ಮತದಾನ ಮಾಡಿ ಅಕ್ಷಯ್ ಕುಮಾರ್ ತಮ್ಮ ಕಾರಿನತ್ತ ಹೆಜ್ಜೆ ಹಾಕುತ್ತಿದ್ದಾಗ ಬಾಡಿಗಾರ್ಡ್‌ಗಳ ಮಧ್ಯೆ ಬಾಲಕಿಯೊಬ್ಬಳು ಅಕ್ಷಯ್ ಕುಮಾರ್ ಅವರ ಬಳಿ ಓಡಿ ಬಂದಳು. ಆ ಬಾಲೆಯ ಕಣ್ಣಿನಲ್ಲಿ ಸ್ಟಾರ್ ಒಬ್ಬರನ್ನು ಹತ್ತಿರದಿಂದ ನೋಡಿದ ಸಂಭ್ರಮ ಇರಲಿಲ್ಲ. ಸೆಲ್ಫೀ ಅಥವಾ ಆಟೋಗ್ರಾಫ್‌ ಕೂಡ ಕೇಳಲಿಲ್ಲ. ಮತ್ತೆ?

ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) 2026ರ ಮುಂಬೈನ ಬಿಎಂಸಿ ಚುನಾವಣೆಯ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಮತದಾನ ಮಾಡಲು ಬಂದಿದ್ದರು. ಅಕ್ಷಯ್ ಕುಮಾರ್ ಬರುವ ಸುದ್ದಿ ಹರಡಿದ್ದ ಕಾರಣಕ್ಕೆ ಅಲ್ಲಿ ಆಗಲೇ ಜನಸಮೂಹ ಸೇರಿಕೊಂಡಿತ್ತು. ಜೊತೆಗೆ ಸಾಕಷ್ಟು ಕ್ಯಾಮರಾಗಳು ಕೂಡ ಜಮಾಯಿಸಿದ್ದವು. ನಟ ಅಕ್ಷಯ್ ಕುಮಾರ್ ಅವರಿಗೆ ಬಹಳಷ್ಟು ಅಭಿಮಾನಿಗಳು ಇರುವ ಹಿನ್ನೆಲೆಯಲ್ಲಿ, ಅಲ್ಲಿ ಬಂದಿದ್ದ ಬಾಲಕಿಯೊಬ್ಬಳ ಆಕ್ರಂದನ ಅಕ್ಷಯ್ ಕುಮಾ‌ರ್ ಅವರ ಗಮನಸೆಳೆಯಿತು. ಅವರು ನಿಂತೊಡನೆ ಆ ಬಾಲಕಿ ಬಂದು ತನ್ನ ಸಮಸ್ಯೆ ಹೇಳಿಕೊಂಡಳು. +

ಮತದಾನ ಮಾಡಿ ಅಕ್ಷಯ್ ಕುಮಾರ್ ತಮ್ಮ ಕಾರಿನತ್ತ ಹೆಜ್ಜೆ ಹಾಕುತ್ತಿದ್ದಾಗ ಬಾಡಿಗಾರ್ಡ್‌ಗಳ ಮಧ್ಯೆ ಬಾಲಕಿಯೊಬ್ಬಳು ಅಕ್ಷಯ್ ಕುಮಾರ್ ಅವರ ಬಳಿ ಓಡಿ ಬಂದಳು. ಆ ಬಾಲೆಯ ಕಣ್ಣಿನಲ್ಲಿ ಸ್ಟಾರ್ ಒಬ್ಬರನ್ನು ಹತ್ತಿರದಿಂದ ನೋಡಿದ ಸಂಭ್ರಮ ಇರಲಿಲ್ಲ. ಸೆಲ್ಫೀ ಅಥವಾ ಆಟೋಗ್ರಾಫ್‌ ತೆಗೆದುಕೊಳ್ಳಲೂ ಆಕೆ ಅಲ್ಲಿ ಬಂದಿರಲಿಲ್ಲ. ಬದಲಿಗೆ ಆ ಬಾಲಕಿಯ ಕಣ್ಣಲ್ಲಿ ನೋವಿತ್ತು, ಹತಾಶೆ ಇತ್ತು.

ಬಾಲಕಿ ಬಳಿ ನಿಂತ ಅಕ್ಷಯ್ ಕುಮಾರ್

ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾ‌ರ್ ಬಳಿ ಬಂದ ಆ ಬಾಲಕಿ ಕೈಯಲ್ಲಿದ್ದ ಪೇಪರ್‌ಗಳನ್ನು ತೋರಿಸುತ್ತಾ 'ನನ್ನಪ್ಪ ತುಂಬಾ ಸಾಲದಲ್ಲಿದ್ದಾರೆ, ದಯವಿಟ್ಟು ಅವರನ್ನು ಬದುಕಿಸಿ, ಸಹಾಯ ಮಾಡಿ.. ಇಲ್ಲ ಅಂದರೆ ಅವರು ಸತ್ತುಹೋಗುತ್ತಾರೆ' ಎಂದು ಅಂಗಲಾಚಿದಳು. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಯಾವುದೇ ಸ್ಟಾರ್‌ಗಳು ಮುಜುಗರಕ್ಕೀಡಾಗುತ್ತಾರೆ, ತಕ್ಷಣ ಅಲ್ಲಿಂದ ಹೊರಟುಹೋಗುತ್ತಾರೆ.

ಬಾಲಕಿಗೆ ಅಕ್ಷಯ್ ಕುಮಾರ್ ಭರವಸೆ

ಆದರೆ, ಅಕ್ಷಯ್ ಕುಮಾರ್ ಮಾತ್ರ ಹಾಗೆ ಮಾಡದೇ ಬಾಲಕಿ ಬಳಿ ನಿಂತರು. ಸಮಾಧಾನದಿಂದ ಆ ಬಾಲಕಿಯ ಮಾತುಗಳನ್ನು ಕೇಳಿದರು. ತಮ್ಮ ಅಂಗರಕ್ಷಕರಿಗೆ ಆ ಬಾಲಕಿಯ ಫೋನ್ ನಂಬರ್ ಪಡೆಯುವಂತೆ ಹೇಳಿದರು. ಆಕೆಗೆ ಸಹಾಯ ಮಾಡುವ ಭರವಸೆಯನ್ನು ನೀಡಿದರು. ಆಗ ಆ ಬಾಲಕಿ ಅಕ್ಷಯ್ ಕುಮಾರ್ ಕಾಲಿಗೆ ಬೀಳಲು ಮುಂದಾದಾಗ ತಡೆದ ಅಕ್ಷಯ್ ಕುಮಾ‌ರ್ 'ಮಗಳೇ, ಈ ರೀತಿಯೆಲ್ಲ ಮಾಡಬೇಡ..' ಎಂದು ಹೇಳಿ ತಮ್ಮ ಕಾರನ್ನು ಹತ್ತಿದರು. ಹತ್ತುವ ಮುನ್ನ ಫೋನ್ ನಂಬರ್ ಪಡೆಯುವಂತೆ ಬಾಡಿಗಾರ್ಡ್‌ಗೆ ಮತ್ತೊಮ್ಮೆ ಸೂಚನೆಯನ್ನು ಸಹ ನೀಡಿದರು.

ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಆ ಬಾಲಕಿಯ ಕಷ್ಟಕ್ಕೆ ಅಕ್ಷಯ್ ಕುಮಾರ್ ಸ್ಪಂದಿಸಿದ ರೀತಿಗೆ ತುಂಬಾ ಜನರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಕೇವಲ ಸಿನಿಮಾದಲ್ಲಿ ಮಾತ್ರ ಅಲ್ಲ ನಿಜ ಜೀವನದಲ್ಲಿ ಕೂಡ ನಟ ಅಕ್ಷಯ್ ಕುಮಾರ್ ಹೀರೋ ಎನ್ನುತ್ತಿದ್ದಾರೆ. ಯಾರಾದರೂ ಕಷ್ಟ ಹೇಳಿಕೊಂಡರೆ ನಿರ್ಲಕ್ಷ ಮಾಡುವ ಈ ಕಾಲದಲ್ಲಿ ಅಷ್ಟು ದೊಡ್ಡ ಸ್ಆರ್ ನಟರಾದರೂ ಆಕೆಯ ಕಷ್ಟ ಕೇಳಲು ಸಾಮಾನ್ಯ ಜನರಂತೆ ರಸ್ತೆಯ ಮೇಲೆ ನೀವು ನಿಂತಿದ್ದೇ ದೊಡ್ಡ ವಿಷಯ. ಅದರಲ್ಲೂ ಆಕೆಯ ಮಾತುಗಳನ್ನು ಪೂರ್ತಿಯಾಗಿ ಕೇಳಿ, ಆಕೆಗೆ ಸಹಾಯದ ಭರವಸೆ ನೀಡಿ ಹೋಗಿದ್ದು ಮಹಾದೊಡ್ಡ ಸಂಗತಿ' ಎನ್ನುತ್ತಿದ್ದಾರೆ ಹಲವರು.