Asianet Suvarna News Asianet Suvarna News

KK Last Flim Song ಶೆರ್ದಿಲ್ ಚಿತ್ರಕ್ಕಾಗಿ ಕೆಕೆ ಹಾಡಿದ ಕೊನೆಯ ಸಾಂಗ್ ದೂಪ್ ಪಾನಿ ಬಿಡುಗಡೆ!

  • ಕೋಲ್ಕತಾ ಕಾರ್ಯಕ್ರಮ ನೀಡಿದ ಬೆನ್ನಲ್ಲೇ ನಿಧನರಾದ ಕೆಕೆ
  • ಬಾಲಿವುಡ್ ಗಾಯಕ ಕೆಕೆ ಹಾಡಿದ ಕೊನೆಯ ಸಿನಿಮಾ ಹಾಡು 
  • ಹೃದಯಾಘಾತದಿಂದ ನಿಧನರಾದ ಕೆಕೆ
     
Bollywood singer KK last recorded song from film SHERDIL THE PILIBHIT SAGA released ckm
Author
Bengaluru, First Published Jun 6, 2022, 11:40 PM IST | Last Updated Jun 6, 2022, 11:40 PM IST

ಮುಂಬೈ(ಜೂ.06): ಬಾಲಿವುಡ್ ಗಾಯಕ ಕೃಷ್ಣಕುಮಾರ್ ಕುನ್ನತ್(ಕೆಕೆ) ಹಾಡಿದ ಕೊನೆಯ ಸಿನಿಮಾ ಹಾಡು ಇಂದು ಬಿಡುಗಡೆಯಾಗಿದೆ. ಕೋಲ್ಕತಾದಲ್ಲಿ ಸಂಗೀತ ಕಾರ್ಯಕ್ರಮದ ನಡುವೆ ಹೃದಯಾಘತದಿಂದ ನಿಧನರಾದ ಕೆಕೆ, ಕೊನೆಯದಾಗಿ ಶೆರ್ದಿಲ್ ಚಿತ್ರಕ್ಕಾಗಿ ಹಾಡಿದ ದೂಪ್ ಪಾನಿ ಸಾಂಗ್ ರಿಲೀಸ್ ಆಗಿದೆ.

ಗುಲ್ಜಾರ್ ಸಾಬ್ ಹಾಗೂ ಶಂತನು ಮೋಯಿತ್ರ ಕಾಂಬಿನೇಷನ್‌ನಲ್ಲಿ ಮೂಡಿದ ಬಂದ ಈ ಹಾಡಿಗೆ ಕೆಕೆ ಧ್ವನಿ ನೀಡಿದ್ದಾರೆ. ಟಿ ಸೀರಿಸ್ ಹಾಗೂ ರಿಲಯನ್ಸ್ ಎಂಟರ್ಟೈನ್ಮೆಂಟ್ ನಿರ್ಮಾಣ ಮಾಡಿರುವ ಈ ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಲಾಗಿದೆ. ಈ ಶೆರ್ದಿಲ್ ಚಿತ್ರ ಜೂನ್ 24ಕ್ಕೆ ಬಿಡುಗಡೆಯಾಗಲಿದೆ.

KK ಪತ್ನಿ ಮತ್ತು ಮಕ್ಕಳ ಜೊತೆ ಮಾತನಾಡಲು ಧೈರ್ಯವಿಲ್ಲ: ಜಾವೇದ್ ಅಲಿ

ಪ್ಪಕೃತಿಯನ್ನು ತಾಯಿಗೆ ಹೋಲಿಕೆ ಮಾಡಿ ಈ ತಾಯಿಯನ್ನು ಉಳಿಸಲು ಮನವಿ ಮಾಡುವ ಈ ಮಹತ್ವದ ಹಾಡು ಬಿಡುಗಡೆಯಾ ಕೆಲವೇ ಕ್ಷಣಗಳಲ್ಲಿ ಭಾರಿ ಮೆಚ್ಚುಗೆ ಗಳಿಸಿದೆ. ಅತ್ಯಂತ ಸುಮಧುರವಾಗಿ ಹಾಡಿರುವ ಈ ಹಾಡು ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.

ಶ್ರೀಜಿತ್ ಮುಖರ್ಜಿ ನಿರ್ದೇಶನದ ಈ ಶೆರ್ದಿಲ್ ಚಿತ್ರ ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ನಾನು ಗುಲ್ಜಾರ್ ಸಾಬ್ ಅವರ ಸಾಹಿತ್ಯವನ್ನು ಹಾಡುಗಳನ್ನು ಕೇಳಿ ಬೆಳೆದಿದ್ದೇನೆ. ಇತ್ತ ಕೆಕೆ ಅವರ ಸುಮಧುರ ಕಂಠದಿಂದ ಮೂಡಿ ಬಂದ ಹಾಡುಗಳನ್ನು ಗುನುಗುತ್ತಾ ಕಾಲ ಕಳೆದಿದ್ದೇನೆ. ಇವರಿಬ್ಬರು ಈ ಚಿತ್ರದಲ್ಲಿ ಒಂದಾಗಿ ಕೆಲಸ ಮಾಡಿದ್ದಾರೆ. ಇದು ಅತೀವ ಸಂತಸವಿದೆ. ಆದರೆ ಇದೀಗ ಕೆಕೆ ನಮ್ಮೊಂದಿಗಿಲ್ಲ ಅನ್ನೋ ನೋವು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹಾಡು ಬಿಡುಗಡೆ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.

ಬಂಗಾಳದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಗಾಯಕ ಕೆಕೆ ಅವರ ಕೊನೆಯ ಕ್ಷಣಗಳು ವಿಡಿಯೋಗಳಲ್ಲಿ ದಾಖಲಾಗಿವೆ. ಹೃದಯಾಘಾತ ಆದವರನ್ನು ಸಾಮಾನ್ಯವಾಗಿ, ಹೃದಯಕ್ಕೆ ತೊಂದರೆಯಾಗದಂತೆ ಸ್ಟೆ್ರಚರ್‌ನಲ್ಲಿ ಮಲಗಿಸಿ ಕರೆದೊಯ್ಯುವುದು ಸಾಮಾನ್ಯ. ಆದರೆ ನಡೆಸಿಕೊಂಡು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು ದೃಶ್ಯದಲ್ಲಿ ಕಂಡುಬರುತ್ತದೆ.

KK ಪೋಸ್ಟ್ ಮಾರ್ಟಂ ವರದಿ: ಸಿಪಿಆರ್ ನೀಡಿದ್ದರೆ ಅವರ ಪ್ರಾಣ ಉಳಿಯುತ್ತಿತ್ತು!

ಹೀಗಾಗಿ ಇಷ್ಟುದೊಡ್ಡ ಕಾರ್ಯಕ್ರಮ ಆಯೋಜಿಸಿದ್ದರೂ ಇಡೀ ಸಭಾಂಗಣದಲ್ಲಿ ವೈದ್ಯಕೀಯ ಸೌಲಭ್ಯ ಇಲ್ಲದ ಕಾರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಡೆಸಿಕೊಂಡು ಕರೆದೊಯ್ದರೆ ಎದೆ ಮೇಲೆ ಒತ್ತಡ ಬೀಳುತ್ತದೆ ಎಂಬುದು ತಜ್ಞರ ವಾದ.

ಈ ನಡುವೆ, ವಿಡಿಯೋದಲ್ಲಿ ಕೆಕೆ ಅವರು ಎದೆನೋವಿನಿಂದ ಒದ್ದಾಡುತ್ತಿರುವ ದೃಶ್ಯ ದಾಖಲಾಗಿದೆ. ಇದೇ ಸ್ಥಿತಿಯಲ್ಲಿ ಅವರು ಅವರ ಹೋಟೆಲ್‌ಗೆ ಹಿಂದಿರುಗಿದ್ದಾರೆ. ಇಲ್ಲಿಂದ ಆಸ್ಪತ್ರೆಗೆ ಕರೆದೊಯ್ಯುವ ದಾರಿಯ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಕೆಕೆ ವಿಪರೀತವಾಗಿ ಬೆವರುತ್ತಿರುವುದು ದಾಖಲಾಗಿದೆ. ಕುಸಿದು ಬಿದ್ದ ಅವರನ್ನು ಕರೆದೊಯ್ಯಲು ಸ್ಟೆ್ರಚರ್‌ ಸಹ ಇಲ್ಲದೇ ಅವರನ್ನು ನಡೆಸಿಕೊಂಡು ಹೋಗಿದ್ದಾರೆ..

ಕೆಕೆ ಅವರ ಸಾವಿನ ಕುರಿತಾಗಿ ನಾವು ತನಿಖೆ ಆರಂಭಿಸಿದ್ದೇವೆ ಮತ್ತು ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ. ಹೋಟೆಲ್‌ ಆಡಳಿತದೊಂದಿಗೆ ಮಾತನಾಡಿದ್ದೇವೆ. ಸಿಸಿಟೀವಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕೆಕೆ ಅವರ ಸಾವು ಹೃದಯಾಘಾತ ಎಂದು ಮರಣೋತ್ತರ ವರದಿಯಿಂದ ತಿಳಿದುಬಂದಿದೆ. ಆದರೂ ಮುಖ ಹಾಗೂ ತಲೆ ಮೇಲಿನ ಗಾಯಗಳು ಶಂಕೆಗೆ ನಾಂದಿ ಹಾಡಿವೆ.
 

Latest Videos
Follow Us:
Download App:
  • android
  • ios