ಕೊರೋನಾ ವೈರಸ್‌ನಿಂದ ಚಿತ್ರೀಕರಣ ರದ್ದಾಗಿದ್ದು ಖ್ಯಾತ ನಿರ್ದೇಶಕ ಶೂಜಿತ್ ಸರ್ಕಾರ್‌ಗೆ 'ರೋಮ್ಯಾಂಟಿಕ್‌' ಸೀನ್‌ ಸೆರೆ ಹಿಡಿಯುವುದು ಹೇಗೆ ಎಂದು ಚಿಂತೆಯಾಗಿದೆ.

ಕೊರೋನಾ ವೈರಸ್‌ನಿಂದ ವಿಶ್ವವೇ ಲಾಕ್‌ಡೌನ್‌ ಆಗಿದೆ ಇದರ ಪರಿಣಾಮ ಚಿತ್ರೀಕರಣಕ್ಕೆ ಬ್ರೇಕ್‌ ಬಿದ್ದಿದೆ. ಸಿನಿಮಾ ತಾರೆಯರು ಫ್ಯಾಮಿಲಿ ಜೊತೆ ತಮ್ಮ ಇಷ್ಟದ ಕೆಲಸ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.

ಲಾಕ್‌ಡೌನ್‌ ಮುಗಿದ ನಂತರ ಚಿತ್ರೀಕರಣ ಶುರು ಮಾಡಬೇಕೆಂದು ನಿರ್ಧರಿಸಿರುವ ನಿರ್ದೇಶಕರೊಬ್ಬರಿಗೆ ದೊಡ್ಡ ಪ್ರಶ್ನೆಯೊಂದು ಎದುರಾಗಿದೆ. ಅದುವೇ ' ಕೊರೋನಾ ವೈರಸ್‌ ಹಾವಳಿ ಮುಗಿದ ನಂತರ ಸಿನಿಮಾ ಶೂಟಿಂಗ್‌ ಯಾವ ರೀತಿ ನಡೆಯಬಹುದು ಎನ್ನುವುದು . ಕಿಸ್ ಅಥವಾ ತಬ್ಬಿಕೊಳ್ಳುವಂತ ದೃಶ್ಯವಿದ್ದರೆ ಹೇಗೆ ಚಿತ್ರೀಕರಣ ಮಾಡಬೇಕು?' ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಕೋಟಿ ಕೋಟಿ ಸಂಪಾದಿಸುವ ನಿರ್ಮಾಪಕರು ಗಾಯಕಿಯರಿಗೆ ಸಂಭಾವನೆ ನೀಡುವುದಿಲ್ಲ; ನಿಜವೇ?

ಇದನ್ನು ಓದಿ ನಟಿ ದಿಯಾ ಮಿರ್ಜಾ ' ಗುರು ಚಿತ್ರೀಕರಣ ಮಾಡುವುದೇ ಒಂದು ಇನ್‌ಟಿಮೇಟ್‌ ಪ್ರಾಸಸ್‌. ನಟ-ನಟಿಯರು ಮಾತ್ರವಲ್ಲದೆ ತಂಡದಲ್ಲಿ ಕೆಲಸ ಮಾಡುವವರೆಲ್ಲಾ ಒಟ್ಟಾಗಿ ಇರಬೇಕು. ಅದೆಲ್ಲಾ ಹೇಗೆ ಬದಲಾಯಿಸಲು ಸಾಧ್ಯ? ನಾವು ಮಾಸ್ಕ್‌ ಧರಿಸಿಕೊಂಡು ಮಾಡುವುದಾ ? ಎಂದು ಕಾಮೆಂಟ್‌ ಮಾಡಿದ್ದಾರೆ.

View post on Instagram

ಕೊರೋನಾ ವೈರಸ್‌ನಿಂದ ಚಿತ್ರಮಂದಿರಗಳು ಮುಚ್ಚಲಾಗಿದೆ. ಕೊರೋನಾ ಸಂಪೂರ್ಣ ಮಾಯವಾದ ನಂತರ ಸಿನಿಮಾಗಳು ತೆರೆ ಕಾಣಲಿದೆ, ಕಿರುತೆರೆ ಧಾರಾವಾಹಿಗಳು ಚಿತ್ರೀಕರಣ ಶುರು ಮಾಡಲಿದ್ದಾರೆ.