ನಟಿ ಕಾಂಗ್ರೆಸ್ ನಾಯಕಿ ನಗ್ಮ ಕಂಗನಾಳನ್ನು ಡ್ರಗ್ಸ್ ವಿಚಾರವಾಗಿ ಎನ್‌ಸಿಬಿ ವಿಚಾರನೆ ನಡೆಸದಿರೋ ಬಗ್ಗೆ ಪ್ರಶ್ನಿಸಿದ್ದಾರೆ. ಈ ಹಿಂದೆ ಡ್ರಗ್ಸ್ ತೆಗೆದುಕೊಂಡಿದ್ದೇನೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಒಪ್ಪಿಕೊಂಡಿದ್ರೂ ಎನ್‌ಸಿಬಿ ಅವರನ್ಯಾಕೆ ವಶಕ್ಕೆ ಪಡೆದಿಲ್ಲ ಎಂದು ನಟಿ ನಗ್ಮಾ ಪ್ರಶ್ನಿಸಿದ್ದಾರೆ.

ತನಿಖೆಯ ಪ್ರತಿ ವಿಚಾರವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡು ಎನ್‌ಸಿಬಿ ಬಾಲಿವುಡ್‌ನ್ನು ಕೆಟ್ಟದಾಗಿ ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ನಟಿ ನಗ್ಮಾ ಟ್ವೀಟ್ ಮೂಲಕ ಆರೋಪಿಸಿದ್ದಾರೆ.

ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದೆ ಎಂದು ಒಪ್ಪಿಕೊಂಡ ನಿರ್ದೇಶಕ..!

ವಾಟ್ಸಾಪ್ ಚಾಟ್ ಆಧಾರದ ಮೇಲೆ ಉಳಿದ ಬಾಲಿವುಡ್ ನಟಿಯರನ್ನು ವಿಚಾರಣೆ ನಡೆಸಬಹುದಾದ್ರೆ ಡ್ರಗ್ಸ್ ತೆಗೆದುಕೊಂಡಿದ್ದೆ ಎಂದ ಕಂಗನಾಳನ್ಯಾಕೆ ಎನ್‌ಸಿಬಿ ಅರೆಸ್ಟ್ ಮಾಡಿಲ್ಲ..? ತನಿಖೆಯ ಮಾಹಿತಿ ಎಲ್ಲ ಮಾಧ್ಯಮಗಳಿಗೆ ಹೇಳಿ ಪ್ರಸಿದ್ಧ ತಾರೆಯರ ಹೆಸರು ಹೇಳೋ ಮೂಲಕ ಬಾಲಿವುಡ್ ಹೆಸರು ಕೆಟ್ಟದಾಗಿ ಬಿಂಬಿಸಲು ಎನ್‌ಸಿಬಿ ಪ್ರಯತ್ನಿಸುತ್ತಿದೆಯಾ ಎಂದು ನಟಿ ನಗ್ಮಾ ಪ್ರಶ್ನಿಸಿದ್ದಾರೆ.

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ರಾಕುಲ್ ಪ್ರೀತ್‌ನನ್ನು ಎನ್‌ಸಿಬಿ ವಿಚಾರಣೆ ನಡೆಸಲಿದೆ ಎಂಬ ಸುದದ್ಇ ಹೊರ ಬಿದ್ದ ಬೆನ್ನಲ್ಲೇ ನಟಿ ಈ ರೀತಿ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಕಂಗನಾಗೆ ಪಾಠ ಮಾಡಿದ ಮೋಹಕ ತಾರೆ ರಮ್ಯಾ!

"