ನವದೆಹಲಿ(ಸೆ. 23)  ಬಾಲಿವುಡ್ ನ ಡ್ರಗ್ಸ್ ಘಾಟು ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು ನಟಿ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ರಾಕುಲ್ ಪ್ರೀತ್ ಸಿಂಗ್ ಅವರಿಗೆ ಎನ್‌ಸಿಬಿ ಸಮನ್ಸ್ ನೀಡಿದ್ದು ವಿಚಾರಣೆಗೆ ಹಾಜರಾಗಲು ತಿಳಿಸಿದೆ. ಮೂರು ದಿನದಲ್ಲಿ ಸೆಲೆಬ್ರಿಟಿಗಳು ಉತ್ತರ ನೀಡಬೇಕಾಗಿದೆ.

ಸುಶಾಂತ್ ಸಿಂಗ್ ಸಾವಿನ ನಂತರ  ಬಾಲಿವುಡ್ ನಲ್ಲಿ ಹುಟ್ಟಿಕೊಂಡ ಡ್ರಗ್ಸ್ ಘಾಟು ಒಬ್ಬೊಬ್ಬರಿಗೆ ಥಳಕು ಹಾಕಿಕೊಳ್ಳುತ್ತಿದೆ.  ಸುಶಾಂತ್  ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ಈಗಾಗಲೇ ವಶದಲ್ಲಿದ್ದು ಅವರಿಂದ ಅನೇಕ ಹೇಳಿಕೆ ಪಡೆದುಕೊಳ್ಳಲಾಗಿದೆ. ನೋಟಿಸ್ ನಂತರ ದೀಪಿಕಾ ಕಾನೂನು ತಜ್ಞರ ಮೊರೆ ಹೋಗಿದ್ದಾರೆ.

ಮಾಲ್ ಇದ್ಯಾ ಪ್ಲೀಸ್; ದೀಪಿಕಾ ಚಾಟ್ ಬಹಿರಂಗ

ಬಾಲಿವುಡ್ ಎರಡು ವರ್ಗವಾಗಿದ್ದು  ಡ್ರಗ್ಸ್ ಘಾಟಿನಲ್ಲಿ ದೊಡ್ಡವರ ಮಕ್ಕಳು ಇದ್ದಾರೆ ಎಲ್ಲರ ವಿಚಾರಣೆಯಾಗಬೇಕು ಎಂದು ಒಂದು ವರ್ಗ ಮೊದಲಿನಿಂದಲೂ ಒತ್ತಾಯ ಮಾಡಿಕೊಂಡೆ ಬಂದಿದೆ.  ನಿರ್ದೇಶಕ ಕರಣ್ ಜೋಹರ್ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದವರ ವಿಚಾರಣೆಯಾಗಬೇಕು ಎಂಬ ಒತ್ತಾಯವೂ ಬಂದಿತ್ತು.