ಬಿಗ್ ಬಾಸ್‌ ರಿಯಾಲಿಟಿ ಶೋ, ತೇಜಸ್ವಿ- ಕರಣ್ ಲವ್ ಸ್ಟೋರಿ, ಶಮಿತಾ ಪವರ್ ...ಹೀಗೆ ಒಂದೊಂದೆ ವಿಚಾರಗಳ ಬಗ್ಗೆ ಮಾತನಾಡಿದ ನಟಿ ಕಾಶ್ಮೀರ ಶಾ

ಬಾಲಿವುಡ್ ಬೋಲ್ಡ್ ಆಂಡ್ ಮಾಡ್ರನ್ ನಟಿ ಕಾಶ್ಮೀರ ಶಾ ಇದೇ ಮೊದಲ ಬಾರಿಗೆ ತಮ್ಮ ಪರ್ಸನಲ್ ಜೀವನದ ಬಗ್ಗೆ ಹಂಚಿಕೊಂಡಿದ್ದಾರೆ. ಅಲ್ಲದೆ ಬಿಗ್ ಬಾಸ್ ಸೀನಸ್ 15 ರಿಯಾಲಿಟಿ ಶೋ ಹೆಸರನ್ನು ತೇಜಸ್ವಿ ಕರಣ್ ಎಂದು ಇಡಬೇಕಿತ್ತು ಹಾಗೇ ಶಮಿತಾ ಶೆಟ್ಟಿ ಎರಡನೇ ಸ್ಥಾನ ಪಡೆಯಬೇಕಿತ್ತು ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. 55 ವಯಸ್ಸಾದರೂ ಬಿಕಿನಿಯಲ್ಲಿ ಮಿಂಚುವ ನಟಿ 10 ವರ್ಷಗಳ ನಂತರ ಮದುವೆ ಡೇಟ್ ರಿವೀಲ್ ಮಾಡಿ ನನಗೆ ಮೂವರು ಗಂಡು ಮಕ್ಕಳಿದ್ದಾರೆ ಎಂದು ಹೇಳಿದ್ದಾರೆ. 

'ನಾನು ಹೆಚ್ಚಿನ ಸಂದರ್ಶನ ನೀಡುವುದಿಲ್ಲ ಏಕೆಂದರೆ ಜನರು ಪದೇ ಪದೇ ನನ್ನ ಫ್ಯಾಮಿಲಿ ಬಗ್ಗೆ ಕೇಳುತ್ತಾರೆ. ಯಾಕೆ ನಿಮ್ಮ ಕಂಡ್ರೆ ಯಾರಿಗೂ ಇಷ್ಟವಿಲ್ಲ ಫ್ಯಾಮಿಲಿ ಬಿಟ್ಟು ಬರಬೇಕು ಅಲ್ವಾ? ಅದೇ ಕೇಳುತ್ತಾರೆ. ನಾನಲ್ಲದ ವ್ಯಕ್ತಿತ್ವಕ್ಕೆ ಜನರು ಇಷ್ಟ ಪಡುತ್ತಾರೆ ನನ್ನ ವ್ಯಕ್ತಿತ್ವ ಏನಿದು ಅದನ್ನು ಹೇಟ್ ಮಾಡುತ್ತಾರೆ. ಜನ ನನ್ನ ಹೇಟ್ ಮಾಡುವಷ್ಟು ಕಾನ್ಫಿಡೆಂಟ್ ಆಗಿರುವೆ. ನಾನು 22 ವರ್ಷಕ್ಕೆ ಜರ್ನಿ ಶುರು ಮಾಡಿದೆ ಅಂದಿನಿಂದ ಇಂದಿನವರೆಗೂ ಸಪೋರ್ಟ್ ಕೊಡುತ್ತಿದ್ದಾರೆ. ಚಿತ್ರರಂಗದಲ್ಲಿ ಆಗ ಬಣ್ಣ ತಾರತಮ್ಯ ಮತ್ತು slutry ಪ್ರಪಂಚ ಶುರುವಾಗಿತ್ತು. ನಾನು ಬಿಕಿನಿ ಧಿರಿಸಿದ್ದರೆ ತುಂಬಾನೇ ಕಾನ್ಫಿಡೆಂಟ್ ಫೀಲ್ ಅಗುತ್ತದೆ. ಈ ಕಾನ್ಫಿಡೆನ್ಸ್ ಬರಲು ತುಂಬಾನೇ ಶ್ರಮ ಹಾಕಬೇಕಿದೆ' ಎಂದು ಕಾಶ್ಮೀರ ಶಾ ಇಟೈಮ್ಸ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಬಣ್ಣ ತಾರತಮ್ಯ:
'ನನ್ನ ವೃತ್ತಿ ಜೀವನದಲ್ಲಿ ನಾನು ಬಣ್ಣ ತಾರತಮ್ಯ ಫೇಸ್ ಮಾಡಿದ್ದೀನಿ. ರೋಹಿತ್ ರಾಯ್ ಅವರ ಜಾಹೀರಾತು ಚಿತ್ರೀಕರಣ ಮಾಡುತ್ತಿದ್ದರು. ಫರ್ಹಾನ್ ಖಾನ್ ಇದಕ್ಕೆ ಸಿನಿಮಾಟೋಗ್ರಫಿ ಮಾಡುತ್ತಿದ್ದರು. ನಾನು ಬಸ್‌ ಮೇಲೆ ನಿಂತು ಡ್ಯಾನ್ಸ್ ಮಾಡಬೇಕಿತ್ತು ಒಂದು ದಿನ ಚಿತ್ರೀಕರಣ ಮಾಡಿದ್ದೀನಿ. ರಾತ್ರಿ ನನಗೆ ಕಾಲ್ ಮಾಡಿ ಈ ಡ್ಯಾನ್ಸ್‌ನ ಬೇರೆ ಮಾಡಲ್ ಮಾಡುತ್ತಾಳೆ ಎಂದು ಹೇಳಿದ್ದರು. ಆಕೆ ಆಗಷ್ಟೆ ಮಾಡಲಿಂಗ್ ಜರ್ನಿ ಆರಂಭಿಸಿದ್ದಳು ನಾನು ಯಾವ ಕಾರಣಕ್ಕೆ ಬದಲಾವಣೆ ಅಗುತ್ತಿದೆ ಎಂದು ಕೇಳಿದೆ ಆಗ ನನ್ನ ಬಣ್ಣದಿಂದ ಎಂದು ಹೇಳಿದ್ದರು. ಆಗ ಅವರಿಗೆ ಹೇಳಿದೆ I shall make my dark complex as my asset ಅಂತ. ಈಗ ಆ ಕಂಪನಿಯಲ್ಲಿ ಮುಚ್ಚಿದ್ದಾರೆ. ಬಿಪಾಶ ಬಸು, ಸುಶ್ಮಿತಾ ಸೇನ್‌ ಎಲ್ಲಾ ಬಿಂದಾಸ್ ಆಗಿ ವೃತ್ತಿ ಜೀವನ ಅರಂಭಿಸಿದ್ದಾರೆ' ಎಂದು ಕಾಶ್ಮೀರ ಶಾ ಹೇಳಿದ್ದಾರೆ. 

ದಿನ ನಿನ್ನ ಒಳ ಉಡುಪು ಒಗೆಯುತ್ತೇನೆ, ಮುಜುಗರ ಆಗಲ್ವಾ; Lock upp ಶೋನಲ್ಲಿ ಏನಾಗುತ್ತಿದೆ?

ಫ್ಯಾಮಿಲಿ:
'ನನ್ನ ಪತಿ ಕೃಷ್ಣ ಅಭಿಷೇಕ್‌ಗಿಂತ ನಾನು ಮಕ್ಕಳ ಜೊತೆ ತುಂಬಾನೇ ಸ್ಟ್ರಿಕ್ಟ್ ಆಗಿರುವೆ. ನನ್ನ ಮೂರು ಗಂಡು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು. ನನ್ನ ಜವಾಬ್ದಾರಿಯಾಗಿ ಅವರನ್ನು ನೋಡಿಕೊಳ್ಳಬೇಕು. ಯಾರೂ ಬೆರಳು ತೋರಿಸಿ ತಪ್ಪು ಮಾಡಿದ್ದಾರೆ ಎಂದು ಹೇಳಬಾರದು' ಎಂದಿದ್ದಾರೆ. 

#Happybirthday ಅನುಪಮಾ ಗೌಡ, ನಿರೂಪಕಿಯ ಮೂಗುತಿ ಕಲೆಕ್ಷನ್‌ಗಳು ನೋಡಿ...

ಬಿಗ್ ಬಾಸ್: 
'ಆರಂಭದಿಂದಲ್ಲೂ ಬಿಗ್ ಬಾಸ್ ಸೀಸನ್ 15 ನೋಡುತ್ತಿರುವೆ. ನಾನು ತೇಜಸ್ವಿ ಗೆಲ್ಲಬೇಕು ಎಂದು ಆಕೆಗೆ ಸಪೋರ್ಟ್ ಮಾಡಿದೆ. ಯಾವ ಕಾರಣಕ್ಕೆ ಶಮಿತಾಗೆ ಎರಡನೇ ಸ್ಥಾನ ಸಿಕ್ಕಿಲ್ಲ ಗೊತ್ತಿಲ್ಲ. ಆರಂಭದಲ್ಲಿ ತೇಜಸ್ವಿ ಚೆನ್ನಾಗಿ ಶುರು ಮಾಡಿದ್ದರು ಆದರೆ ಕರಣ್ ಮಧ್ಯೆ ಗ್ರಿಪ್‌ ಕಳೆದುಕೊಂಡರು. ಬಿಗ್ ಬಾಸ್ ಶೋ ಬದಲು ತೇಜ್ ಕರಣ ಶೋ ಎಂದು ನಾಮಕರಣ ಮಾಡಬೇಕಿತ್ತು. ಅಷ್ಟರ ಮಟ್ಟಕ್ಕೆ ಅವರನ್ನು ತೋರಿಸಿದ್ದಾರೆ. ಏಕ್ತಾ ಕಪೂರ್ ಮತ್ತು ಕಂಗನಾ ಲಾಕಪ್‌ ಶೋ ಚೆನ್ನಾಗಿದೆ. ತೇಜಸ್ವಿ ಒಂದು ದಿನ ಶಮಿತಾ ವಯಸ್ಸಿನ ಬಗ್ಗೆ ಮಾತನಾಡುತ್ತಾಳೆ. ಒಂದು ಹೆಣ್ಣು ಮತ್ತೊಂದು ಹೆಣ್ಣಿನ ಬಗ್ಗೆ ಈ ರೀತಿ ಮಾತನಾಡಬಾರದು' ಎಂದು ಕಾಶ್ಮೀರ ಶಾ ಮಾತನಾಡಿದ್ದಾರೆ.