Asianet Suvarna News Asianet Suvarna News

ಇದೇನಿದು ಬೀಚಲ್ಲಿ ಪ್ರಿಯಾಂಕಾ ಹಾಗೂ ನಿಕ್ ಈ ರೀತಿ ಪೋಸ್ ಕೊಟ್ಟಿದ್ದಾರೆ!

ಪ್ರಿಯಾಂಕಾ ನಟಿ ಅಂತ ಮಾತ್ರ ಗೊತ್ತಿತ್ತು. ಆದರೆ ನಿಕ್ ಈಗ ಆಕೆಯನ್ನು ತಿಂಡಿ ಮಾಡಿ ಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಪಿಗ್ಗಿ-ನಿಕ್ ಬೀಚ್ ಫೋಟೋ. 

Bollywood Priyanka Chopra is Nick Jonas snack share cheeky click vcs
Author
Bangalore, First Published Aug 30, 2021, 5:12 PM IST

ಬಾಲಿವುಡ್ ಸುಂದರಿ ಪ್ರಿಯಾಂಕಾ ಚೋಪ್ರಾ ಮತ್ತು ಪತಿ ಗಾಯಕ ನಿಕ್ ಜೋನಾಸ್‌ ಲಾಸ್‌ ಏಂಜಲೀಸ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಇಬ್ಬರೂ ಬಿಡುವಿನ ಸಮಯದಲ್ಲಿ ಬೀಚ್‌ ಬಳಿ ತೆರಳಿದ್ದು, ಫನ್ನಿಯಾಗಿ ಫೋಟೋ ಕ್ಲಿಕ್ ಮಾಡಿದ್ದಾರೆ.

ಬ್ಲಾಕ್ ಆ್ಯಂಡ್ ರೆಡ್ ಬಿಕಿನಿ ಧರಿಸಿ, ಬೀಚ್ ಮರಳಿನ ಮೇಲೆ ಉರಳಾಡುತ್ತಿರುವ ಪ್ರಿಯಾಂಕಾ ಕುಂಡಿ ಮೇಲೆ ಫೋರ್ಕ್ ಹಾಗೂ ಚಾಕು ಹಿಡಿದು ಪೋಸ್ ಮಾಡಿದ್ದಾರೆ ನಿಕ್. ಫೋಟೋದಲ್ಲಿ ಪ್ರಿಯಾಂಕಾ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದರೂ, ನಿಕ್ ಮಾಡುತ್ತಿರುವ ಕೆಲಸಕ್ಕೆ ಗೇಲಿ ಮಾಡಿದ್ದಾರೆ. ಪತ್ನಿ ಕುಂಡಿಯನ್ನು ಕಟ್ ಮಾಡಿಕೊಂಡು ಊಟ ಮಾಡುತ್ತಿದ್ದೀರಾ? ಇದಕ್ಕಿಂತ ರುಚಿ ಬೇರೆ ಏನೂ ಸಿಕ್ಕಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಶರ್ಟ್‌ ಇಲ್ಲದೆ ಕಾಣಿಸಿಕೊಂಡ ನಿಕ್ ನೀನು ಸಖತ್ ಹಾಟ್ ಎಂದು ಹುಡುಗಿಯರು ಕಾಮೆಂಟ್ ಮಾಡುತ್ತಿದ್ದಾರೆ.

ಪಿಗ್ಗಿ ನ್ಯೂಯಾರ್ಕ್ ರೆಸ್ಟೋರೆಂಟ್‌ ಹೊಗಳಿದ ಅನುಪಮ್ ಖೇರ್

Bollywood Priyanka Chopra is Nick Jonas snack share cheeky click vcs

ಕಳೆದ ವರ್ಷದಿಂದ ಲಂಡನ್‌ನಲ್ಲಿ ನೆಲೆಸಿರುವ ಪ್ರಿಯಾಂಕಾ ಇತ್ತೀಚಿಗೆ 'ಟೆಕ್ಸ್ಟ್ ಫಾರ್ ಯು' ಚಿತ್ರೀಕರಣ ಮುಗಿಸಿದ್ದಾರೆ. ತಮ್ಮ ಮುಂದಿನ ಚಿತ್ರ ವೈಟ್ ಟೈಗರ್ ಹಾಗೂ ವೀ ಕ್ಯಾನ್ ಬಿ ಹೀರೋಸ್‌ ಚಿತ್ರವನ್ನು ಅಲ್ಲಿಂದಲೇ ಪ್ರಮೋಟ್ ಮಾಡುತ್ತಿದ್ದಾರೆ. ಹೊಸ ಹಿಂದಿ ಸಿನಿಮಾ 'Jee le Zaraa' ಕೂಡ ಅನೌನ್ಸ್ ಮಾಡಿದ್ದಾರೆ. ಫರಾನ್ ಅಖ್ತರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್‌ ಕೂಡ ಕಾಣಿಸಿಕೊಳ್ಳಲಿದ್ದಾರೆ.

 

Follow Us:
Download App:
  • android
  • ios