Asianet Suvarna News Asianet Suvarna News

Ex- ಬಾಯ್‌ಫ್ರೆಂಡ್‌ ಜೊತೆ ಫೋಟೋ ಲೀಕ್‌; ಮಾಧ್ಯಮಕ್ಕೊಂದು ನಟಿಯ ಓಪನ್ ಲೆಟರ್!

ಮಾಧ್ಯಮಗಳಿಗೆ ಬಹಿರಂಗವಾಗಿ ಪತ್ರ ಬರೆದು, ಮನಸ್ತಾಪ ವ್ಯಕ್ತ ಪಡಿಸಿದ ಬಾಲಿವುಡ್‌ ನಟಿ. ಇದು ಕತ್ರಿನಾ- ರಣ್ಬೀರ್‌ ಹಾಟ್‌ ಲುಕ್‌ ಫೋಟೋ.....

Bollywood katrina kaif open letter to media after picture with Ex goes viral
Author
Bangalore, First Published Apr 28, 2020, 12:44 PM IST
  • Facebook
  • Twitter
  • Whatsapp

ಬಾಲಿವುಡ್‌ ಚಿತ್ರರಂಗದಲ್ಲಿ ಅತಿ ಹೆಚ್ಚು ಗಾಸಿಪ್‌ ಹಾಗೂ ಗರ್ಲ್‌ ಫ್ರೆಂಡ್‌ ಹೊಂದಿರುವ ನಟ ಅಂದ್ರೆ ರಣ್ಬೀರ್‌ ಕಪೂರ್‌. ಹಲವು ವರ್ಷಗಳಿಂದ ಆಲಿಯಾ ಭಟ್‌ನನ್ನು ಪ್ರೀತಿಸುತ್ತಿದ್ದು, 2020ರ ಕೊನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕೆಂದು ನಿರ್ಧರಿಸಿದ್ದಾರೆ, ಎನ್ನಲಾಗುತ್ತಿದೆ. ಆದಿರನ್ನೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಡೆಸ್ಟಿನೇಷನ್‌ ವೆಡ್ಡಿಂಗ್ ಪ್ಲಾನ್‌ ಮಾಡುವ ಸೆಲೆಬ್ರಿಟಿಗಳು ಕೊರೋನಾ ವೈರಸ್‌ ಹೆಬ್ಬಿರುವ ಹಿನ್ನೆಲೆಯಲ್ಲಿ ಮದುವೆಯನ್ನು ಮುಂದಿನ ವರ್ಷ ಮುಂದೂಡುವ ಸಾಧ್ಯತೆಯೂ ಇದೆ. 

6 ವರ್ಷಗಳ ಕಾಲ ರಣ್ಬೀರ್ ಕಪೂರ್‌ ಹಾಗೂ ಕತ್ರಿನಾ ಕೈಫ್‌ ಪ್ರೀತಿಸುತ್ತಿದ್ದು, ಬಾಲಿವುಡ್‌ ಕ್ಯೂಟ್‌ ಕಪಲ್‌ ಎಂದು ಕರೆಸಿಕೊಂಡಿದ್ದರು. ಈ ಜೋಡಿ ಮದುವೆಯೂ ಆಗುತ್ತೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಆದರೆ ಕಾರಣಾಂತರಗಳಿಂದ ಬ್ರೇಕ್ ಅಪ್ ಆಯಿತು. ಆ ಸಮಯದಲ್ಲಿ ಈ ಜೋಡಿ ಆಗ ಸುತ್ತಾಡಿದ ಜಾಲಿ ಟ್ರಿಪ್‌ಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್‌ ಆಗುತ್ತಿದೆ. 

ನಮ್ಮದು ಡೇಟಿಂಗ್‌ ಅಲ್ಲ, ಇದೊಂದು ಬ್ಯೂಟಿಫುಲ್‌ ಫೀಲಿಂಗ್‌; ವಿಕ್ಕಿ ಕೌಶಲ್

ಹೌದು! ರಣ್ಬೀರ್‌ ಹಾಗೂ ಕತ್ರಿನಾ ಕೈಫ್ ಪ್ರೀತಿಯಲ್ಲಿದ್ದಾಗ ಸಾಕಷ್ಟು ಸಿಕ್ರೇಟ್‌ ವಿದೇಶಿ ಟ್ರಿಪ್‌ಗಳನ್ನು ಮಾಡಿದ್ದಾರೆ. ಅದರಲ್ಲೂ ಅವರು ಸ್ಪೇನ್‌ ಟ್ರಿಪ್‌ ಹೆಚ್ಚಾಗಿ, ಗಾಸಿಪ್‌ ಕ್ರಿಯೇಟ್‌ ಮಾಡಿತ್ತು. ಸ್ಪೇನ್‌ನಲ್ಲಿ ಸೆರೆ ಹಿಡಿದ ರಣ್ಬೀರ್‌ ಹಾಗೂ ಕತ್ರಿನಾ ಇನ್ಟಿಮೇಟ್‌ ಫೋಟೋ ವೈರಲ್‌ ಆಗುತ್ತಿದ್ದಂತೆ, ಕತ್ರಿನಾ ಮನನೊಂದು ಬೇಸರ ವ್ಯಕ್ತ ಪಡಿಸಿದ್ದಾರೆ.  ಈಗಾಗಲೇ ಅನೇಕ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿಗಳೂ ಬಿತ್ತರಗೊಂಡಿವೆ. ಅದಕ್ಕೆ ನೊಂದು ಮಾಧ್ಯಮಗಳಿಗೆ ಕತ್ರೀನಾ ಓಪನ್ ಲೆಟರ್ ಬರೆದಿದ್ದಾರೆ. 

Bollywood katrina kaif open letter to media after picture with Ex goes viral

ಏನಿದೆ ಪತ್ರದಲ್ಲಿ?
'ಹಲವು ವರ್ಷಗಳ ಹಿಂದೆ ನಾನೊಬ್ಬ ವ್ಯಕ್ತಿಯೊಂದಿಗೆ ಟ್ರಿಪ್‌ ತೆರಳಿದಾಗ ನಮಗೇ ತಿಳಿಯದ ರೀತಿಯಲ್ಲಿ ಅವರವರ ಲಾಭಕ್ಕಾಗಿ ಸೆರೆ ಹಿಡಿದಿರುವ ಫೋಟೋಗಳಿವು. ಸೆಲೆಬ್ರಿಟಿಗಳ ಪ್ರೈವೇಸಿ ಲೈಫ್‌ ಬಗ್ಗೆ ತಿಳಿದುಕೊಳ್ಳಬೇಕು ನಿಜ. ಆದರೆ, ಇಂಥ ಫೋಟೋಗಳನ್ನು ಶೇರ್ ಮಾಡುವುದರಿಂದ ಮಾಧ್ಯಮ ಸಂಸ್ಥೆಗೇನು ಲಾಭ? ಗಳಿಸುವುದಾದರೂ ಏನು. ನಾನು ಮಾಧ್ಯಮಗಳ ಜೊತೆ ಉತ್ತಮ ಸಂಬಂಧ ಹೊಂದಿರುವೆ ಹಾಗೂ ಅವರ ಕರೆಗೆ ಭೇದ ಭಾವ ತೋರದೇ ಸ್ಪಂದಿಸುವೆ, ಅವರಿಗೆ ಎಲ್ಲಾ ಮಾಹಿತಿ ನೀಡಿದರೂ, ಹೀಗೆ ಮಾಡುವುದು ತಪ್ಪು...' ಎಂದು ಅಳಲು ತೋಡಿಕೊಂಡಿದ್ದಾರೆ.

ಕತ್ರಿನಾ ಕೈಫ್‌ ಸಲ್ಮಾನ್‌ ಖಾನ್‌ನನ್ನು ಪ್ರೀತಿಸುತ್ತಿದ್ದರು ಮೊದಲು. ಬ್ರೇಕಪ್‌ ಆದ 6 ವರ್ಷಗಳ ಕಾಲ ರಣ್ಬೀರ್‌ ಕಪೂರ್‌ ಜೊತೆ ಡೇಟಿಂಗ್‌, ಚಾಟಿಂಗ್‌ನಲ್ಲಿದ್ದು, ಅದಾದ ನಂತರ ಪ್ರೀತಿ ಗೀತಿ ನಮ್ಮಗಲ್ಲ ಎಂದು ದೂರ ಉಳಿದು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೊಂದೆಡೆ ರಣ್ಬೀರ್‌ ಕಪೂರ್‌ ಪ್ರೀತಿಯ ಪಟ್ಟಿ ನೋಡಿದರೆ ಶಾಕ್‌ ಆಗುತ್ತದೆ. 

ಅಷ್ಟಕ್ಕೂ ಆರ್‌ಕೆ ಜೊತೆ ರಿಲೇಷನ್‌ಶಿಪ್ಪಲ್ಲಿ ಇದ್ದೋರು..
ಕಾಲೇಜಿನ ದಿನಗಳಲ್ಲಿ ರಣ್ಬೀರ್‌ ಕಪೂರ್ ಅವಂತಿಕಾ ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಬ್ರೇಕಪ್‌ ಆದ ನಂತರ ಅವಂತಿಕಾ ಇಮ್ರಾನ್‌ರನ್ನು ಮದುವಯಾದರು. 'ಸಾವರಿಯಾ' ಚಿತ್ರದಲ್ಲಿ ಒಟ್ಟಾಗಿ ಕಾಣಿಸಿಕೊಂಡ ಸೋನಮ್‌ ಕಪೂರ್ ಹಾಗೂ ರಣ್ಬೀರ್‌ ಸಿಕ್ರೇಟ್‌ ರಿಲೇಷನ್‌ಶಿಪ್‌ನಲ್ಲಿದ್ದರು ಎನ್ನಲಾಗಿತ್ತು. ಆದರೆ ಅದನ್ನು ಎಲ್ಲಿಯೂ ಒಪ್ಪಿಕೊಂಡಿರಲಿಲ್ಲ. ಆ ನಂತರ ಕರೀಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಅವರ ಮಾಜಿ ಪತ್ನಿ ನಂದಿತಾ ಮೆಹತಾನಿಯನ್ನು ಪ್ರೀತಿಸುತ್ತಿದ್ದರು.  ತುಂಬಾ ವರ್ಷಗಳ ವಯಸ್ಸಿನ ಅಂತರವಿದ್ದ ಕಾರಣ ಇಬ್ಬರ ಮನೆಯಲ್ಲೂ ವಿರೋಧ ವ್ಯಕ್ತವಾಗಿ ಬ್ರೇಕಪ್‌ ಮಾಡಿಕೊಂಡದರು.

Bollywood katrina kaif open letter to media after picture with Ex goes viral

'RK' ಎಂದರೆ ಎಲ್ಲರಿಗೂ ಗೊತ್ತಿರುವ ವಿಚಾರವೇ- ರಣ್ಬೀರ್‌ ಹಾಗೂ ದೀಪಿಕಾ ಪಡುಕೋಣೆ ವರ್ಷಗಳ ಕಾಲ ಪ್ರೀತಿಸುತ್ತಿದ್ದರೂ, ರಣ್ಬೀರ್ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ದೀಪಿಕಾ ಬೋಲ್ಡ್‌ ಆಗಿ ತನ್ನ ಕುತ್ತಿಗೆಯ ಭಾಗದಲ್ಲಿ   'RK' ಎಂದು ಟ್ಯಾಟೋ ಹಾಕಿಸಿ ಕೊಂಡಿದ್ದರು. ಬ್ರೇಕ್‌ ಅಪ್ ಅದ ಕಾರಣ ದೀಪಿಕಾ ಟ್ಯಾಟೋವನ್ನು ಲೇಸರ್‌ ಮೂಲಕ ತೆಗೆಸಿ ಕೊಂಡಿದ್ದಾರೆ. ಅಷ್ಟೇ ಈ ಮನುಷ್ಯನ ಪ್ರೀತಿ ಕಳೆದುಕೊಂಡ ದೀಪಿಕಾ ಖಿನ್ನತೆಗೂ ಒಳಗಾಗಿದ್ದರು. ರಣ್ವೀರ್ ಸಿಂಗ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ನಂತರವೂ ದೀಪಿಕಾ ಈ ವಿಷಯವನ್ನು ಇತ್ತೀಚೆಗೆ ಹೇಳಿ ಕೊಂಡಿದ್ದರು. 

ಪಡ್ಡೆ ಹುಡುಗರ ನಿದ್ದೆಗೆಡಿಸಿದೆ ಕತ್ರಿನಾ ಬ್ಯಾಕ್‌ಲೆಸ್‌ ಪೋಸ್?

ಇನ್ನು ರಾಕ್‌ಸ್ಟಾರ್‌ ಚಿತ್ರದಲ್ಲಿ ನಟಿ ನರ್ಗಿಸ್‌ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂದು ಕೇಳಿ ಬಂದರೂ, ಎಲ್ಲಿಯೂ ಬಹಿರಂಗವಾಗಿಲ್ಲ. ಇದಾದ ಮೇಲೆ 6 ವರ್ಷಗಳ ಕಾಲ ಕತ್ರಿನಾ ಕೈಫ್‌ನನ್ನು ಪ್ರೀತಿಸಿದರು. ಆದರೆ ಸಣ್ಣ ಪುಟ್ಟ ಕಾರಣಗಳಿಂದೆ ಬ್ರೇಕಪ್‌ ಮಾಡಿಕೊಂಡು, ಸದ್ಯಕ್ಕೆ ಆಲಿಯಾ ಭಟ್‌ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕೆಂದು ನಿರ್ಧರಿಸಿದ್ದರು. ಆದರೆ ದಿನಾಂಕವಿನ್ನೂ ಫಿಕ್ಸ್ ಆಗಿಲ್ಲ. ಮದುವೆಯನ್ನು ಮುಂದೂಡುತ್ತಾರೆ ಎನ್ನುವುದು ಟಾಕ್‌ ಆಫ್‌ ದಿ ಟೌನ್‌ ಆಗಿದೆ. ಆದರೆ, ಮದುವೆ ಆಗೋವರೆಗೂ ರಣ್‌ಬೀರ್ ಯಾರನ್ನು ಮದುವೆಯಾಗುತ್ತಾರೆಂದು ಹೇಳುವುದು ಮಾತ್ರ ಕಷ್ಟವೆಂದು ಅವರ ಬ್ಯಾಕ್ ಗ್ರೌಂಡ್ ಹೇಳುತ್ತದೆ. 

Follow Us:
Download App:
  • android
  • ios