ದಿನ ನಿನ್ನ ಒಳ ಉಡುಪು ಒಗೆಯುತ್ತೇನೆ, ಮುಜುಗರ ಆಗಲ್ವಾ; Lock upp ಶೋನಲ್ಲಿ ಏನಾಗುತ್ತಿದೆ?
ಇಡೀ ಮನೆ ನೋಡುವಂತೆ ಕಿತ್ತಾಡಿದ ಪಾಯಲ್ ರೋಹಟಗಿ ಮತ್ತು ಸಿದ್ಧಾರ್ಥ್ ಶರ್ಮಾ.
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಿಗೆ ನೀಡುವ ಟಾಸ್ಕ್ ಬಗ್ಗೆ ಈಗಾಗಲೆ ವೀಕ್ಷಕರಿಗೆ ಒಂದು ರೀತಿ ಐಡಿಯಾ ಇದೆ ಅದರೆ ಲಾಕಪ್ ಶೋನಲ್ಲಿ ಏಕ್ತಾ ಕಪೂರ್ ಮತ್ತು ಕಂಗನಾ ಮೈಂಡ್ ಗೇಮ್ ಆಡುತ್ತಿದ್ದಾರ ಅಥವಾ ಫಿಸಿಕಲ್ ಗೇಮಾ? ಎಂಬ ಕ್ಲಾರಿಟಿ ಜನರಿಗೆ ಇನ್ನೂ ಸಿಕ್ಕಿಲ್ಲ. ಪ್ರಸಾರವಾಗುವ ಎಪಿಸೋಡ್‌ನಲ್ಲಿ ಒಂದಾದರೂ ಜಗಳ, ಕಾಂಟ್ರವರ್ಸಿ ಇದ್ದೇ ಇರುತ್ತದೆ. ಈಗ ಪ್ರಸಾರವಾಗುತ್ತಿರುವ ಎಪಿಸೋಡ್‌ನಲ್ಲಿ ಬೆಸ್ಟ್ ಫ್ರೆಂಡ್ ಆಗಿದ್ದ ಪಾಯಲ್ ರೋಹಟಗಿ ಮತ್ತು ಸಿದ್ಧಾರ್ಥ್ ಶರ್ಮಾ ನಡುವೆ ಮಾತಿನ ಚಕಾಮಕಿ ನಡೆದಿದೆ.
ಇಲ್ಲಿ ಆರೇಂಜ್ ಮತ್ತು ಬ್ಲೂ ಎರಡು ತಂಡಗಳನ್ನು ಮಾಡಲಾಗಿತ್ತು. ಆರೇಂಜ್ ತಂಡಕ್ಕೆ ಪಾಯಲ್ ರೋಹಟಗಿ ಲೀಡರ್ ಆಗಿದ್ದು ತಂಡಕ್ಕೆ ಸ್ನೇಹಿತ ಸಿದ್ಧಾರ್ಥ್ ಬೇಕು ಎಂದು ಕರೆದುಕೊಂಡರು. ಅರಿಶಿಣ ಪುಡಿ, ಧನಿಯಾ ಪುಡಿ ಮತ್ತು chilli flakes ಮಾಡುವ ಟಾಸ್ಕ್ ನೀಡಲಾಗಿದ್ದು ಬ್ಲೂ ಟೀಂ ಜಯಶಾಲಿ ಆಗಿದ್ದಾರೆ. ನಾವು ಸೋಲುವುದಕ್ಕೆ ಸಿದ್ಧಾರ್ಥ್ ಕಾರಣ ಎಂದು ಪಾಯಲ್ ಪದೇ ಪದೇ ಹೇಳುತ್ತಿರುವುದಕ್ಕೆ ದೊಡ್ಡ ಜಗಳ ಶುರುವಾಗಿದೆ.
'ಈ ಟಾಸ್ಕ್ ಮಾಡುವಾಗ ಸಿದ್ಧಾರ್ಥ್ ತುಂಬಾನೇ ಸುಸ್ತಾದರು ಅಲ್ಲದೆ ಎರಡು ಸಲ ಮಾಸ್ಕ್ ಬದಲಾಯಿಸಿಕೊಂಡು ಬರುವುದಕ್ಕೆ ಹೋದರು ನಾವು ಬ್ರೇಕ್ ತೆಗೆದುಕೊಂಡ ಸಮಯದಲ್ಲಿ ಬ್ಲೂ ಟೀಂ ಕೆಲಸ ಮಾಡಿ ವಿನ್ನರ್ ಆದರು ಹೀಗಾಗಿ ನಾವು ಸೋಲುವುದಕ್ಕೆ ಸಿದ್ಧಾರ್ಥ್ ಶರ್ಮಾ ಕಾರಣ' ಎಂದು ಪಾಯಲ್ ಹೇಳಿದ್ದಾರೆ. ಪ್ರತಿ ಸಲವೂ ಸಿದ್ಧಾರ್ಥ್‌ಗೆ ಪಾಯಲ್ ಮಾತನಾಡುವ ಶೈಲಿ ಇಷ್ಟವಾಗುವುದಿಲ್ಲವಂತೆ. ಟಾಸ್ಕ್ ಇದ್ದಾಗ ಒಂದು ರೀತಿ ಇಲ್ಲದಿದ್ದಾಗ ಒಂದು ರೀತಿ ವರ್ತಿಸುತ್ತಾಳೆ ಎಂದಿದ್ದಾರೆ.
Kangana Controversy: ರಿಯಾಲಿಟಿ ಷೋ 'ಲಾಕ್ ಅಪ್'ಗೆ ಹೈದರಾಬಾದ್ ಕೋರ್ಟ್ ತಡೆಯಾಜ್ಞೆ'ನನಗೆ ಸರಿಯಾದ ರೀತಿಯಲ್ಲಿ ನೀನು ಸೂಚನೆ ಕೊಟ್ಟಿದ್ದರೆ ಈ ರೀತಿ ಆಗುತ್ತಿರಲಿಲ್ಲ. ನೀನು ಏನೋ ಒಂದು ರೀತಿ irritationನಲ್ಲಿ ಮಾತನಾಡುತ್ತೀಯಾ ಅದು ನನಗೆ ಅಗಿ ಬರೋಲ್ಲ' ಎಂದು ಸಿದ್ಧಾರ್ಥ್ ಹೇಳಿದ್ದಾರೆ. 'ಟಾಸ್ಕ್ ನಡೆಯುವಾಗ ನಾನು ಹೇಗೆ ಮಾತನಾಡಬೇಕು? ನಿನ್ನ ಪದೇ ಪದೇ ಸಿದ್ಧಾರ್ಥ್ ಜೀ ಸಿದ್ಧಾರ್ಥ್ ಜೀ ಎಂದು ಮಾತನಾಡಿಸಬೇಕಾ? ನಿನಗೆ ಅವಮಾನ ಮಾಡಿರುವ ರೀತಿ ವರ್ತಿಸಿದ್ದೀನಿ ಅಂತ ಸುಳ್ಳು ಹೇಳಬೇಡ' ಎಂದು ಪಾಯಲ್ ಕೋಪ ಮಾಡಿಕೊಂಡಿದ್ದಾರೆ.
ಟಾಸ್ಕ್ ಮಾಡುವಾಗ ಪಾಯಲ್ ಪದೇ ಪದೇ ಸಿದ್ಧಾರ್ಥ್ ಔಟ್ ಸಿದ್ಧಾರ್ಥ್ ಔಟ್ ಎಂದು ಹೇಳುತ್ತಿದ್ದರು ಹೊರ ನಡೆಯದ ಕಾರಣ ಪಾಯಲ್ ಮತ್ತು ಸಿದ್ದು ನಡುವೆ ಫ್ರೆಂಡ್‌ಶಿಪ್ ಬ್ರೇಕ್ ಆಗಿದೆ. 'ನಿನಗೆ ನಾನು ಹೇಗೆ ಅರ್ಥ ಮಾಡಿಸಲಿ? ನಮ್ಮ ತಂಡದಲ್ಲಿ ಇರುವುದು ಕೇವಲ ನಾಲ್ಕು ಜನ ನಿನ್ನಿಂದ ನಾವು ಕೂಡ ಡಿಸ್ ಕ್ವಾಲಿಫೈ ಆಗಬೇಕು. ದಿನ ನಾನು ನಿನ್ನ ಅಂಡರ್‌ಗಾರ್ಮೆಂಟ್ ಒಗೆಯುತ್ತೇನೆ ಟಾಸ್ಕ್ ನಡುವೆ ಔಟ್ ಅಂತ ಹೇಳಿದಕ್ಕೆ ನೀನು ಇಷ್ಟು ಧಿಮಾಕ್ ಮಾಡುತ್ತಿದ್ದೀಯಾ. ಬಾತ್‌ರೂಮ್ ಕೆಲಸದಿಂದಲ್ಲೂ ನಿನ್ನನ್ನು ಪಾರು ಮಾಡಿದ್ದೀನಿ ಶಿವಂ ಜೊತೆ ಜಗಳ ಆಡಿದ್ದೀನಿ' ಎಂದು ಪಾಯಲ್ ಹೇಳುತ್ತಾರೆ.
ಬಿಟ್ಟೋದ್ ಗಂಡ ಎದುರು ಬಂದಾಗ ಕಷ್ಟ, ಒಟ್ಟಿಗೆ ಇದ್ದರೆ ಹಿಂಸೆ; Lockupp ಸಾರಾ ಖಾನ್ ಮಾತು!'ನನ್ನ ಒಳ ಉಡುಪು ಒಡೆಯುವುದಕ್ಕೆ ನಾನು ನಿನಗೆ ಹೇಳಿಲ್ಲ ನನಗೆ ಯಾವ ರೀತಿ ರಕ್ಷಣೆ ಬೇಕಿಲ್ಲ. ನನ್ನನ್ನು ನಾನು ಪ್ರೊಟೆಕ್ಟ್ ಮಾಡಿಕೊಳ್ಳಬಹುದು. ನೀನು ಏನು ಹೇಳುತ್ತಿರುವೆ ನಿನಗೆ ಅರ್ಥ ಆಗುವುದಿಲ್ಲ ಒಂದು ಹೇಳಿಕೆ ಕೊಟ್ಟು ಅದೇ ನಿಜ ಎನ್ನುವ ರೀತಿಯಲ್ಲಿ ವರ್ತಿಸುತ್ತೀಯಾ ಆದರೆ ಅದು ಏನು ಎಂದು ಅರ್ಥ ಮಾಡಿಕೊಳ್ಳುವುದಿಲ್ಲ. ಯಾರಾದರೂ ಪ್ರಶ್ನೆ ಮಾಡಿದ್ದರೆ ನಿನ್ನ ರೀತಿಯಲ್ಲಿ ಉತ್ತರ ಕೊಡುತ್ತೀಯಾ. ನಾನು ಟಾಸ್ಕ್ ಮಾಡುವಾಗ ಸೂಪರ್ ಫೈನ್ ಆಗಿದ್ದೆ ಆದರೆ ನೀನು ನನ್ನ ಬಗ್ಗೆ ಆಪಾದನೆ ಮಾಡಿರುವೆ' ಎಂದು ಸಿದ್ಧಾರ್ಥ್ ಹೇಳಿದ್ದಾರೆ.
'ಟಾಸ್ಕ್ ಮಾಡುವಾಗ ನಿನಗೆ ಸುಸ್ತು ಆಯ್ತು ಅಂತ ನಾನು ನೋಡಿದ್ದೀನಿ ಲೀಡರ್ ಆಗಿ ನಾನು ಏನು ಹೇಳಬೇಕು ಅದನ್ನೇ ಹೇಳಿದ್ದೀನಿ. ನಾಳೆ ಮತ್ತೊಬ್ಬ ಲೀಡರ್ ಬಂದು ಹೊಸ ರೂಲ್ಸ್ ಹೇಳುತ್ತಾರೆ ಆಗ ಏನು ಮಾಡ್ತೀಯಾ? ನೀನು ದಿನಕ್ಕೆ ಅಷ್ಟೋಂದು ಪ್ರೋಟಿನ್ ತಿನ್ನುತ್ತಿದ್ದರೂ ಸುಸ್ತಾಗುತ್ತಿದೆ ಅಂದರೆ ಉಪಯೋಗ ಎನು' ಎಂದು ಪಾಯಲ್ ಸಿಟ್ಟು ಮಾಡಿಕೊಂಡು ಸಿದ್ಧಾರ್ಥ್ ಜೊತೆ ಮಾತು ಬಿಟ್ಟಿದ್ದಾರೆ.