KK ಪೋಸ್ಟ್ ಮಾರ್ಟಂ ವರದಿ: ಸಿಪಿಆರ್ ನೀಡಿದ್ದರೆ ಅವರ ಪ್ರಾಣ ಉಳಿಯುತ್ತಿತ್ತು!
ಬಾಲಿವುಡ್ ಗಾಯಕ ಕೆಕೆ (Krishnakumar Kunnath) ಶಾಶ್ವತವಾಗಿ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ಅವರ ಮರಣೋತ್ತರ ಪರೀಕ್ಷೆಯನ್ನು ಗುರುವಾರ ಅಂದರೆ ಜೂನ್ 1 ರಂದು ಮಾಡಲಾಯಿತು. ಇದರಲ್ಲಿ ದೊಡ್ಡ ವಿಷಯವೊಂದು ಬಹಿರಂಗಪಡಿಸಲಾಗಿದೆ. ಅವರ ಸಾವಿಗೆ ಕಾರಣ ಹೃದಯಾಘಾತ (Cardiac Arrest). ಇದರೊಂದಿಗೆ ಸಮಯಕ್ಕೆ ಸರಿಯಾಗಿ ಸಿಪಿಆರ್ (CPR) ನೀಡಿದ್ದರೆ ಅವರ ಪ್ರಾಣ ಉಳಿಸಬಹುದಿತ್ತು ಎಂದೂ ಹೇಳಲಾಗಿದೆ.
ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಉರ್ಫ್ ಕೆಕೆ ನಮ್ಮೊಂದಿಗಿಲ್ಲ. ಅವರ ಅಂತ್ಯಕ್ರಿಯೆ ಜೂನ್ 2 ರಂದು ನಡೆದಿದೆ. ಇದೇ ವೇಳೆ ಸಕಾಲಕ್ಕೆ ಸಿಪಿಆರ್ ನೀಡಿದ್ದರೆ ಅವರ ಪ್ರಾಣ ಉಳಿಸಬಹುದಿತ್ತು ಎಂಬ ದೊಡ್ಡ ಸುದ್ದಿ ಹೊರಬಿದ್ದಿದೆ.
ಇದರೊಂದಿಗೆ ಅವರು ಆ್ಯಂಟಿಸಿಡ್ ಸೇವಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅವರ ಎಡ ಭಾಗದಲ್ಲಿರುವ ಮುಖ್ಯ ಪರಿಧಮನಿಯಲ್ಲಿ (coronary artery) ದೊಡ್ಡ ಬ್ಲಾಕೇಜ್ ಮತ್ತು ಇತರ ಅಪಧಮನಿಗಳಲ್ಲಿ (arteries) ಸಣ್ಣ ಬ್ಲಾಕೇಜ್ ಇದ್ದವು ಎಂದು ವೈದ್ಯರು ಹೇಳಿದರು.
ಕಾರ್ಯಕ್ರಮದ ವೇಳೆ ಅತಿಯಾದ ಉತ್ಸಾಹದಿಂದಾಗಿ ರಕ್ತದ ಹರಿವು ನಿಂತು ಹೋಯಿತು, ಇದರಿಂದಾಗಿ ಹೃದಯ ಬಡಿತ ನಿಂತು ಹೋಯಿತು. ಅದರಿಂದಾಗಿ ಆತ ಪ್ರಾಣ ಕಳೆದುಕೊಂಡ. ಮೂರ್ಛೆ ಬಿದ್ದ ಕೂಡಲೇ ಯಾರಾದರೂ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ನೀಡಿದ್ದರೆ ಸಿಂಗರ್ ಅವರನ್ನು ಉಳಿಸಬಹುದಿತ್ತು ಎಂದು ವೈದ್ಯರು ಹೇಳಿದ್ದಾರೆ.
ಗಾಯಕನಿಗೆ ದೀರ್ಘ ಕಾಲದಿಂದ ಹೃದಯ ಸಂಬಂಧಿ ಸಮಸ್ಯೆಗಳಿವೆ ಎಂದು ಅವರು ಹೇಳಿದರು. ಯಾರು ತಕ್ಷಣ ಚಿಕಿತ್ಸೆ ನಿಡಲಿಲ್ಲ. ಗಾಯಕನಿಗೆ ಎಡ ಮುಖ್ಯ ಪರಿಧಮನಿಯಲ್ಲಿ 80 ಪ್ರತಿಶತದಷ್ಟು ತಡೆ ಇತ್ತು. ಇತರ ಅಪಧಮನಿಗಳಲ್ಲಿ ಸಣ್ಣ ಹೆಪ್ಪುಗಟ್ಟುವಿಕೆ ಇತ್ತು. ಇಂತಹ ಪರಿಸ್ಥಿತಿಯಲ್ಲಿ ಸಿಪಿಆರ್ ನೀಡಿದ್ದರೆ ಅವರ ಪ್ರಾಣ ಉಳಿಯುತ್ತಿತ್ತು.
ವೈದ್ಯರ ಪ್ರಕಾರ, ಮಂಗಳವಾರ (ಮೇ 31) ವೇದಿಕೆಯ ಪ್ರದರ್ಶನದ ಸಮಯದಲ್ಲಿ, ಗಾಯಕರು ವೇದಿಕೆಯಲ್ಲಿ ವೇಗವಾಗಿ ತಿರುಗುತ್ತಿದ್ದರು ಮತ್ತು ಅನೇಕ ಬಾರಿ ಅವರು ಗುಂಪಿನ ಮಧ್ಯೆ ನೃತ್ಯ ಮಾಡಿದರು. ಇದು ದೊಡ್ಡ ಒತ್ತಡ ಉಂಟು ಮಾಡಿತು. ಇದರಿಂದಾಗಿ ರಕ್ತದ ಹರಿವು ನಿಂತು ಹೋಯಿತು. ಇದರಿಂದಾಗಿ ಹೃದಯ ಬಡಿತ ನಿಂತುಹೋಯಿತು. ಇದರಿಂದಾಗಿ ಗಾಯಕ ಮೂರ್ಛೆ ಹೋದರು ಮತ್ತು ಅವರು ಹೃದಯ ಸ್ತಂಭನಕ್ಕೆ ಒಳಗಾದರು. ತಕ್ಷಣವೇ ಸಿಪಿಆರ್ ನೀಡಿದ್ದರೆ ಅವರನ್ನು ಕೂಡಲೇ ಉಳಿಸಬಹುದಿತ್ತು.
ಸಿಪಿಆರ್ ತುರ್ತು ಸಂದರ್ಭದಲ್ಲಿ ನೀಡಲಾಗುವ ವೈದ್ಯಕೀಯ ವಿಧಾನವಾಗಿದೆ. ಸಿಪಿಆರ್ ಎಂದರೆ ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್, ಇದು ಹೃದಯಾಘಾತದ ಸಮಯದಲ್ಲಿ ತಕ್ಷಣವೇ ನೀಡಲಾಗುತ್ತದೆ. ಸಿಪಿಆರ್ ಎಂದರೆ ಹೃದಯವು ನಿಂತಾಗ ಹೃದಯವನ್ನು ಮರು ಪ್ರಾರಂಭಿಸುವ ಪ್ರಕ್ರಿಯೆ. ಆದ್ದರಿಂದ ಆಮ್ಲಜನಕದ ಮಟ್ಟವು ಶ್ವಾಸಕೋಶಕ್ಕೆ ಹೋಗಬಹುದು ಮತ್ತು ಹೃದಯ ಬಡಿತವನ್ನು ಸಾಮಾನ್ಯಗೊಳಿಸುವ ಮೂಲಕ ಅದನ್ನು ಮತ್ತೆ ಪ್ರಾರಂಭಿಸಬಹುದು.
CPR ಗಾಗಿ ತರಬೇತಿ ನೀಡಲಾಗುತ್ತದೆ. ಇದರಿಂದ ಅನೇಕ ಜೀವಗಳನ್ನು ಉಳಿಸಬಹುದು. ಹೃದಯಾಘಾತ, ಹೈಪೋವೊಲೆಮಿಕ್ ಶಾಕ್, ಪ್ರಜ್ಞಾಹೀನ ಸ್ಥಿತಿಯಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾದ ವ್ಯಕ್ತಿಯನ್ನು ತಕ್ಷಣವೇ ಸಿಪಿಆರ್ ನೀಡಿ ರಕ್ಷಿಸಬಹುದು.