21 ಲಕ್ಷ ಸಾಲ ತೆಗೆದುಕೊಂಡ ನಟಿ Shilpa Shetty ಮತ್ತು ಕುಟುಂಬ; ಕೋರ್ಟ್ ಸಮನ್ಸ್ ಜಾರಿ!
ಒಂದಾದ ಮೇಲೊಂದು ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಿರುವ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ. ಬೇಸರ ಮಾಡಿಕೊಳ್ಳಬೇಕಾ? ಎಂದು ನೆಟ್ಟಿಗರು.
ಮಂಗಳೂರು ಹುಡುಗಿ, ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ (Shilpa Shetty) ಗ್ರಹಚಾರವೇ ಸರಿ ಇಲ್ಲ ಎಂದೆನಿಸುತ್ತದೆ. ಒಂದಾದ ಮೇಲೊಂದು ಸಮಸ್ಯೆ ಮತ್ತು ನಿಂದನೆಗಳನ್ನು ಎದುರಿಸುತ್ತಿದ್ದಾರೆ. ಬಾಡಿಗೆ ತಾಯಿ ಮೂಲಕ ಮಗು ಪಡೆದುಕೊಂಡಾಗಿಂದಲೂ ಈ ರೀತಿ ಆಗುತ್ತಿದೆ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿರುವ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುತ್ತಿದ್ದಾರೆ. ಶಿಲ್ಪಾ ಇದಕ್ಕೆಲ್ಲಾ ಕೇರ್ ಮಾಡದೇ ಇರಬಹುದು. ಆದರೆ ಶಿಲ್ಪಾನೇ ಟಾರ್ಗೇಟ್ ಆಗಲು ಕಾರಣವೇನು?
ಅಶ್ಲೀಲ ವಿಡಿಯೋ ದಂಧೆ ವಿಚಾರದಲ್ಲಿ ಪತಿ ರಾಜ್ ಕುಂದ್ರಾ (Raj Kundra) ಹೆಸರು ಕೇಳಿ ಬಂದಾಗ ಎರಡು ತಿಂಗಳ ಕಾಲ ಶಿಲ್ಪಾ ಯಾರಿಗೂ ಮುಖ ತೋರಿಸಿರಲಿಲ್ಲ. ಪತಿ ರಿಲೀಸ್ ಆಗಿ ಬಂದಾಗ, ಇವರಿಬ್ಬರ ನಡುವೆ ಇದ್ದ ಮನಸ್ತಾಪ ಸರಿ ಹೋದಮೇಲೂ ಒಟ್ಟಾಗಿ ಪ್ಯಾಪರಾಜಿಗಳ (Papparazzi) ಕಣ್ಣಿಗೆ ಕಾಣಿಸಿಕೊಂಡಿಲ್ಲ. ಈಗಲೂ ರಾಜ್ ಕ್ಯಾಮೆರಾದಿಂದ ದೂರ ಉಳಿಯುತ್ತಿರುವುದು ಸ್ಪಷ್ಟವಾಗಿ ಅರ್ಥವಾಗುತ್ತಿದೆ.
39 ಕೋಟಿ ರೂ ಆಸ್ತಿಯನ್ನು ಪತ್ನಿ Shilpa Shetty ಹೆಸರಿಗೆ ಬರೆದುಕೊಟ್ಟ Raj Kundra!ಸಮನ್ಸ್ ಕೊಟ್ಟಿದ್ದು ಯಾಕೆ?
ಮುಂಬೈನ ಜನಪ್ರಿಯ ಉದ್ಯಮಿಯೊಬ್ಬರು ಶಿಲ್ಪಾ ಶೆಟ್ಟಿ, ತಾಯಿ ಸುನಂದಾ ಶೆಟ್ಟಿ (Sunanda Shetty) ಮತ್ತು ಸಹೋದರಿ ಶಮಿತಾ ಶೆಟ್ಟಿ (Shamitha Shetty) ವಿರುದ್ಧ ದೂರು ದಾಖಲಿಸಿದ್ದಾರೆ. 21 ಲಕ್ಷ ಸಾಲ ಪಡೆದುಕೊಂಡು ಯಾವುದೇ ಬಡ್ಡಿಯನ್ನೂ ಕಟ್ಟಿಲ್ಲ. ಹಾಗೆಯೇ ಮೂಲ ಹಣವನ್ನೂ ಹಿಂದಿರುಗಿಸುತ್ತಿಲ್ಲ, ಎಂದು ಆರೋಪ ಮಾಡಿದ್ದಾರೆ. ಮುಂಬೈನ ಆಂಧೇರಿ (Andheri Court) ನ್ಯಾಯಾಲಯದಲ್ಲಿ ಈ ಪ್ರಕರಣ ಚಾಲ್ತಿಯಲ್ಲಿದ್ದು, ಈಗ ನ್ಯಾಯಾಲದವು ಶಿಲ್ಪಾ, ಸಹೋದರಿ ಮತ್ತು ತಾಯಿಗೆ ಸಮನ್ಸ್ (Summons) ಜಾರಿಗೊಳಿಸಿದೆ. ಫೆಬ್ರವರಿ 28ರ ಒಳಗೆ ಈ ಮೂವರು ನ್ಯಾಯಲಯದ ಮುಂದೆ ಹಾಜರಾಗಬೇಕು ಎಂದು ಸೂಚಿಸಿದೆ.
ಮುಂಬೈನ ಖ್ಯಾತ ಉದ್ಯಮಿ ಫರ್ಹಾದ್ ಅಮ್ರ ಅವರು ಜುಹು ಪೊಲೀಸ್ ಠಾಣೆಯಲ್ಲಿ (Juhu police) ಶಿಲ್ಪಾ ಹಾಗೂ ಕುಟುಂಬದವರ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಕಾರಣವೇನು ಅಂದ್ರೆ.....2015ರಲ್ಲಿ ಶಿಲ್ಪಾ ಶೆಟ್ಟಿ ಅವರ ತಂದೆ 21 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು. 2017ರಲ್ಲಿ ತೀರಿಸುವುದಾಗಿ ಹೇಳಿದ್ದರು. ಆದರೆ ತೀರಿಸಲಿಲ್ಲ. ಈ ಸಾಲವನ್ನು ಅವರ ಕುಟುಂಬದವರು ತೀರಿಸಬೇಕಿತ್ತು. ಎಷ್ಟು ಸಲ ಕರೆ ಮಾಡಿ ಹೇಳಿದ್ದರೂ, ತೀರಿಸಲಿಲ್ಲ. ಒಂದು ದಿನ ಕರೆ ಮಾಡಿ ನಾವು ಸಾಲ ತೀರಿಸುವುದಿಲ್ಲ ಎಂದು ಹೇಳಿ ಬಿಟ್ಟಿದ್ದಾರೆ. ಹೀಗಾಗಿ ಉದ್ಯಮಿ ಫರ್ಹಾದ್ ಶೆಟ್ಟಿ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ.
B-ಟೌನಲ್ಲಿ ಆಕೆ ಒಬ್ಬಳೇ ಪ್ರಾಮಾಣಿಕವಾದ ವ್ಯಕ್ತಿ, ಅವಳನ್ನು ಮೆಚ್ಚುತ್ತೇನೆ: Raj Kundraಶಿಲ್ಪಾ ವಿರುದ್ಧ ಕೇಳಿ ಬರುತ್ತಿರುವುದು ಇದೊಂದೇ ಆರೋಪವಲ್ಲ. ಕಳೆದ ವರ್ಷ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಅವರ ವಿರುದ್ಧ ವಂಚನೆ ಪ್ರಕರಣವೂ ದಾಖಲಾಗಿತ್ತು.ಇಬ್ಬರೂ ಜೊತೆಯಾಗಿ ಆರಂಭಿಸಿದ ಚಿನ್ನದ ಉದ್ಯಮದ (Gold Bussines) ಕುರಿತು ಯಾರೋ ಒಬ್ಬರು ದೂರು ನೀಡಿದ್ದರು. ಇದರ ಜೊತೆಗೆ ಇವರ ಫಿಟ್ನೆಸ್ ಸೆಂಟರ್ (Fitness center) ವಿರುದ್ಧವೂ ಉದ್ಯಮಿ ನಿತಿನ್ ಬರಾರಿ 1.51 ಕೋಟಿ ರೂ. ವಂಚನೆ ಪ್ರಕರಣ ದಾಖಲು ಮಾಡಿದ್ದರು. ಹಾಗೆ ದೆಹಲಿಯ ಉದ್ಯಮಿಯನ್ನು ರಾಜ್ ಮತ್ತು ಶಿಲ್ಪಾ ಒತ್ತಾಯಿಸಿ ಅವರ ಸಂಸ್ಥೆಗೆ 41.30 ಲಕ್ಷ ಹಣವನ್ನು ಹೂಡಿಕೆ ಮಾಡಿಸಿದ್ದಾರೆ, ಎಂಬ ಆರೋಪವೂ ಕೇಳಿ ಬಂದಿತ್ತು. ಸಂಸ್ಥೆಯ ಯಾವ ಕೆಲಸಕ್ಕೂ ಹಣವನ್ನು ಬಳಸಿಕೊಂಡಿಲ್ಲ. ಬದಲಿಗೆ ವೈಯಕ್ತಿಕವಾಗಿ ಖರ್ಚು ಮಾಡಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದರು.