸಲು ಆತಂಕಪಡುತ್ತಿದ್ದ ಸ್ಟಾರ್‌ ನಟ ಎಂದರೆ ಸಲ್ಮಾನ್‌ ಖಾನ್.‌ ಈತ ಶ್ರೀದೇವಿ ಎಂದರೆ ಭಯಪಡುತ್ತಿದ್ದ. ಯಾಕೆಂದರೆ ಆಕೆಯ ಸ್ಕ್ರೀನ್‌ ಪ್ರೆಸೆನ್ಸ್‌ ಜೊತೆಗಿದ್ದ ಯಾವುದೇ ನಟನನ್ನು ನುಂಗಿಹಾಕುತ್ತಿತ್ತು. ಜನ ಆಕೆಯನ್ನು ನೋಡಲು ಥಿಯೇಟರ್‌ಗೆ ಬರುತ್ತಿದ್ದರು. ಆಕೆ ಖ್ಯಾತಿಯ ಉತ್ತುಂಗದಲ್ಲಿದ್ದಾಗ ಸಲ್ಮಾನ್‌ ಖಾನ್‌ ಇನ್ನೂ ಬಾಲಿವುಡ್‌ಗೆ ಹೊಸಬ. ಆದರ ಇಬ್ಬರೂ ಎರಡು ಫಿಲಂಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಅವು ಚಂದ್ರಮುಖಿ ಮತ್ತು ಚಾಂದ್‌ ಕಾ ಟುಕಡಾ. ಎರಡೂ ಫ್ಲಾಪ್‌ ಆಗಿದ್ದವು. 

ಬೇರೆ ಹೆಣ್ಣಿಗೆ ಆಕರ್ಷಿತರಾಗಿದ್ದಾರಾ ಬೋನಿ ಕಪೂರ್? ಹೆಂಡ್ತಿ ಮೇಲೆ ಪ್ರೀತಿ ಇದೆ ಅಂದಿದ್ದೇಕೆ?
 

Latest Videos
Follow Us:
Download App:
  • android
  • ios