ಜನರೊಂದಿಗೆ ಬೆರೆಯಲು ಕಷ್ಟ, ಥೆರಪಿ ತೆಗೆದುಕೊಳ್ಳುತ್ತಿರುವೆ: Shamita Shetty
ಸದಾ ಕ್ಯಾಮೆರಾ ಮುಂದಿರುವ ಶಮಿತಾ ಶೆಟ್ಟಿಗೆ ಜನರ ನಡುವೆ ಇರುವುದಕ್ಕೇ ಭಯ ಶುರುವಾಗಿದೆಯಂತೆ. ಫ್ಯಾಮಿಲಿ ಡಾಕ್ಟರ್ ಬಳಿ ಅಗತ್ಯ ಥೆರಪಿ ತೆಗೆದುಕೊಳ್ಳುತ್ತಿದ್ದಾರಂತೆ...
ಬಾಲಿವುಡ್ (Bollywood) ಜೀರೋ ಸೈಜ್ ಫಿಗರ್ ಶಿಲ್ಪಾ ಶೆಟ್ಟಿ (Shilpa Shetty) ತಂಗಿ ಶಮಿತಾ ಶೆಟ್ಟಿ (Samita Shetty) ಬಿಗ್ ಬಾಸ್ ಓಟಿಟಿ ಮತ್ತು ಟಿವಿ ಸೀಸನ್ 15ರಲ್ಲಿ ಸ್ಪರ್ಧಿಸಿದ ನಂತರ ಜನರನ್ನು ನೋಡಿದರೆ ಭಯ ಆಗುತ್ತಿದೆಯಂತೆ. ಅಲ್ಲಿಂದ ಓಡಿ ಹೋಗಬೇಕು ಅನಿಸುತ್ತದೆ, ಎಂದು ಖಾಸಗಿ ಸಂದರ್ಶನವೊಂದರಲ್ಲಿ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಟಿವಿ ಬಿಗ್ ಬಾಸ್ ಸೀಸನ್ 15ರಲ್ಲಿ ತುಂಬಾನೇ ಸ್ಟ್ರಾಂಗ್ ಸ್ಪರ್ಧಿಗಳು ಇದ್ದ ಕಾರಣ ವಿನ್ನರ್ ಟ್ರೋಫಿ (BB trophy) ಮತ್ತು 50 ಲಕ್ಷ ಹಣಕ್ಕೆ ದೊಡ್ಡ ಕಾಂಪಿಟೇಷನ್ ಇತ್ತು. ಈ ವೇಳೆ ಶಮಿತಾಗೆ Anxiety Level ಹೆಚ್ಚಾಗಿದೆ. ಈಗಲೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ, ಎಂದು ಸಿದ್ಧಾರ್ಥ ಕನ್ನಾ (Siddhartha Kanna) ಹೇಳಿದ್ದಾರೆ.
'ನಾನು 100% ನನ ನಾರ್ಮಲ್ ಲೈಫ್‌ಗೆ ಹಿಂದಿರುಗುವೆ. ನಿಮಗೆ ನಾನು ಹೇಳುತ್ತಿರುವುದು ಅರ್ಥವಾಗುತ್ತಿರಬೇಕು. ಏನೇ ಇದ್ದರೂ ಟೈಮ್ ಬೇಕಾಗುತ್ತದೆ. ಆದರೆ ಒಂದು ವಿಚಾರ ನಾನು ಗಮನಿಸಿರಲಿಲ್ಲ. ನನ್ನ ಸುತ್ತ ತುಂಬಾ ಜನರು ಇದ್ದರೆ, ನನಗೆ ವಿಚಿತ್ರ ಅನಿಸುತ್ತದೆ. ಅದು ನನ್ನ ಹುಟ್ಟುಹಬ್ಬದ (Birthday) ದಿನ. ಮನೆಯಿಂದ ಹೊರ ಬಂದ ಕೆಲವೇ ದಿನಕ್ಕೆ ನನ್ನ ಬರ್ತಡೇ ಇದ್ದ ಕಾರಣ ದಾರಿ ಇಲ್ಲದೆಯೇ ನಾನು ಅಲ್ಲಿಯೇ ಇರಬೇಕಾಯಿತು. ಜನರ ನಡುವೆ ಇರಲು ಆಗುತ್ತಿರಲಿಲ್ಲ...ಓಡಿ ಹೋಗಬೇಕು ಅನಿಸುತ್ತಿತ್ತು,' ಎಂದು ಶಮಿತಾ ಶೆಟ್ಟಿ ಮಾತನಾಡಿದ್ದಾರೆ.
'ಬಿಗ್ ಬಾಸ್ ಶೋ (Bigg Boss) ಒಂದು ರೀತಿ ಎಮೋಷನಲಿ ಟ್ಯಾಕ್ಸಿಂಗ್ (Emotionally taxing). ಅಲ್ಲಿಂದ ಹೊರ ಬಂದ ನಂತರ ಎಲ್ಲವನ್ನೂ ನಾರ್ಮಲ್ ಆಗಿ ನೋಡುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ನನ್ನ anxiety ಹೆಚ್ಚಾಗಿತ್ತು. ಮೊದಲೇ ನನಗೆ anxiety ಇತ್ತು. ಹೀಗಾಗಿ ಹೆಚ್ಚಿನ ಪರಿಣಾಮ ಬೀರಿರುವುದು ನನಗೆ. ನಾನು ಥೆರೆಪಿಸ್ಟ್ (Therapist) ಸಹಾಯ ಪಡೆಯುತ್ತಿರುವೆ. ಅವರು ಒಳ್ಳೆಯ ಚಿಕಿತ್ಸೆ ನೀಡುತ್ತಿದ್ದಾರೆ. ಇದೆಲ್ಲಾ ಶಾಶ್ವತವಲ್ಲ ಎಂದು ನನಗೆ ಗೊತ್ತಾಗಿದೆ,' ಎಂದು ಶಮಿತಾ ಹೇಳಿದ್ದಾರೆ.
21 ಲಕ್ಷ ಸಾಲ ತೆಗೆದುಕೊಂಡ ನಟಿ Shilpa Shetty ಮತ್ತು ಕುಟುಂಬ; ಕೋರ್ಟ್ ಸಮನ್ಸ್ ಜಾರಿ!ಬಿಗ್ ಬಾಸ್ ಸೀಸನ್ 3ರಲ್ಲಿ ಶಮಿತಾ ಸ್ಪರ್ಧಿಸಿದ್ದರು. ಸಹೋದರಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ (Raj Kundra) ಮದುವೆಯಲ್ಲಿ ಭಾಗಿಯಾಗಬೇಕೆಂದು ಅರ್ಧಕ್ಕೆ ಹೊರ ನಡೆದರು. ಓಟಿಟಿ ಮತ್ತು ಸೀಸನ್ 15 ಶಮಿತಾ ಜೀವನವನ್ನು ಬದಲಾಯಿಸಿದೆ. ರಾಕೇಶ್ ಬಾಪಟ್ (Rakesh Bapta) ಸ್ನೇಹವಾಗಿ, ಆನಂತರ ಇಬ್ಬರೂ ಪ್ರೀತಿಯಲ್ಲಿ ಬಿದ್ದಂತೆ ಎನಿಸುತ್ತಿದೆ. ಎಲ್ಲೇ ಹೋದರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಶಿಲ್ಪಾ ಮಗು ಸಮೀಷಾ ಬರ್ತಡೇಯಲ್ಲಿಯೂ ರಾಕೇಶ್, ಶಮಿತಾ ಜೊತೆಯಲ್ಲಿದ್ದರು. ಇಬ್ಬರೂ ಮಗು ಹಿಡಿದುಕೊಂಡು ಮುದ್ದಾಡುವುದನ್ನು ನೋಡಿ ನಿಮ್ಮಿಬ್ಬರಿಗೂ ಆದಷ್ಟು ಬೇಗ ಮಗುವಾಗಲಿ, ಎಂದು ನೆಟ್ಟಿಗರು ವಿಶ್ ಮಾಡುತ್ತಿದ್ದರು.