ಬಾಲಿವುಡ್‌ ಚಿತ್ರರಂಗದ ಖ್ಯಾತ ನಿರ್ದೇಶಕಿ ಹಾಗೂ ನಟಿ ಕೊಂಕಣಾ ಸೇನ್‌ ಮತ್ತು ನಟ ರಣವೀರ್ ಶೋರೆ 2010ರಲ್ಲಿ ಪ್ರೀತಿಸಿ ಗುರು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದ ಇಬ್ಬರೂ 2020 ಫಬ್ರವರಿಯಲ್ಲಿ ವಿಚ್ಛೇದನ ಕೊರಿ ಕೋರ್ಟ್‌ ಮೆಟ್ಟಿಲೇರಿದ್ದರು, ಇದೀಗ ಅಧಿಕೃತವಾಗಿ ವಿಚ್ಛೇದನ ಪಡೆದು, ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ.

ಮದುವೆಗೂ ಮುನ್ನವೇ ಗರ್ಭಿಣಿಯಾದ ನಟಿಯರಿವರು

ದಾಂಪತ್ಯ ಜೀವನದಲ್ಲಿ ಏನಾಯ್ತು?
ಕೊಂಕಣಾ ಹಾಗೂ ರಣವೀರ್‌ ಮದುವೆಯಾದ ಒಂದೇ ವರ್ಷದಲ್ಲಿ ಪುಟ್ಟ ಕಂದಮ್ಮನನ್ನು ಬರ ಮಾಡಿಕೊಂಡಿದ್ದರು. ಬಿ-ಟೌನ್‌ ಮಂದಿಯನ್ನು ಆಹ್ವಾನಿಸಿ ಅದ್ಧೂರಿಯಾಗಿ ನಾಮಕರಣ ಮಾಡಿ, ಹರೂನ್‌ ಎಂದು ನಾಮಕರಣ ಮಾಡಿದ್ದರು. ಮದುವೆಯಾದ 5 ವರ್ಷದಲ್ಲಿಯೇ ಇಬ್ಬರೂ ದೂರವಾದರು. ಪರಸ್ಪರ ಒಪ್ಪಿಗೆ ಮೇಲೆ ಇಬ್ಬರು ವಿಚ್ಛೇದನ ಪಡೆಯಲು ಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರೀತಿಸುವ ಪ್ರಾರಂಭದಲ್ಲಿ ಕೊಂಕಣಾ ಮತ್ತು ರಣವೀರ್‌  'ಟ್ರಾಫಿಕ್', 'ಸಿಗ್ನಲ್', 'ಮಿಕ್ಸ್ಡ್‌ ಡಬಲ್ಸ್' ಸೇರಿ ಅನೇಕ  ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ. ಕೊಂಕಣಾ ವಕೀಲೆ ಅಮೃತಾ ಈ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ ಅಧಿಕೃತ ಮಾಹಿತಿ ನೀಡಿದ್ದಾರೆ. ' ಹೌದು ರಣವೀರ್‌ ಹಾಗೂ ಕೊಂಕಣಾ ವಿಚ್ಛೇದನ ಪಡೆದುಕೊಂಡಿದ್ದಾರೆ. ಇದಕ್ಕೆ ಇಬ್ಬರೂ ಪರಸ್ಪರ ಒಪ್ಪಿಗೆ ಸೂಚಿಸಿದ್ದರು. ಹಾಗೂ ಮಗನಿಗೊಸ್ಕರ ಅನೇಕ ಕೌನ್ಸೆಲಿಂಗ್‌ನಲ್ಲಿ ಭಾಗಿಯಾಗಿದ್ದರು. 8 ವರ್ಷದ ಪುತ್ರನ ಮೇಲೆ ಇಬ್ಬರಿಗೂ ಸಮಾನ ಹಕ್ಕು ಇರುವುದರಿಂದ ಇಬ್ಬರೂ ಹರೂನ್‌ನನ್ನು ನೋಡಿಕೊಳ್ಳಲಿದ್ದಾರೆ. ಇನ್ನುಳಿದ ವಿಚಾರವೂ ಅವರ ಪರ್ಸನಲ್‌ ಲೈಫ್‌' ಎಂದು ಹೇಳಿದ್ದಾರೆ.

ಮಾಜಿ ಪ್ರೇಯಸಿಯ EMI ಪೇ ಮಾಡ್ತಿದ್ದ ಸುಶಾಂತ್: ಆರೋಪಕ್ಕೆ ಅಂಕಿತಾ ಗರಂ..!

'ರಣವೀರ್ ಹಾಗೂ ನಾನೂ ದಾಂಪತ್ಯದಿಂದ ಬೇರೆಯಾಗಿದ್ದೇವೆ. ಆದರೆ, ಸ್ನೇಹಿತರಾಗಿ ಹಾಗೂ ಮಗನಗೆ ಸಹ ಪೋಷಕರಾಗಿ ಮುಂದುವರಿಯುತ್ತೇವೆ. ಬೆಂಬಲಕ್ಕಾಗಿ ಥ್ಯಾಂಕ್ಸ್,..' ಎಂದಿದ್ದಾರ ಕೊಂಕಣಾ.