ಬಾಲಿವುಡ್‌ ನಟಿಯ ನ್ಯೂಯಾರ್ಕ್ ರೆಸ್ಟೋರೆಂಟ್ ದೇಸಿ ಗರ್ಲ್ ರೆಸ್ಟೋರೆಂಟ್‌ಗೆ ಅನುಪಮ್ ಖೇರ್ ಭೇಟಿ

ಪ್ರಿಯಾಂಕಾ ಚೋಪ್ರಾ ಅವರ ನ್ಯೂಯಾರ್ಕ್ ರೆಸ್ಟೋರೆಂಟ್ ಸೋನಾಗೆ ಅನುಪಮ್ ಖೇರ್ ಭೇಟಿ ನಿಡಿದ್ದು ದೇಸಿ ಗರ್ಲ್ ರೆಸ್ಟೋರೆಂಟ್‌ನ್ನು ಪ್ರಶಂಸಿಸಿದ್ದಾರೆ. ನಟ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಭೇಟಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ಪ್ರಿಯಾಂಕಾ ಜೊತೆ ತೆಗೆದ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅವರು ಸಿಬ್ಬಂದಿ ಮತ್ತು ಶೆಫ್‌ಗಳ ಜೊತೆ ತೆಗೆದ ಫೋಟೋಗಳನ್ನು ಗುಂಪನ್ನು ಹಂಚಿಕೊಂಡರು.

ನಿಮ್ಮ ಅದ್ಭುತ ರೆಸ್ಟೋರೆಂಟ್ ನಲ್ಲಿ ಭೋಜನ ಮಾಡುವುದು ನಿಜಕ್ಕೂ ಖುಷಿಯಾಯಿತು. ಎಲ್ಲವೂ ಚೆನ್ನಾಗಿತ್ತು. ಆಹಾರ, ವಾತಾವರಣ, ಶೆಫ್ ನೇತೃತ್ವದ ಅದ್ಭುತ ಸಿಬ್ಬಂದಿ. ನೀವು ನಮಗೆ ಭಾರತೀಯರೆಂದು ಹೆಮ್ಮೆಪಡಲು ಹೆಚ್ಚಿನ ಕಾರಣ ನೀಡಿದ್ದೀರಿ ಎಂದಿದ್ದಾರೆ. ಇದನ್ನು ಮುಂದುವರಿಸಿ. ಜೈ ಹೋ! ಎಂದಿದ್ದಾರೆ.

'ಬಾಹುಬಲಿ ಅಲ್ಲ ವಡಾಪಾವ್': ಪ್ರಭಾಸ್‌ನನ್ನು ಅಂಕಲ್ ಎಂದ ನೆಟ್ಟಿಗರು

ಪ್ರಿಯಾಂಕಾ ಮಾರ್ಚ್‌ನಲ್ಲಿ ಸೋನಾ ಲಾಂಚ್ ಮಾಡುವುದಾಗಿ ಘೋಷಿಸಿದ್ದಾರೆ. ಸಾಂಕ್ರಾಮಿಕ ರೋಗದ ಮೊದಲು ಸಂಭವಿಸಿದ ಪೂಜೆಯ ಚಿತ್ರಗಳನ್ನು ಅವರು ಹಂಚಿಕೊಂಡಿದ್ದರು. ಅವರ ಪತಿ ನಿಕ್ ಜೊನಾಸ್ ಕೂಡ ಭಾಗವಹಿಸಿದ್ದರು.

View post on Instagram

ನಟಿಗೆ ಇತ್ತೀಚೆಗೆ ಸಿಟೆಡಾಲ್ ಶೂಟಿಂಗ್ ಸೆಟ್‌ನಲ್ಲಿ ಗಾಯವಾಗಿದ್ದು ರಕ್ತಸಿಕ್ತವಾದ ಮುಖದ ಪೋಟೋವನ್ನು ನಟಿ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.