ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮಾಜಿ ಗರ್ಲ್‌ಫ್ರೆಂಡ್ ಅಂಕಿತಾ ಲೋಖಂಡೆಯ EMI ಪೇ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಆರೋಪದ ಕೇಳಿ ಬಂದ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯಿಸಿದ ಸುಶಾಂತ್ ಮಾಜಿ ಗರ್ಲ್‌ಫ್ರೆಂಡ್ ಕಿರುತೆರೆ ನಟಿ ಅಂಕಿತಾ ಲೋಖಂಡೆ ತನ್ನ ಫ್ಲಾಟ್ ರಿಜಿಸ್ಟ್ರೇಷನ್ ಹಾಗೂ ಇಎಂಐ ಡಿಡಕ್ಷನ್ ದಾಖಲೆಗಳನ್ನು ಹಂಚಿಕೊಂಡಿದ್ದಾರೆ.

ಅಂಕಿತಾ ಲೋಖಂಡೆ ವಾಸಿಸುವ ಫ್ಲಾಟ್‌ನ ಇಎಂಐ ಸುಶಾಂತ್ ಕಟ್ಟುತ್ತಿದ್ದ ಎಂದು ಆರೋಪಿಸಲಾಗಿತ್ತು. ಸುಶಾಂತ್ ಸಾವಿನ ತನಿಖೆಯಲ್ಲಿ ಅಂಕಿತಾ ಸುಶಾಂತ್ ಕುಟುಂಬವನ್ನು ಬೆಂಬಲಿಸುತ್ತಲೇ ಬಂದಿದ್ದಾರೆ.

ಸುಶಾಂತ್ ಫ್ಯಾಮಿಲಿ ಬೆಂಬಲಕ್ಕೆ ನಿಂತ ನಿರ್ಭಯಾ ತಾಯಿ..!

ಇನ್‌ಸ್ಟಾಗ್ರಾಂನಲ್ಲಿ ತನ್ನ ಕುರಿತ ಆರೋಪಗಳಿಗೆ ಉತ್ತರಿಸಿದ ಅಂಕಿತಾ, ನಾನು ಇಲ್ಲಿ ಆದಷ್ಟು ಮಟ್ಟಿಗೆ ಟ್ರಾನ್ಸ್‌ಪರೆಂಟ್ ಆಗಿರಲು ಬಯಸುತ್ತೇನೆ. ನನ್ನ ಫ್ಲಾಟ್ ರಿಜಿಸ್ಟ್ರೇಷನ್ ಹಾಗೂ ಇಎಂಐ ಕಡಿತದ ದಾಖಲೆ ಇಲ್ಲಿದೆ. ಇದಕ್ಕಿಂತ ಹೆಚ್ಚು ನನಗಿನ್ನೇನು ಹೇಳುವುದಕ್ಕಿಲ್ಲ ಎಂದಿದ್ದಾರೆ.

ಅಂಕಿತಾ ವಾಸಿಸುತ್ತಿರುವ ಫ್ಲಾಟ್ ಸುಶಾಂತ್ ಹೆಸರಿನಲ್ಲಿದೆ. ಇಎಂಐ ಕೂಡಾ ಸುಶಾಂತ್ ಪೇ ಮಾಡುತ್ತಿದ್ದ ಎಂದು ಸಿಬಿಐ ಹೇಳಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ನಟಿ ಉತ್ತರಿಸಿದ್ದಾರೆ.

50 ಕೋಟಿ ಸಂಪಾದನೆ, ಹಾಲಿವುಡ್ ಪ್ರವೇಶಿಸುವ ಗುರಿ ಹೊಂದಿದ್ದ ಸುಶಾಂತ್..!

ಶ್ವೇತಾ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸುಶಾಂತ್ ಸಹೋದರಿ, ನೀನೊಬ್ಬ ಸ್ವಾವಲಂಬಿ ಹುಡುಗಿ. ನಿನ್ನ ಬಗ್ಗೆ ಹೆಮ್ಮೆ ಇದೆ ಎಂದು ಬರೆದಿದ್ದಾರೆ. ಸುಶಾಂತ್ ಗೆಳೆಯ ಮಹೇಶ್ ಶೆಟ್ಟಿ ಪ್ರತಿಕ್ರಿಯಿಸಿ, ನೀನು ನಿನ್ನನ್ನು ಸಮರ್ಥಿಸಿಕೊಳ್ಳಬೇಕಾದ ಅಗತ್ಉವಿಲ್ಲ, ನಮಗೆ ನಿನ್ನ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.

 
 
 
 
 
 
 
 
 
 
 
 
 

In continuation 🙏🏻

A post shared by Ankita Lokhande (@lokhandeankita) on Aug 14, 2020 at 11:30am PDT