ಹೆಚ್ಚಾಗಿ ರಹಸ್ಯ ಕಾಪಾಡಲು ಮುಂದಾದಾಗ, ಕದ್ದು ಮುಚ್ಚಿ ಏನಾದರೂ ಮಾಡಲು ಹೊರಟಾಗ ವೇಗವಾಗಿ ರೂಮ​ರ್‍ಸ್ಗಳು ಹಬ್ಬಿಬಿಡುತ್ತವೆ. ಸೆಲಬ್ರಿಟಿಗಳ ವಿಚಾರದಲ್ಲಿ ಈ ರೂಮ​ರ್ಸ್‌ಗಳ ವೇಗ ಇನ್ನೂ ಹೆಚ್ಚು. ಅದು ಹಾಗಂತೆ, ಇದು ಹೀಗಂತೆ, ಅವರಿಬ್ಬರೂ ಈಗೀಗ ಜೊತೆಗೆ ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಏನಾದರೂ ಸಮ್‌ ಥಿಂಗ್‌ ಇರಲೇಬೇಕು. ಹೀಗೆ ಒಂದರ ಹಿಂದೆ ಒಂದರಂತೆ ಬಾಣಗಳ ರೀತಿ ವದಂತಿಗಳು ವರದಿಯಾಗುತ್ತಲೇ ಇರುತ್ತವೆ.

ಬಾಲಿವುಡ್ ಗುಸುಗುಸು, ಕತ್ರಿನಾ-ವಿಕ್ಕಿ ಕೌಶಲ್ ನಡುವೆ ನಡಿತಿದ್ಯಾ ಪಿಸುಪಿಸು?

ಇದೀಗ ವಿಕ್ಕಿ ಕೌಶಲ್‌ ಮತ್ತು ಕತ್ರಿನಾ ಕೈಫ್‌ ನಡುವಲ್ಲಿ ಇಂತಹದೊಂದು ವದಂತಿ ಹಬ್ಬುತ್ತಿತ್ತು. ಈಗೀಗ ಈ ಜೋಡಿ ಡೇಟಿಂಗ್‌ನಲ್ಲಿ ತೊಡಗಿದೆ ಎನ್ನುವ ಚರ್ಚೆ ಹುಟ್ಟುತ್ತಿತ್ತು. ಇದಕ್ಕೆ ಕಾರಣ ಹಲವಾರು ಬಾರಿ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವುದು, ವಿಕ್ಕಿ ಸಿನಿಮಾಗಳನ್ನು ನೋಡಿ ಔಟ್‌ಸ್ಟಾಂಡಿಂಗ್‌ ಆಗಿದೆ ಎಂದು ಕತ್ರಿನಾ ಹೇಳುವುದೆಲ್ಲವೂ ನಡೆದಿತ್ತು.

ಇದೀಗ ವಿಕ್ಕಿ ಇದಕ್ಕೆಲ್ಲಾ ಫುಲ್‌ಸ್ಟಾಪ್‌ ಇಡುವ ಪ್ರಯತ್ನ ಮಾಡಿದ್ದಾರೆ. ‘ನಮ್ಮದು ಡೇಟಿಂಗ್‌ ಅಲ್ಲ, ಇದೊಂದು ಬ್ಯೂಟಿಫುಲ್‌ ಫೀಲಿಂಗ್‌, ಜನರಿಗೆ ಸೆಲಬ್ರಿಟಿಗಳ ವೈಯಕ್ತಿಕ ಬದುಕಿನ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಸಹಜ.

ನ್ಯಾಷನಲ್ ಅವಾರ್ಡನ್ನು ಸೇನೆಗೆ ಸಲ್ಲಿಸಿದ ‘ಉರಿ’ ನಟ

ಆದರೆ ನನಗೆ ನನ್ನ ಬದುಕಿನ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಲು ಇಷ್ಟವಿಲ್ಲ. ನಾನು ಅವುಗಳನ್ನು ಸೇಫ್‌ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ. ಅಲ್ಲಿಗೆ ಒಂದು ಹಂತಕ್ಕೆ ವಿಕ್ಕಿ ಮತ್ತು ಕತ್ರಿನಾ ಡೇಟಿಂಗ್‌ ರೂಮ​ರ್‍ಸ್ಗೆ ಸಣ್ಣ ತೆರೆಯಂತೂ ಬಿದ್ದಂತಾಗಿದೆ.

News In 100 Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"