Asianet Suvarna News Asianet Suvarna News

Rani Mukharji: ಅಬ್ಬಬ್ಬಾ! ನಟಿ ರಾಣಿ ಮುಖರ್ಜಿ ಬಳಿ ಇಷ್ಟೆಲ್ಲಾ ಆಸ್ತಿ ಇವೆಯಾ?

ಮಿಸೆಸ್ ಚಟರ್ಜಿ Vs ನಾರ್ವೆ ಮೂಲಕ ರೀ ಎಂಟ್ರಿ ಕೊಟ್ಟಿರುವ ನಟಿ ರಾಣಿ ಮುಖರ್ಜಿ ಎಷ್ಟು ಆಸ್ತಿಗಳ ಒಡತಿ ಗೊತ್ತಾ? 
 

Bollywood Rani Mukerji net worth living in luxurious home fond of expensive car collection
Author
First Published Apr 2, 2023, 5:24 PM IST | Last Updated Apr 2, 2023, 5:24 PM IST

ಬಂಟಿ ಔರ್ ಬಾಬ್ಲಿ 2 ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ರಾಣಿ ಮುಖರ್ಜಿ (Rani Mukharji) ಮತ್ತೊಮ್ಮೆ ಮಿಸೆಸ್ ಚಟರ್ಜಿ Vs ನಾರ್ವೆ (Mrs Chatterjee Vs Norway) ಮೂಲಕ ರೀ ಎಂಟ್ರಿ ಕೊಟ್ಟಿದ್ದು, ಚಿತ್ರ ಭರ್ಜರಿಯಾಗಿ ಓಡುತ್ತಿದೆ. ಭಾರತಕ್ಕಿಂತಲೂ ಹೆಚ್ಚಾಗಿ ನಾರ್ವೆಯಲ್ಲಿ ಈ ಚಿತ್ರ ಭರ್ಜರಿ ಕಲೆಕ್ಷನ್​ ಮಾಡುತ್ತಿದೆ. 1996 ರ ಬಂಗಾಳಿ ಚಲನಚಿತ್ರ ಬಿಯಾರ್ ಫೂಲ್‌ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿರೋ  ನಟಿ ರಾಣಿ  ಕೆಲ ದಶಕಗಳವರೆಗೆ ಬಾಲಿವುಡ್​ ಚಿತ್ರವನ್ನು ಆಳಿದವರು. 45 ವರ್ಷದ ರಾಣಿಯವರು 1997ರ ರಾಜಾ ಕಿ ಆಯೇಗಿ ಬಾರಾತ್ ಮೂಲಕ ಬಾಲಿವುಡ್​  ಪ್ರವೇಶ ಮಾಡಿದರು. ಕುಚ್ ಕುಚ್ ಹೋತಾ ಹೈ'  (1990) ಚಿತ್ರ ಇವರಿಗೆ ಬ್ರೇಕ್​ ನೀಡಿತು.  ಚಿತ್ರದ ಅಭಿನಯಕ್ಕಾಗಿ ಫಿಲ್ಮ್ ಫೇರ್​ನ (film fare) ಅತ್ಯಂತ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯನ್ನು ಪಡೆದರು. ಅವರು ನಂತರ ಅನೇಕ ಚಲನಚಿತ್ರಗಳಲ್ಲಿ ನಟಿಸಿದರೂ ಹೆಚ್ಚು ನಿರೀಕ್ಷೆಯ ಮಟ್ಟವನ್ನು ಮುಟ್ಟಲಿಲ್ಲ.

2004 ರಲ್ಲಿ ತೆರೆ ಕಂಡ  ಹಮ್ ತುಮ್  ಹಾಗೂ ವಿಮರ್ಶಾತ್ಮಕವಾಗಿ ಯಶಸ್ಸು ಕಂಡ 'ಯುವ' ಇವರ ಚಿತ್ರರಂಗದ ದಿಕ್ಕನ್ನೇ ಬದಲಿಸಿದವು. ಫಿಲ್ಮ್ ಫೇರ್ ಉತ್ಸವದಲ್ಲಿ  ಶ್ರೇಷ್ಠ ನಟಿ ಹಾಗೂ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಗಳಿಸಿದರು. ಇವರಿಗೆ ಇನ್ನಷ್ಟು ಶ್ರೇಯಸ್ಸು ತಂದುಕೊಟ್ಟ ಚಿತ್ರ ಬ್ಲ್ಯಾಕ್​. 2005ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ  ಕುರುಡಿ, ಕಿವುಡಿ ಮತ್ತು ಮೂಕ ಮಹಿಳೆಯಾಗಿ ನಟಿಸಿ  ಅನೇಕ ಪ್ರಮುಖ ಪ್ರಶಸ್ತಿಗಳನ್ನು ಗಳಿಸಿದರು. 

ಆದಿತ್ಯ ಚೋಪ್ರಾ (Aditya Chopra) ಅವರನ್ನು ಮದುವೆಯಾಗಿ ಒಂದು ಹೆಣ್ಣುಮಗುವಿನ  ತಾಯಿಯಾದಾಗಿನಿಂದ ಅವರು ಚಲನಚಿತ್ರಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದ್ದರು.  2021 ರ ಬಂಟಿ ಔರ್ ಬಬ್ಲಿ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದರೂ  ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಫ್ಲಾಪ್ ಆಯಿತು. ಆದರೆ ಇದೀಗ ‘ಮಿಸಸ್​ ಚಟರ್ಜಿ ವರ್ಸಸ್​ ನಾರ್ವೇ’ ಮೂಲಕ ರಾಣಿ ಅಬ್ಬರಿಸುತ್ತಿದ್ದಾರೆ.  ನಾರ್ವೇಯಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾಗಳ ಪೈಕಿ ವೀಕೆಂಡ್​ನಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಖ್ಯಾತಿ ಈ ಸಿನಿಮಾಕ್ಕೆ ಸೇರಿದೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ತಾಯಿಯೊಬ್ಬಳು ಆ ಮಕ್ಕಳನ್ನು ವಾಪಸ್​ ಪಡೆಯಲು ಹೋರಾಟ ನಡೆಸುವ ಕಥೆ ಇದಾಗಿದೆ.

Rani Mukharjee: 2ನೇ ಮಗು ಬೇಕಿತ್ತು, ಆದರೆ... ನೋವು ತೋಡಿಕೊಂಡ ನಟಿ

ಇಂತಿಪ್ಪ ರಾಣಿ ಮುಖರ್ಜಿ, ನಿಜ ಜೀವನದಲ್ಲಿ ಹೇಗಿದ್ದಾರೆ ಎಂದು ನೋಡಿದರೆ ಅಚ್ಚರಿಯಾಗುವುದು ಖಂಡಿತ. ಸಾಮಾನ್ಯವಾಗಿ ನಟ-ನಟಿಯರು ಐಷಾರಾಮಿ (Luxury) ಜೀವನವನ್ನೇ ಮಾಡುತ್ತಿರುತ್ತಾರೆ ಎನ್ನುವುದು ಸುಳ್ಳಲ್ಲ. ಅದೇ ರೀತಿ ರಾಣಿ ಮುಖರ್ಜಿ ಕೂಡ. ಇವರು  ಐಷಾರಾಮಿ ಕಾರುಗಳ ದೊಡ್ಡ ಕಲೆಕ್ಷನ್ ಒಡತಿ. ಕಾರಿನ ಕ್ರೇಜ್ ಇವರಿಗೆ ಹೆಚ್ಚಾಗಿದೆ. ಇಷ್ಟೇ ಅಲ್ಲದೇ ಕೋಟ್ಯಂತರ ರೂಪಾಯಿ ಬೆಲೆಬಾಳುವ ಮನೆಯನ್ನು ಹೊಂದಿದ್ದಾರೆ ಇವರು.  ಇವರ ಬಂಗಲೆಯ ಬೆಲೆ ಎಂಟು ಕೋಟಿ ರೂಪಾಯಿ ಎನ್ನಲಾಗಿದೆ. 

 ರಾಣಿ ಮುಖರ್ಜಿ ಅವರು ಚಲನಚಿತ್ರ ನಿರ್ಮಾಪಕ ಆದಿತ್ಯ ಚೋಪ್ರಾ (Aditya Chopra) ಅವರೊಂದಿಗೆ ತಮ್ಮ ವೈವಾಹಿಕ ಜೀವನವನ್ನು ಆನಂದಿಸುತ್ತಿದ್ದಾರೆ. ಅವರಿಗೆ ಒಬ್ಬಳು ಮಗಳೂ ಇದ್ದಾರೆ. ಅವರ ಮಗಳ ಹೆಸರು ಆದಿರಾ. ಮಾಧ್ಯಮ ವರದಿಗಳ ಪ್ರಕಾರ, ಮುಂಬೈನಲ್ಲಿ ನಟಿ ವಾಸಿಸುವ ಐಷಾರಾಮಿ ಮನೆ ಸುಮಾರು 8 ಕೋಟಿ ರೂ. ಬೆಲೆ ಬಾಳುತ್ತದೆ.  ಮುಂಬೈನ ಐಷಾರಾಮಿ ಪ್ರದೇಶದಲ್ಲಿ ರಾಣಿ ಮುಖರ್ಜಿ ಸುಮಾರು 7 ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್ಮೆಂಟ್ ಕೂಡ ಖರೀದಿಸಿದ್ದಾರೆ ಇವರು. ಮೊದಲೇ ಹೇಳಿದ ಹಾಗೆ ರಾಣಿ ಐಷಾರಾಮಿ ಕಾರುಗಳನ್ನು ಇಷ್ಟಪಡುತ್ತಾರೆ. ಹಾಗಾಗಿಯೇ ಆಕೆಯ ಕಾರು ಸಂಗ್ರಹವೂ ಅದ್ಭುತ. ನಟಿ ಮರ್ಸಿಡಿಸ್ ಬೆಂಜ್ ಇ ಕ್ಲಾಸ್, ಮರ್ಸಿಡಿಸ್ ಎಸ್ ಕ್ಲಾಸ್ ಮತ್ತು ಆಡಿ ಎ8 ಡಬ್ಲ್ಯು 12 ನಂತಹ ದುಬಾರಿ ಕಾರುಗಳನ್ನು ಹೊಂದಿದ್ದಾರೆ.

Rani Mukherjee: ಸಲ್ವಾರ್​ ಕಮೀಜ್​ಗೆ ಬಾತ್​ರೂಂ ಚಪ್ಪಲ್ಲಾ? ಮೇಡಂ ಏನಿದು ಅಂತಿದ್ದಾರೆ ಟ್ರೋಲಿಗರು !

ರಾಣಿ ಮುಖರ್ಜಿ ಅವರಿಗೆ ಪ್ರಸ್ತುತ 45 ವರ್ಷ. ಸಿನಿಮಾ ಮತ್ತು ಜಾಹೀರಾತುಗಳಿಂದ ನಟಿ ದೊಡ್ಡ ಮೊತ್ತವನ್ನು ಗಳಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ನಟಿ 13 ಮಿಲಿಯನ್ ಡಾಲರ್ ನಿವ್ವಳ ಆಸ್ತಿಯ ಒಡತಿ. ಅಂದರೆ ಸುಮಾರು 100 ಕೋಟಿ ರೂಪಾಯಿ.

Latest Videos
Follow Us:
Download App:
  • android
  • ios