ಬಾಲಿವುಡ್​ ಮೋಸ್ಟ್​ ಎಲಿಜಿಬಲ್​ ಬ್ಯಾಚ್ಯುಲರ್​ ಸಲ್ಮಾನ್​ ಖಾನ್​ ಮದ್ವೆ ಯಾವಾಗ? ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಕೊನೆಗೂ ಅಂತಿಮ ಉತ್ತರ ಹೇಳಿದ ನಟ! 

ಬಾಲಿವುಡ್​ನ ಮೋಸ್ಟ್​ ಎಲಿಜಿಬಲ್​ ಬ್ಯಾಚ್ಯುಲರ್​ ಎಂದರೆ ಅದು ಸಲ್ಮಾನ್​ ಖಾನ್​. ಬಾಲಿವುಡ್​ ಸ್ಟಾರ್ಸ್​ ಐಶ್ವರ್ಯ ರೈ ಬಚ್ಚನ್​ ಮತ್ತು ಸಲ್ಮಾನ್​ ಖಾನ್​ ಲವ್​ ಸ್ಟೋರಿ ಎಲ್ಲರಿಗೂ ತಿಳಿದದ್ದೇ. ಐಶ್ವರ್ಯ ಅವರು, ಅಭಿಷೇಕ್‌ ಬಚ್ಚನ್‌ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಸಲ್ಮಾನ್‌ ಖಾನ್‌ ಜೊತೆ ಡೇಟಿಂಗ್‌ನಲ್ಲಿ ಇದ್ದರು. ಇವರಿಬ್ಬರ ಮದುವೆ ನಡೆಯುತ್ತದೆ ಎಂದು ಭಾರಿ ಸುದ್ದಿಯಾಗಿತ್ತು. 90ರ ದಶಕದಲ್ಲಿ ಸಲ್ಮಾನ್ ಖಾನ್ (Salman Khan) ಮತ್ತು ಐಶ್ವರ್ಯಾ ರೈ (Aishwarya Rai) ಅವರ ಸಂಬಂಧ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ ಅವರ ರೊಮ್ಯಾನ್ಸ್‌ಗಿಂತ ಬ್ರೇಕಪ್‌ ಹೆಚ್ಚು ಚರ್ಚೆಯಾಗಿತ್ತು. ವಾಸ್ತವವಾಗಿ, 1999 ರಲ್ಲಿ ಬಿಡುಗಡೆಯಾದ 'ಹಮ್ ದಿಲ್ ಚುಕೆ ಸನಮ್' ಚಿತ್ರದ ಸೆಟ್‌ಗಳಲ್ಲಿ ಐಶ್ವರ್ಯಾ ಮತ್ತು ಸಲ್ಮಾನ್ ಪರಸ್ಪರ ಹತ್ತಿರವಾಗಿದ್ದರು. 2001 ರಲ್ಲಿ ಇಬ್ಬರೂ ಬೇರ್ಪಟ್ಟರು. ಇವರಿಬ್ಬರು ಬೇರ್ಪಟ್ಟಿರುವುದದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಾರೆಯಾದರೂ, ಐಶ್ವರ್ಯ ತಮಗೆ ಕೈಕೊಟ್ಟಿದ್ದಾರೆ ಎಂದು ಮೊನ್ನೆಮೊನ್ನೆಯವರೆಗೂ ಸಲ್ಮಾನ್​ ಖಾನ್​ ಪರೋಕ್ಷವಾಗಿ ಹೇಳುತ್ತಲೇ ಬಂದಿದ್ದಾರೆ. ಇದೀಗ ಸಲ್ಲು ಭಾಯಿ ಅವಿವಾಹಿತರಾಗಿಯೇ ಉಳಿದಿದ್ದರೆ, ಐಶ್ವರ್ಯ ರೈ, ಬಚ್ಚನ್​ ಕುಟುಂಬದ ಸೊಸೆಯಾಗಿ ಒಬ್ಬಳು ಮುದ್ದಾದ ಮಗಳು ಆರಾಧ್ಯಳ ಅಮ್ಮ ಕೂಡ ಆಗಿದ್ದಾರೆ.

ಒಟ್ಟಿನಲ್ಲಿ ಇನ್ನೂ ಸಲ್ಲುಭಾಯಿ ಸಿಂಗಲ್​ ಆಗಿಯೇ ಉಳಿದಿದ್ದಾರೆ. ಇವರ ವಿರುದ್ಧ ಇದಾಗಲೇ ಹಲವು ನಟಿಯರು ಲೈಂಗಿಕ ದೌರ್ಜನ್ಯದ ಆರೋಪ ಎಸಗಿದ್ದರೂ, ಕೆಲವರ ಜೊತೆ ಸಲ್ಮಾನ್​ ಖಾನ್​ ಹೆಸರು ಥಳಕು ಹಾಕಿಕೊಂಡಿದ್ದರೂ ಸಲ್ಮಾನ್​ ಮದುವೆಯಾಗದೇ ಉಳಿದಿದ್ದಾರೆ. ಆದ್ದರಿಂದ ಅವರಿಗೆ ಎಲ್ಲೇ ಹೋದರೂ ಮದುವೆಯ ವಿಷಯವನ್ನೇ ಕೆದಕಿ ಕೆದಕಿ ಕೇಳಲಾಗುತ್ತದೆ. 1965ರಲ್ಲಿ ಹುಟ್ಟಿರುವ ಸಲ್ಮಾನ್​ಗೆ ಈಗ 58 ವರ್ಷ ವಯಸ್ಸು. ಆದರೂ ಫಿಟ್​, ಫೈನ್​ ಆಗಿ ಮದುವೆಯ ಗಂಡನಂತೆಯೇ ಇದ್ದಾರೆ. ಆದ್ದರಿಂದ ಈಗಲೂ ಅವರಿಗೆ ಮದುವೆಯ ವಿಷಯ ಪದೇ ಪದೇ ಎದುರಾಗುತ್ತಲೇ ಇರುತ್ತದೆ.

ಸಲ್ಮಾನ್​ ಖಾನ್​ ಚಿತ್ರದಲ್ಲಿ ರಿಜೆಕ್ಟ್​ ಆಗಿದ್ದ 'ಜೈ ಹೋ'ಗೆ ಆಸ್ಕರ್​ ಪ್ರಶಸ್ತಿ: ಎ.ಆರ್​.ರೆಹಮಾನ್​ ಹೇಳಿದ್ದೇನು?

ಇತ್ತೀಚಿಗೆ ಇವರ ಅಣ್ಣ ಅರ್ಬಾಜ್​ ಖಾನ್​ ತಮಗಿಂತ ಅತ್ಯಂತ ಚಿಕ್ಕ ವಯಸ್ಸಿನ ಯುವತಿಯನ್ನು ಇತ್ತೀಚೆಗೆ ಮದುವೆಯಾದರು. ನಟಿ ಮಲೈಕಾ ಅರೋರಾ ಅವರಿಂದ ವಿಚ್ಛೇದನ ಪಡೆದು ಹಲವು ವರ್ಷಗಳ ಬಳಿಕ ಸರಿಸುಮಾರು ತಮ್ಮ ಮಗನ ವಯಸ್ಸಿನ ಶುರಾ ಖಾನ್​ ಅವರನ್ನು ಮದುವೆಯಾಗಿದ್ದಾರೆ. ಅದೇ ರೀತಿ ಸಲ್ಮಾನ್​ ಖಾನ್​ ಅಪ್ಪ ಸಲೀಂ ಖಾನ್​ ಅವರಿಗೂ ಎರಡು ಮದುವೆಗಳಾಗಿವೆ. ಇಬ್ಬರೂ ಪತ್ನಿಯರ ಜೊತೆ ಸಲೀಂ ಖಾನ್​ ಇದ್ದಾರೆ. ಮೊದಲಿನಾಕೆ ಸುಶೀಲಾ ಆಗಿದ್ದರೆ (ನಂತರ ಧರ್ಮ ಬದಲಾಯಿಸಲಾಯಿತು) ಎರಡನೆಯಾಕೆ ನಟಿ ಹೆಲನ್​. ಅಪ್ಪನೂ ಎರಡು ಮದ್ವೆ, ಅಣ್ಣನೂ ಎರಡು ಮದ್ವೆಯಾಗಿದ್ದರೂ ನೀವಿನ್ನೂ ಒಂದೇ ಒಂದು ಮದ್ವೆಯಾಗಿಲ್ಲ ಯಾಕೆ ಎನ್ನುವ ಪ್ರಶ್ನೆ ಸಲ್ಮಾನ್​ ಅವರಿಗೆ ಎದುರಾಗುತ್ತಲೇ ಇರುತ್ತದೆ.

ಇದೀಗ IIFA ಅವಾರ್ಡ್ಸ್ (ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್) ಗಾಗಿ ಅಬುದಾಬಿಯಲ್ಲಿದ್ದ ಸಲ್ಮಾನ್ ಖಾನ್, 2023 ರಲ್ಲಿ IIFA ರಾಕ್ಸ್ ಈವೆಂಟ್​ನಲ್ಲಿ ಪಾಲ್ಗೊಂಡಿದ್ದಾಗಲೂ ಇದೇ ಪ್ರಶ್ನೆ ಎದುರಾಗಿದೆ. ನಿಮ್ಮ ಮದುವೆ ಯಾವಾಗ ಎಂದು ಅಭಿಮಾನಿಗಳು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಸಲ್ಮಾನ್​ ಖಾನ್​, 'ನನ್ನ ಮದುವೆಯ ದಿನಗಳು ಮುಗಿದು ಹೋಗಿವೆ. ಈ ಪ್ರಶ್ನೆಯನ್ನು ನೀವು 20 ವರ್ಷಗಳ ಹಿಂದೆ ಕೇಳಿದ್ದರೆ ಹೇಳುತ್ತಿದ್ದೆ. ಆಗ ನೀವು ಭೇಟಿಯಾಗಬೇಕಿತ್ತು' ಎನ್ನುವ ಮೂಲಕ ಮದುವೆಯ ಬಗ್ಗೆ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಇನ್ನು ತಾವು ಮದುವೆಯಾಗುವುದಿಲ್ಲ ಎಂದು ನೇರಾನೇರವಾಗಿ ಹೇಳುವ ಮೂಲಕ ಮತ್ತೆ ಈ ಪ್ರಶ್ನೆ ಕೇಳಬೇಡಿ ಎಂದು ಸೂಚಿಸಿದ್ದಾರೆ. 

5 ಸಾವಿರದಿಂದ 50 ಕೋಟಿ ಒಡತಿ! ಬಾರ್​ ಗರ್ಲ್​ನಿಂದ ಬಾಲಿವುಡ್​ವರೆಗೆ... ಮಾದಕ ಚೆಲುವೆಯ ರೋಚಕ ಸ್ಟೋರಿ... ​