ಬಾಲಿವುಡ್ ಖ್ಯಾತ ನಿರ್ದೇಶಕ ಕರಣ ಜೋಹಾರ್ ನಿರ್ಮಾಣ ಸಂಸ್ಥೆ ' ಧರ್ಮಾ ಪ್ರೋಡಕ್ಷನ್‌' ಸದ್ಯಕ್ಕೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ದೀಪಿಕಾ ಪಡುಕೋಣೆ ಹಾಗೂ ಶಕುನ್ ಬಾತ್ರ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಮುಂದಿನ ಚಿತ್ರವನ್ನು ಗೋವಾದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಸೆಟ್‌ನಲ್ಲಿ ಬಳಸಿರುವ ಪ್ಲಾಸ್ಟಿಕ್ ಹಾಗೂ ಪಿಪಿ ಕಿಟ್‌ಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ. ಇದನ್ನು ವಿರೋಧಿಸಿ ಬಾಲಿವುಡ್ ಕ್ವೀನ್ ಕಂಗನಾ ಟ್ಟೀಟ್ ಮಾಡಿದ್ದಾರೆ.

'ನಾವು ತುಳಸಿ ಬೆಳೀತಿವಿ, ಗಾಂಜಾವನ್ನಲ್ಲ: ಆಹಾರ ಹುಡುಕಿಕೊಂಡು ಬಂದವರು ನೀವು' 

ಟ್ಟಿಟರ್‌ ಬಳಕೆದಾರನೊಬ್ಬ ಬರೆದ ಸಾಲುಗಳಿಗೆ ಕಂಗನಾ ಉತ್ತರಿಸಿದ್ದಾರೆ. 'ಅಪ್ಪಿತಪ್ಪಿಯೂ ದೀಪಿಕಾ ಅಥವಾ ಕರಣ್ ಜೋಹಾರ್ ಪರಿಸರದ ಬಗ್ಗೆ ಏನಾದರೂ ಹೇಳಿದರೆ ಅವರಿಗೆ ಅವರು ಗೋವಾದಲ್ಲಿ ಮಾಡಿರುವ ಕೆಲಸವನ್ನು ಜ್ಞಾಪಿಸಿ. ಬಯೋ ಮೆಡಿಕಲ್ ವೇಸ್ಟ್‌ಗಳನ್ನು ಪರಿಸರದ ನಡುವೆ ಎಸೆದಿದ್ದಾರೆ. ಅವರಿಗೆ ದೊಡ್ಡ ಮೊತ್ತದಲ್ಲಿ ದಂಡ ವಿಧಿಸಬೇಕು,' ಎಂದು ಆಗ್ರಹಿಸಿದ್ದಾರೆ. ಈ ಟ್ಟೀಟ್‌ಗೆ ನಟಿ ಕಂಗನಾ ರೆಸ್ಪಾಂಡ್ ಮಾಡಿದ್ದಾರೆ.

ಕಂಗನಾ ರೆಸ್ಪಾನ್ಸ್:
'ಸಿನಿಮಾ ಇಂಡಸ್ಟ್ರಿಯೇ ನೈತಿಕತೆ, ಸಂಸ್ಕೃತಿ ಮಾತ್ರವಲ್ಲದೇ ನಮ್ಮ ಪರಿಸರವನ್ನೂ ನಾಶ ಮಾಡಲು ಮುಂದಾಗಿದೆ. ಪರಿಸರ ಸಚಿವ ಪ್ರಕಾಶ್ ಅವರೇ, ದೊಡ್ಡ ನಿರ್ಮಾಣ ಸಂಸ್ಥೆಯ ಅಸಡ್ಡೆ, ಬೇಜವಾಬ್ದಾರಿತನವನ್ನು ನೋಡಿ. ದಯವಿಟ್ಟು ನಮ್ಮ ಪರಿಸರವನ್ನು ಕಾಪಾಡಿ,' ಎಂದು ಕಂಗನಾ ಟ್ಟೀಟ್ ಮಾಡಿದ್ದಾರೆ.

ಪಪ್ಪು ಸೇನೆ ನನ್ನ ಮನೆ ಒಡೆಯಬಹುದು, ಉತ್ಸಾಹವನ್ನಲ್ಲ: ಸಂಜಯ್ ರಾವತ್‌ಗೆ ಕಂಗನಾ ಟಾಂಗ್

ವಿಚಾರ ಗಂಭೀರವಾಗುತ್ತಿದ್ದಂತೆ ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ಪ್ರತಿಕ್ರಿಯಿಸಿದ್ದಾರೆ. 'ಈ ರೀತಿ ಕಸ ಎಸೆಯುವುದು ಸರಿ ಅಲ್ಲ. ನಾವು ಶೂಟಿಂಗ್ ಮಾಡಲು ಅನುಮತಿ ನೀಡಿದ್ದೆವು. ಅದರ ಜೊತೆಗೆ ತಪ್ಪದೇ ಪಾಲಿಸಬೇಕಾದ ನಿಯಮಗಳನ್ನು ಹೇಳಲಾಗಿತ್ತು,' ಎಂದು ಹೇಳಿದ್ದಾರೆ.

 

ಧರ್ಮ ಸಂಸ್ಥೆಯ ಕಾರ್ಮಿಕರು ಮಾಡಿರುವ ಕೆಲಸದಿಂದ ಕರಣ್‌ ಮಾತ್ರವಲ್ಲದೇ ದೀಪಿಕಾ ಪಡುಕೋಣೆಯೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಕಸಿನ್ ಮದ್ವೆಗೆ ಕಾಸ್ಟ್ಲಿ ಲೆಹಂಗಾ..! ಕ್ವೀನ್ ಅಂತ ಪ್ರೂವ್ ಮಾಡಿದ್ರು ನಟಿ ಕಂಗನಾ

ನಟ ಸುಶಾಂತ್ ರಜಪೂತ್ ಸಿಂಗ್ ಆತ್ಮಹತ್ಯೆಗೆ ಶರಣಾದಾಗಿನಿಂದಲೂ ಕಂಗನಾ, ಕರಣ್ ಜೋಹಾರ್ ವಿರುದ್ಧ ಹರಿ ಹಾಯುತ್ತಲೇ ಇದ್ದಾರೆ. ಬಾಲಿವುಡ್ ನೆಪೋಟಿಸಂ, ಮಾಫಿಯಾ ಬಗ್ಗೆ ಧ್ವನಿ ಎತ್ತಿದ್ದು, ಕರಣ್ ಜೋಹಾರ್ ಹಾಗೂ ಕೆಲವು ಬಾಲಿವುಡ್ ನಟ, ನಟಿಯರ ವಿರುದ್ಧ ಹರಿಹಾಯುತ್ತಿದ್ದಾರೆ.